3 Yoga: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವೇಳೆ ರೂಪುಗೊಳ್ಳುವ ರಾಜಯೋಗ: ಈ ರಾಶಿಯವರಿಗೆ ಶ್ರೀರಾಮನ ಅಶೀರ್ವಾದ!

ಉತ್ತರಪ್ರದೇಶದ ಅಯೋಧ್ಯೆಯಲ್ಲಿಂದು ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಹಲವು ವರ್ಷಗಳ ವಿವಾದಗಳ ನಂತರ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ದೇವಾಲಯವು ಉದ್ಘಾಟನೆಗೊಳ್ಳುತ್ತಿದೆ. ಗುರ್ಭಗುಡಿಯಲ್ಲಿ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸುವುದನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ.

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಪ್ರಕಾರ, ಶ್ರೀರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆಯನ್ನು 2024ರ ಜನವರಿ 22 ರಂದು ಅಂದರೆ ಇಂದು ಮಧ್ಯಾಹ್ನ 12:15 ರಿಂದ 12:45 ರವರೆಗೆ ನಡೆಯಲಿದೆ. ಈ ದಿನ ಅನೇಕ ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ. ಸರ್ವಾರ್ಥ ಸಿದ್ಧಿ, ಅಮೃತ ಸಿದ್ಧಿ ಮತ್ತು ರವಿಯೋಗ ಈ ದಿನ ರೂಪಗೊಳ್ಳುತ್ತವೆ.

how the consecration day of ram mandir inauguration will affect your zodiac sign in kannada

ಮೃಗಶಿರಾ ನಕ್ಷತ್ರ ಈ ದಿನದ ವೈಭವವನ್ನು ಹೆಚ್ಚಿಸುತ್ತದೆ. ಅಲ್ಲದೆ ಚಂದ್ರನು ವೃಷಭ ರಾಶಿಯಲ್ಲಿ ಉಳಿಯುತ್ತಾನೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ 41 ವರ್ಷಗಳ ನಂತರ ಬರುವ ವಿಷ್ಣು ಮುಹೂರ್ತವು ಅತ್ಯಂತ ಮಂಗಳಕರ ಯೋಗವಾಗಿದೆ. ಈ ದಿನ 12 ರಾಶಿಚಕ್ರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.

ಮೇಷ ರಾಶಿ

ಮೇಷ ರಾಶಿ

ಅಯೋಧ್ಯೆಯಲ್ಲಿಂದು ರಾಮಮಂದಿರ ಉದ್ಘಾಟನೆಯಾಗಲಿದ್ದು, ಸರ್ವಾರ್ಥ ಸಿದ್ಧಿ, ಅಮೃತ ಸಿದ್ಧಿ ಮತ್ತು ರವಿಯೋಗ ರೂಪಗೊಳ್ಳಲಿವೆ. ಈ ದಿನ ಮೇಷ ರಾಶಿಯವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಕೆಲವು ಉತ್ತಮ ಯಶಸ್ಸನ್ನು ಸಹ ನೀವು ನೋಡುತ್ತೀರಿ. ಜಂಟಿ ಉದ್ಯಮದಲ್ಲಿ ತೊಡಗಿರುವವರು ಈ ದಿನ ಲಾಭ ಪಡೆಯುವ ಸಾಧ್ಯತೆ ಇದೆ. ಅಲ್ಲದೆ ಗ್ರಹಗಳ ಸ್ಥಾನವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ವೃಷಭ ರಾಶಿ

ವೃಷಭ ರಾಶಿ

ಸರ್ವಾರ್ಥ ಸಿದ್ಧಿ, ಅಮೃತ ಸಿದ್ಧಿ ಮತ್ತು ರವಿಯೋಗದಿಂದಾಗಿ ಈ ದಿನ ವೃಷಭ ರಾಶಿಯ ಉದ್ಯಮಿಗಳು ಯಶಸ್ವಿಯಾಗುತ್ತಾರೆ. ಅನೇಕ ಯದ್ಯೋಗ ಅವಕಾಶಗಳು ಸಹ ನೀವು ಪಡೆಯುತ್ತೀರಿ. ಈ ರಾಶಿಯವರು ವೃತ್ತಿ ಸಂಬಂಧಿತ ಅನೇಕ ಅವಕಾಶಗಳನ್ನು ಸಹ ಪಡೆಯುತ್ತಾರೆ. ಈ ದಿನ ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ವೃಷಭ ರಾಶಿಯವರಿಗೆ ಶ್ರೀರಾಮನ ಆಶೀರ್ವಾದ ಲಭವಿಸಲಿದೆ. ಅದೃಷ್ಟ ಮನೆ ಬಾಗಿಲಿಗೆ ಬರಲಿದೆ. ಇದು ನಿಮ್ಮ ಕೆಲಸದಲ್ಲಿನ ಯಶಸ್ಸಿಗೆ ಕಾರಣವಾಗುತ್ತದೆ. ಮಾತ್ರವಲ್ಲದೆ ಈ ರಾಶಿಚಕ್ರದವರು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ.

