Planet Transit In October 2024: ಅಕ್ಟೋಬರ್‌ನಲ್ಲಿ ಪ್ರಮುಖ ಗ್ರಹಗಳ ಸಂಕ್ರಮಣ.. ಈ ರಾಶಿಗೆ ಧನಲಕ್ಷ್ಮಿ ಕೃಪಕಟಾಕ್ಷ..!
ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಅಕ್ಟೋಬರ್ ತಿಂಗಳಲ್ಲೂ ಅನೇಕ ಗ್ರಹಗಳು ರಾಶಿಯನ್ನು ಬದಲಾಯಿಸುತ್ತವೆ. ಹಾಗಾದರೆ ಅಕ್ಟೋಬರ್ ತಿಂಗಳು ಯಾವ ಗ್ರಹಗಳು ಯಾವ ರಾಶಿಯಲ್ಲಿ ಸಂಚಾರ ಮಾಡುತ್ತವೆ. ಇದರ ಶುಭ ಫಲಿತಾಂಶ ಯಾವ ರಾಶಿಯ ಮೇಲಿರಲಿದೆ ಎಂದು ತಿಳಿಯೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ಮತ್ತು ಬುಧ ಸೇರಿದಂತೆ ನಾಲ್ಕು ಪ್ರಮುಖ ಗ್ರಹಗಳು ಅಕ್ಟೋಬರ್ ತಿಂಗಳಲ್ಲಿ ಒಂದು ರಾಶಿಯಿಂದ ಇನ್ನೊಂದಕ್ಕೆ ಪ್ರವೇಶಿಸುತ್ತವೆ. ಈ ತಿಂಗಳಲ್ಲಿ ನವರಾತ್ರಿ ಮತ್ತು ದೀಪಾವಳಿ ಆಚರಣೆಗಳು ನಡೆಯಲಿವೆ. ಈ ಸಮಯದಲ್ಲಿ ಬುಧ ಅಕ್ಟೋಬರ್ 10ರಂದು ತುಲಾರಾಶಿಯಲ್ಲಿ ಸಾಗುತ್ತದೆ. ಅಕ್ಟೋಬರ್ 13 ರಂದು ಶುಕ್ರ ವೃಶ್ಚಿಕ ರಾಶಿಯಲ್ಲಿ, ಅಕ್ಟೋಬರ್ 17 ರಂದು ತುಲಾ ರಾಶಿಯಲ್ಲಿ ಸೂರ್ಯನು ಮತ್ತು ಅಕ್ಟೋಬರ್ 20 ರಂದು ಕರ್ಕ ರಾಶಿಯಲ್ಲಿ ಮಂಗಳ ಗ್ರಹವು ಸಾಗುತ್ತದೆ.
ಈ ಸಮಯದಲ್ಲಿ ಶುಕ್ರಾದಿತ್ಯ ರಾಜಯೋಗ ಸೂರ್ಯ ಮತ್ತು ಶುಕ್ರನ ಸಂಯೋಜನೆಯೊಂದಿಗೆ ರೂಪುಗೊಳ್ಳುತ್ತದೆ. ಇದು ಅತ್ಯಂತ ಮಂಗಳಕರ ಯೋಗವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಶನಿಯು ಅಕ್ಟೋಬರ್ ತಿಂಗಳಲ್ಲಿ ಪೂರ್ವಾಭಾದ್ರದಿಂದ ಶತಭಿಷಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಈ ಕಾರಣದಿಂದಾಗಿ ಕೆಲವು ರಾಶಿಯವರು ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಹಾಗಾದರೆ ಅಕ್ಟೋಬರ್ ನಲ್ಲಿ ಪ್ರಮುಖ ಗ್ರಹಗಳ ಸಂಕ್ರಮಣದಿಂದಾಗಿ ಯಾವ ರಾಶಿಯವರಿಗೆ ಧನಲಕ್ಷ್ಮಿ ಕೃಪಕಟಾಕ್ಷ ಇರಲಿದೆ ಎಂದು ತಿಳಿಯೋಣ.

