Gajakesari Yoga 2024: ಗಜಕೇಸರಿ ಯೋಗ- 12 ರಾಶಿಗಳ ಮೇಲೆ ಇದರ ಪ್ರಭಾವ, ಪರಿಣಾಮ, ಪರಿಹಾರ ತಿಳಿಯಿರಿ
ರಾಶಿಚಕ್ರ ಚಿಹ್ನೆಗಳಿಗೆ ಇಂದು (16 ನವೆಂಬರ್) ಮಿಶ್ರ ದಿನವಾಗಿರುತ್ತದೆ. ಕೆಲವು ರಾಶಿಯವರಿಗೆ ಇದು ಹೊಸ ಅವಕಾಶಗಳು ಮತ್ತು ಪ್ರಯೋಜನಗಳ ಸಮಯವಾಗಿದೆ. ಆದರೆ ಇತರರಿಗೆ ಸವಾಲುಗಳು ಮತ್ತು ಸಮಸ್ಯೆಗಳು ಉದ್ಭವಿಸಬಹುದು. ಅಲ್ಲದೆ ಇಂದು ಗಜಕೇಸರಿ ಯೋಗ ರೂಪಗೊಳ್ಳಲಿದೆ. ಹಾಗಾದರೆ ಇಂದು ಯಾವ ರಾಶಿಗೇನು ಫಲವಿದೆ ಎಂದು ತಿಳಿಯೋಣ.

ಮೇಷ ರಾಶಿ
ಇಂದು ಮೇಷ ರಾಶಿಯವರ ಜೀವನದಲ್ಲಿ ಏರಿಳಿತಗಳು ಇರುತ್ತವೆ. ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ವ್ಯಾಪಾರದಲ್ಲಿ ನಷ್ಟ ಸಂಭವಿಸಲಿದೆ. ವಿರೋಧಿಗಳು ನಿಮ್ಮ ವಿರುದ್ಧ ಸಕ್ರಿಯರಾಗುತ್ತಾರೆ. ಇದರಿಂದ ನಿಮ್ಮಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳಿರಬಹುದು. ಹೀಗಾಗಿ ಇಂದು ಮೇಷ ರಾಶಿಯವರು ತಾಳ್ಮೆಯಿಂದ ಇರುವುದು ತುಂಬಾ ಮುಖ್ಯವಾಗಿದೆ. ಪ್ರತಿ ಹೆಜ್ಜೆಯನ್ನು ಯೋಚಿಸಿ ಇಡಿ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ. ನೀವು ಯೋಜಿಸಿದ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಆರೋಗ್ಯದಲ್ಲಿ ಕೆಲವು ಏರುಪೇರುಗಳಾಗಬಹುದು. ವ್ಯವಹಾರದಲ್ಲಿ ಆರ್ಥಿಕ ಪರಿಸ್ಥಿತಿ ಕುಂಟಿತವಾಗುವ ಸಾಧ್ಯತೆ ಇದೆ. ಇದು ನಿಮ್ಮನ್ನು ಚಿಂತೆಗೆ ದೂಡಬಹುದು. ಇದಕ್ಕೆ ಪರಿಹಾರಗಳನ್ನು ಕೊನೆಯಲ್ಲಿ ನೀಡಲಾಗಿದೆ. ಅದನ್ನು ಅನುಸರಿಸಿ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ. ಕುಟುಂಬದೊಂದಿಗೆ ಎಲ್ಲೋ ಹೊರಗೆ ಹೋಗಬೇಕೆಂದು ಯೋಜನೆ ಮಾಡಬಹುದು. ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ವ್ಯಾಪಾರದಲ್ಲಿ ಲಾಭದ ಸಾಧ್ಯತೆಯಿದೆ. ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಆಯೋಜಿಸಬಹುದು. ಜೀವನದಲ್ಲಿ ಬರುವ ಅಡೆತಡೆ ನಿವಾರಣೆಗೆ ಕೆಲ ಪರಿಹಾರಗಳನ್ನು ಕೈಗೊಳ್ಳಿ. ಈ ಪರಿಹಾರಗಳನ್ನು ಕೊನೆಯಲ್ಲಿ ನೀಡಲಾಗಿದೆ.