ಮಿಥುನ ರಾಶಿ

ಮಿಥುನ ರಾಶಿ

ನೀವು ಇಂದು ಆಧ್ಯಾತ್ಮಿಕ ಮತ್ತು ದಾನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತೀರಿ. ಇದರಿಂದ ನಿಮಗೆ ಶ್ರೀರಾಮನ ಆಶೀರ್ವಾದ ಲಭಿಸಲಿದೆ. ನೀವು ಕೆಲಸ ಮಾಡುವ ಯಾವುದೇ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ಈ ದಿನ ಉದ್ಯೋಗಸ್ಥರಿಗೆ ಅನೇಕ ಉಡುಗೊರೆಗಳೊಂದಿಗೆ ಕಚೇರಿಗಳಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

 ಕರ್ಕಾಟಕ ರಾಶಿ

ಕರ್ಕಾಟಕ ರಾಶಿ

ಇಂದಿನಿಂದ ಕರ್ಕಾಟಕ ರಾಶಿಯವರ ಪ್ರೇಮ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಸಂತೋಷದ ವೈವಾಹಿಕ ಜೀವನವನ್ನು ನೀವು ಆನಂದಿಸುವಿರಿ. ಉದ್ಯೋಗದಲ್ಲಿದ್ದವರು ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತಾರೆ. ನೀವಂದುಕೊಂಡಂತೆ ನಿಮ್ಮ ಬಡ್ತಿ ಹೆಚ್ಚುವುದು. ಜಂಟಿ ಉದ್ಯಮದಲ್ಲಿ ಲಾಭ ಇರುತ್ತದೆ ಮತ್ತು ಒಟ್ಟಾರೆ ನಿಮ್ಮ ವ್ಯಕ್ತಿತ್ವವು ಸುಧಾರಿಸುತ್ತದೆ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಸರ್ವಾರ್ಥ ಸಿದ್ಧಿ, ಅಮೃತ ಸಿದ್ಧಿ ಮತ್ತು ರವಿಯೋಗದಿಂದಾಗಿ ಒಳ್ಳೆಯ ದಿನಗಳು ಆರಂಭವಾಗಲಿವೆ. ನೀವು ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ ಅದು ನಿಮಗೆ ತುಂಬಾ ಸಂತೋಷವನ್ನು ನೀಡುತ್ತದೆ. ಹದಗೆಟ್ಟರೆ ಸಂಬಂಧಗಳು ಸುಧಾರಿಸುತ್ತವೆ. ನಿಮ್ಮ ವೈಯಕ್ತಿಕ ಜೀವನವೂ ಸುಧಾರಿಸುತ್ತದೆ ಮತ್ತು ನಿಮ್ಮ ಸಾಮಾಜಿಕ ವಲಯವು ದೊಡ್ಡದಾಗಿ ಬೆಳೆಯುತ್ತದೆ. ಈ ಕಾರಣದಿಂದಾಗಿ ನೀವು ಹೊಸ ಜನರೊಂದಿಗೆ ಸಂಬಂಧವನ್ನು ನಿರ್ಮಿಸಬಹುದು. ನಿಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ನೀವು ಹೊಸ ಅವಕಾಶಗಳನ್ನು ಪಡೆಯುತ್ತೀರಿ.