ವೃಷಭ ರಾಶಿ
ಅಕ್ಟೋಬರ್ ತಿಂಗಳಲ್ಲಿ ಪ್ರಮುಖ ಗ್ರಹಗಳ ಸಾಗಣೆಯಿಂದ ವೃಷಭ ರಾಶಿಯ ಜನರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ವೃತ್ತಿಯಲ್ಲಿ ನೆಮ್ಮದಿ ಸಿಗಲಿದೆ. ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ. ಹಬ್ಬದ ವಾತಾವಣ ಮನೆ ಮಾಡಿರುತ್ತದೆ. ಈ ತಿಂಗಳಲ್ಲಿ ಹೆಚ್ಚು ಹಣ ಸಂಪಾದಿಸುವ ಅವಕಾಶ ಇರುತ್ತದೆ.
ವೃಷಭ ರಾಶಿಯವರ ಆರ್ಥಿಕ ಪ್ರಗತಿ ಸುಧಾರಿಸಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಧನಲಾಭ ಸಿಗಲಿದೆ. ನಿಮ್ಮ ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಕೆಲವೇ ದಿನಗಳಲ್ಲಿ ಸಂತಸದ ಸುದ್ದಿಯೊಂದು ನಿಮ್ಮ ಮನೆಗೆ ಬರಬಹುದು.

ಸಿಂಹ ರಾಶಿ
ಅಕ್ಟೋಬರ್ ತಿಂಗಳಿನಲ್ಲಿ ಗ್ರಹಗಳ ಸಂಚಾರದಿಂದಾಗಿ ಸಿಂಹ ರಾಶಿ ಅವರಿಗೆ ಅನುಕೂಲಕರವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ತಿಂಗಳು ಇದಾಗಿದೆ. ಉದ್ಯೋಗಿಗಳು ಅಂದುಕೊಂಡ ಕಾರ್ಯವನ್ನು ಯಾವುದೇ ಅಡೆತಡೆ ಇಲ್ಲದೆ ಪೂರ್ಣಗೊಳಿಸುತ್ತಾರೆ. ಸುಲಭವಾಗಿ ಉದ್ಯೋಗವಕಾಶಗಳು ಬರಬಹುದು.
ನೀವು ಹಠಾತ್ ಆರ್ಥಿಕ ಲಾಭವನ್ನು ಪಡೆಯಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ಕುಟುಂಬದೊಂದಿಗೆ ಸಂತೋಷದ ಸಮಯವನ್ನು ಕಳೆಯಿರಿ. ಹಲವಾರು ಲಾಭದ ಮಾರ್ಗಗಳು ತೆರೆದುಕೊಳ್ಳಲಿವೆ. ನಿಮ್ಮ ಮನಸ್ಸು ತುಂಬಾ ಖುಷಿಯಾಗಿರುತ್ತದೆ. ವ್ಯಾಪಾರದಲ್ಲಿ ಬೆಳವಣಿಗೆಯಿಂದ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ಕನ್ಯಾ ರಾಶಿ
ಅಕ್ಟೋಬರ್ ತಿಂಗಳಲ್ಲಿ ಪ್ರಮುಖ ಗ್ರಹಗಳ ಸಂಚಾರ ಕನ್ಯಾ ರಾಶಿ ಅವರಿಗೆ ಉತ್ತಮ ಫಲಿತಾಂಶಗಳನ್ನು ತರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಇದರಿಂದ ನೌಕರರು ಕಚೇರಿಯಲ್ಲಿ ಮೆಚ್ಚುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜದಲ್ಲಿ ಖ್ಯಾತಿ ಹೆಚ್ಛಾಗುತ್ತದೆ. ನಿಮ್ಮ ವೈಯಕ್ತಿಕ ಜೀವನವೂ ಉತ್ತಮವಾಗಿರುತ್ತದೆ.
ವಿದ್ಯಾಭ್ಯಾಸದಲ್ಲಿ ಬುದ್ಧಿವಂತಿಕೆಯಲ್ಲಿ ಕೊರತೆ ಇರುವುದಿಲ್ಲ. ಹಣದ ಕೊರತೆ ಸಮಸ್ಯೆಗಳು ಇದ್ದರೆ ದೂರವಾಗುತ್ತವೆ. ಈ ಅವಧಿಯಲ್ಲಿ ನೀವು ಅದ್ಭುತ ಫಲಿತಾಂಶಗಳನ್ನು ಪಡೆಯುತ್ತೀರಿ.

ತುಲಾ ರಾಶಿ
ತುಲಾ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವೃತ್ತಿಯ ವಿಷಯದಲ್ಲಿ ನೀವು ಪ್ರಗತಿಯನ್ನು ಸಾಧಿಸುವಿರಿ. ವ್ಯಾಪಾರಸ್ಥರಿಗೆ ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ. ಉದ್ಯೋಗಿಗಳು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಅವಿವಾಹಿತರು ಅಂದುಕೊಂಡ ವಿವಾಹ ಪ್ರಸ್ತಾಪಗಳನ್ನು ಪಡೆಯಬಹುದು.












Click it and Unblock the Notifications