ಕಟಕ ರಾಶಿ
ಕಟಕ ರಾಶಿಯವರಿಗೆ ಈ ದಿನ ಶುಭ ದಿನವಾಗಲಿದೆ. ಕೆಲವು ಪ್ರಮುಖ ಕೆಲಸಗಳಿಗಾಗಿ ಪ್ರವಾಸಕ್ಕೆ ಹೋಗಬಹುದು. ನೀವು ಯಾವುದೇ ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿದ್ದರೆ ಅದರಿಂದ ಜಯವನ್ನು ಪಡೆಯಬಹುದು. ವ್ಯಾಪಾರದಲ್ಲಿ ಹೊಸ ಆದಾಯದ ಮಾರ್ಗಗಳು ಸಹ ತೆರೆದುಕೊಳ್ಳಬಹುದು. ಕುಟುಂಬದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ಕೆಲವು ಸಮಸ್ಯೆಗಳಿಂದ ಕೂಡಿರುತ್ತದೆ. ನೀವು ಅನಗತ್ಯ ವಿವಾದಗಳಲ್ಲಿ ಸಿಲುಕಿಕೊಳ್ಳಬಹುದು, ಇದು ಮಾನಸಿಕ ಶಾಂತಿಗೆ ಅಡ್ಡಿಯಾಗುತ್ತದೆ. ನೀವು ಆರೋಗ್ಯದಲ್ಲಿ ಸಮಸ್ಯೆಯನ್ನು ಅನುಭವಿಸಬಹುದು. ನಿಮ್ಮ ಮನಸ್ಸಿನಲ್ಲಿ ಇದರ ಚಿಂತೆ ಕಾಡಬಹುದು.

ಕನ್ಯಾ ರಾಶಿ
ಇಂದು ನಿಮಗೆ ಹತ್ತಿರವಿರುವವರ ವರ್ತನೆಯಿಂದ ನೀವು ಸಮಸ್ಯೆಗಳನ್ನು ಎದುರಿಸಬಹುದು. ಸಂಗಾತಿಯ ಆರೋಗ್ಯ ಹದಗೆಡುವ ಸಂಭವವಿದ್ದು, ಇದರಿಂದ ಮನೆಯಲ್ಲಿ ಕೆಲಕಾಲ ಒತ್ತಡದ ವಾತಾವರಣ ಉಂಟಾಗಬಹುದು. ವ್ಯಾಪಾರದಲ್ಲಿ ಮೋಸ ಹೋಗುವ ಅಪಾಯವಿದೆ. ಹೀಗಾಗಿ ಕೊನೆಯಲ್ಲಿ ಕೆಲ ಪರಿಹಾರಗಳನ್ನು ನೀಡಲಾಗಿದೆ. ಅವುಗಳನ್ನು ಅನುಸರಿಸಿ.

ತುಲಾ ರಾಶಿ
ಇಂದು ನೀವು ಕೆಲವು ಪ್ರಮುಖ ಕೆಲಸಗಳಿಗಾಗಿ ಹೊರಹೋಗುವ ಅವಕಾಶವನ್ನು ಪಡೆಯುವಿರಿ. ವ್ಯವಹಾರದಲ್ಲಿ ನಷ್ಟಗಳು ಉಂಟಾಗುತ್ತವೆ. ನಿಮ್ಮ ಪಾಲುದಾರರು ನಿಮ್ಮೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಾರೆ. ನಿಮ್ಮ ಜೀವನ ಸುಖ:ಮಯವಾಗಿರಲು ಕೆಲ ಪರಿಹಾರಗಳನ್ನು ಅನುಸರಿಸಬೇಕಾಗುತ್ತದೆ. ಆ ಪರಿಹಾರಗಳನ್ನು ಕೊನೆಯಲ್ಲಿ ನೀಡಲಾಗಿದೆ. ಅವುಗಳನ್ನು ಅನುಸರಿಸಿ.

ವೃಶ್ಚಿಕ ರಾಶಿ
ಇಂದು ನಿಮಗೆ ಬಹಳ ಒಳ್ಳೆಯ ದಿನವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ ಮತ್ತು ನಿಮ್ಮ ಕುಟುಂಬದೊಂದಿಗೆ ನೀವು ಸಂತೋಷದ ಕ್ಷಣಗಳನ್ನು ಕಳೆಯಬಹುದು. ನೀವು ಕೆಲವು ಹೊಸ ಕೆಲಸ ಅಥವಾ ಜವಾಬ್ದಾರಿಯನ್ನು ಪಡೆಯಬಹುದು. ವ್ಯಾಪಾರದಲ್ಲಿ ಲಾಭದಾಯಕ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಧನು ರಾಶಿ
ಇಂದು ನೀವು ಕಾನೂನು ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಅಪಾಯವಿದೆ. ಆರೋಗ್ಯ ಹದಗೆಡಬಹುದು. ವ್ಯಾಪಾರವು ನಷ್ಟವನ್ನು ಅನುಭವಿಸಬಹುದು. ಕುಟುಂಬದಲ್ಲಿ ಮಾನಸಿಕ ಭಿನ್ನಾಭಿಪ್ರಾಯಗಳಿರುತ್ತವೆ. ಅದು ಉದ್ವಿಗ್ನತೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ಇದರಿಂದಾಗಿ ತಾಳ್ಮೆಯಿಂದಿರಿ. ಕೊನೆಯಲ್ಲಿ ಕೆಲ ಪರಿಹಾರಗಳನ್ನು ಕೊನೆಯಲ್ಲಿ ನೀಡಲಾಗಿದೆ. ಅವುಗಳನ್ನು ಅನುಸರಿಸಿ.