ಕನ್ಯಾ ರಾಶಿ

ಕನ್ಯಾ ರಾಶಿ

ರಾಮ ಮಂದಿರ ಉದ್ಘಾಟನೆಯ ದಿನವಾದ ಇಂದು ಕನ್ಯಾ ರಾಶಿಯವರಿಗೆ ಮಂಗಳಕರ ದಿನವಾಗಿದೆ. ನಿಮ್ಮ ಸೌಕರ್ಯ ಮತ್ತು ಸಂಪತ್ತು ವಿಸ್ತರಿಸುತ್ತದೆ. ಹೊಸ ವಾಹನ ಮತ್ತು ಮನೆ ಖರೀದಿಸಬಹುದು. ಕನ್ಯಾ ರಾಶಿಯವರ ಆರೋಗ್ಯವೂ ಸುಧಾರಿಸುತ್ತದೆ. ನಿಮ್ಮ ಸಹೋದರ ಸಹೋದರಿಯರಿಂದ ನೀವು ಬಯಸಿದ ಬೆಂಬಲವನ್ನು ಪಡೆಯುತ್ತೀರಿ. ದೂರದ ಪ್ರಯಾಣದ ಸಾಧ್ಯತೆಗಳಿವೆ ಮತ್ತು ನೀವು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತೀರಿ. ಈ ದಿನ ಮಾಡುವ ಪುಣ್ಯದ ಕಾರ್ಯಗಳಿಂದ ನಮಗೆ ಶ್ರೀರಾಮನ ಆಶೀರ್ವಾದ ಸಿಗಲಿದೆ.

ತುಲಾ ರಾಶಿ

ತುಲಾ ರಾಶಿ

ತುಲಾ ರಾಶಿಯವರ ಜೀವನದಲ್ಲಿ ಸಂತೋಷ ದಿನಗಳು ಆರಂಭವಾಗಲಿವೆ. ತುಲಾ ರಾಶಿ ಅವರು ವೃತ್ತಿ ಮತ್ತು ಕೆಲಸದ ಸ್ಥಳದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣುವರು. ಈ ದಿನ ನಿಮಗೆ ಅದೃಷ್ಟ ಲಕ್ಷ್ಮಿ ಒಲಿಯುವಳು. ಹಣಕಾಸಿನ ಲಾಭಗಳ ಜೊತೆಗೆ ಈ ದಿನ ನೀವು ಸಾಕಷ್ಟು ಹೆಸರು ಮತ್ತು ಖ್ಯಾತಿಯನ್ನು ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಈ ದಿನ ದೇವಸ್ಥಾನಗಳಿಗೆ ಹೋಗಿ ದೇವರ ಆಶೀರ್ವಾದದೊಂದಿಗೆ ಕಾರ್ಯಗಳನ್ನು ಆರಂಭಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಈ ದಿನ ಅದ್ಬುತವಾಗಿದೆ. ಇಂದಿನಿಂದು ವೃಶ್ಚಿಕ ರಾಶಿಯವರ ಜೀವನವೇ ಬದಲಾಗಲಿದೆ. ಈ ದಿನ ನೀವು ಹಣಕಾಸಿನ ಲಾಭವನ್ನು ನೋಡುತ್ತೀರಿ ಮತ್ತು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗುತ್ತದೆ. ನೀವು ಉದ್ಯೋಗದಲ್ಲಿದ್ದರೆ ಬಡ್ತಿ ಸಿಗುವ ಎಲ್ಲಾ ಅವಕಾಶಗಳಿವೆ. ನಿಮ್ಮ ಭಾಷಣದಿಂದ ಜನರು ಪ್ರಭಾವಿತರಾಗುತ್ತಾರೆ. ಸಂಬಂಧಗಳೂ ಮಧುರವಾಗಿರುತ್ತವೆ. ನಿಮ್ಮ ವೈವಾಹಿಕ ಜೀವನ ಅದ್ಭುತವಾಗಿರುತ್ತದೆ.

ಧನು ರಾಶಿ

ಧನು ರಾಶಿ

ಈ ದಿನ ಅನೇಕ ಶುಭ ಯೋಗಗಳು ರೂಪಗೊಳ್ಳುತ್ತವೆ. ಹೀಗಾಗಿ ನಿಮ್ಮ ಪ್ರೇಮ ಜೀವನ ಸುಧಾರಿಸುತ್ತದೆ. ಜಂಟಿ ಉದ್ಯಮಗಳಲ್ಲಿಯೂ ಲಾಭವನ್ನು ಪಡೆಯುತ್ತೀರಿ. ನಿಮ್ಮ ಬಿಡುವಿಲ್ಲದ ಕೆಲಸ ಪೂರ್ಣಗೊಳ್ಳುತ್ತದೆ. ಈ ದಿನ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿರುತ್ತದೆ. ಸಮಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ, ಈ ದಿನ ನೀವು ಯಶಸ್ಸನ್ನು ಸಾಧಿಸಬಹುದು. ಈ ದಿನ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ನಿಮ್ಮ ಮೇಲಿರಲಿದೆ.

ಮಕರ ರಾಶಿ

ಮಕರ ರಾಶಿ

ಇದು ಮಕರ ರಾಶಿಯವರಿಗೆ ಬಹಳ ಅದೃಷ್ಟದ ದಿನವಾಗಿರುತ್ತದೆ. ಗ್ರಹಗಳ ಶುಭ ಪ್ರಭಾವದಿಂದ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಪಡೆಯುವ ಸಾಧ್ಯತೆ ಇದೆ. ಹಳೆಯ ಸಮಸ್ಯೆಗಳು ಪರಿಹಾರವಾಗುತ್ತವೆ. ನಿಮ್ಮ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ನಿಮ್ಮ ಕುಟುಂಬದಲ್ಲಿ ಕೆಲವು ಶುಭ ಘಟನೆಗಳು ಸಂಭವಿಸುತ್ತವೆ. ಅಲ್ಲದೆ ನಿಮ್ಮ ಮಕ್ಕಳ ಸಾಧನೆಗೂ ಯಾವುದೇ ಅಡೆತಡೆಗಳು ಬರುವುದಿಲ್ಲ.

ಕುಂಭ ರಾಶಿ

ಕುಂಭ ರಾಶಿ

ಉದ್ಯಮಿಗಳು ಈ ದಿನ ಅನುಕೂಲಕರ ಫಲಿತಾಂಶಗಳನ್ನು ಕಾಣುತ್ತಾರೆ. ಈ ದಿನ ರೂಪಗೊಳ್ಳುವ ಮೂರು ಶುಭ ಯೋಗಗಳು ಲಾಭವನ್ನು ಕುಂಭ ರಾಶೀಯವರು ಪಡೆಯುತ್ತಾರೆ. ಸಾಲ ಮುಕ್ತವಾಗಿರುವಾಗ ಸಣ್ಣ ವ್ಯಾಪಾರಿಗಳು ಲಾಭವನ್ನು ಪಡೆಯುತ್ತಾರೆ. ಹೂಡಿಕೆಗೆ ಈ ದಿನವು ತುಂಬಾ ಅನುಕೂಲಕರವಾಗಿರುತ್ತದೆ. ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಅಲ್ಲದೆ ನೀವು ನಿಮ್ಮ ಸಾಧನೆಗೆ ಶ್ರಮಕ್ಕೆ ತಕ್ಕ ಬಹುಮಾನವನ್ನು ಇಂದು ಪಡೆಯುವಿರಿ. ಶ್ರೀರಾಮನ ಮೂರ್ತಿ ಪ್ರತಿಷ್ಠಾಪನಾ ದಿನವಾದ ಇಂದು ಶ್ರೀರಾಮನನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ.

ಮೀನ ರಾಶಿ

ಮೀನ ರಾಶಿ

ಸರ್ವಾರ್ಥ ಸಿದ್ಧಿ, ಅಮೃತ ಸಿದ್ಧಿ ಮತ್ತು ರವಿಯೋಗ ಮೀನ ರಾಶಿಯವರಿಗೆ ತುಂಬಾ ಮಂಗಳಕರವಾಗಿವೆ. ಈ ದಿನ ಮೀನ ರಾಶಿಯವರು ಅಂದುಕೊಂಡಿದ್ದೆಲ್ಲವೂ ನೆರವೇರುತ್ತದೆ. ಈ ದಿನ ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ನೀಔಉ ಮಾಡುವ ಯಾವುದೇ ಕೆಲಸದಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಭೌತಿಕ ಸಂತೋಷವು ಹೆಚ್ಚಾಗುತ್ತದೆ. ವೃತ್ತಿ ಪ್ರಗತಿ ಮತ್ತು ಆರ್ಥಿಕ ಲಾಭ ಕಾಣುವಿರಿ. ಈ ದಿನ ನೀವು ಹೊಸ ವಾಹನ ಅಥವಾ ಆಸ್ತಿಯನ್ನುಖರೀದಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+