ಮಕರ ರಾಶಿ
ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ನೀವು ಶ್ರಮಿಸಿದ ಕಾರ್ಯಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ವ್ಯಾಪಾರದಲ್ಲಿ ಲಾಭದ ಸಾಧ್ಯತೆಗಳಿವೆ. ಇದು ದೊಡ್ಡ ಹೂಡಿಕೆ ಮಾಡಲು ಉತ್ತಮ ಸಮಯವಾಗಿದೆ. ನೀವು ಹೊಸ ಮನೆ ಅಥವಾ ವಾಹನವನ್ನು ಖರೀದಿಸಬಹುದು. ಕುಟುಂಬದೊಂದಿಗೆ ಸಮಯ ಕಳೆಯಲು ಇಂದು ಅವಕಾಶ ಸಿಗಲಿದೆ.

ಕುಂಭ ರಾಶಿ
ನೀವು ಇಂದು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಅನಗತ್ಯ ವಿವಾದಗಳನ್ನು ತಪ್ಪಿಸಲು ಪ್ರಯತ್ನಿಸಿ. ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಕಾನೂನು ವಿಷಯಗಳಲ್ಲಿ ನೀವು ನಷ್ಟವನ್ನು ಎದುರಿಸಬಹುದು. ವ್ಯವಹಾರದಲ್ಲಿಯೂ ಕೆಲವು ಅಡೆತಡೆಗಳು ಉಂಟಾಗಬಹುದು. ಹೀಗಾಗಿ ಕೆಲ ಪರಿಹಾರಗಳನ್ನು ಕೊನೆಯಲ್ಲಿ ನೀಡಲಾಗಿದೆ. ಅವುಗಳನ್ನು ಅನುಸರಿಸಿ.

ಮೀನ ರಾಶಿ
ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ನೀವು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಅದು ಭವಿಷ್ಯದಲ್ಲಿ ನಿಮಗೆ ಪ್ರಯೋಜನಕಾರಿಯಾಗಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ವ್ಯಾಪಾರದಲ್ಲಿ ಲಾಭ ಇರುತ್ತದೆ. ನೀವು ಈ ಹಿಂದೆ ಯಾವುದಾದರೂ ಕೆಲಸದಲ್ಲಿ ಹೂಡಿಕೆ ಮಾಡಿದ್ದರೆ, ಇಂದು ನೀವು ಆ ಹಣವನ್ನು ಪಡೆಯಬಹುದು.
ಪರಿಹಾರಗಳು
*ಜಾತಕದಲ್ಲಿ ಸಮಸ್ಯೆ ಇರುವವರು ಧಾರ್ಮಿಕ ಕಾರ್ಯಗಳು ಹಾಗೂ ದಾನ ಮಾಡುವುದು ಉತ್ತಮ ಫಲ ನೀಡುತ್ತದೆ. ನಿಮ್ಮ ಕೈಲಾಯದ ವಸ್ತುಗಳನ್ನು ಅಥವಾ ಆಹಾತ ಪದಾರ್ಥಗಳನ್ನು ಅಗತ್ಯ ಇರುವವರಿಗೆ ನೀಡಿ
* ಮನೆಯಲ್ಲಿ ಬೆಳಿಗ್ಗೆ ಸಂಜೆ ದೀಪವನ್ನು ಹಚ್ಚಿ ಪೂಜೆ ಮಾಡಿ. ಇದು ಮನೆಯಲ್ಲಿನ ಧನಾತ್ಮಕ ಶಕ್ತಿಯನ್ನು ಮನೆಯಿಂದ ಹೊರಗೆ ಇಡುತ್ತದೆ. ಅಲ್ಲದೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ.
* ಎಷ್ಟೇ ಬಿಡುವಿಲ್ಲದ ಸಮಯ ಇದ್ದರೂ ವಾರಕ್ಕೊಮ್ಮೆಯಾದರೂ ನಿಮಗೆ ಹತ್ತಿರವಿರುವ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರನ್ನು ಆರಾಧಿಸಿ. ಇದು ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಡುತ್ತದೆ.
* ಯಾವುದೇ ಕೆಲ ಆರಂಭಿಸಿದರೂ ಹಿರಿಯರ ಹಾಗೂ ಪೋಷಕರು ಜೊತೆಗೆ ದೇವರ ಆಶೀರ್ವಾದ ಇರುವುದು ತುಂಬಾ ಮುಖ್ಯ.
* ನೀವಿರುವ ಕಚೇರಿ, ವಾಸವಿರುವ ಮನೆ ಸ್ವಚ್ಚವಾಗಿಡಿ, ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಮನೆಯಲ್ಲಿ ಗಾಳಿ ಬೆಳಕು ಬರುವಂತೆ ನೋಡಿಕೊಳ್ಳುವುದು ಕೂಡ ಮುಖ್ಯ.
-
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು?












Click it and Unblock the Notifications