ಜ್ಯೋತಿಷ್ಯ: ಭವಿಷ್ಯದ ಬಗ್ಗೆ ಓದುಗರ ಪ್ರಶ್ನೆಗೆ ಜ್ಯೋತಿಷಿಗಳ ಉತ್ತರ

By: ಪಂಡಿತ್ ವಿಠ್ಠಲ ಭಟ್
Subscribe to Oneindia Kannada

ಭವಿಷ್ಯದ ಬಗ್ಗೆ ನಿಮಗಿರುವ ಪ್ರಶ್ನೆಗಳನ್ನು ಕಳಿಸಿದರೆ ಒನ್ಇಂಡಿಯಾ ಕನ್ನಡದ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಅವರು ಉತ್ತರ ನೀಡುತ್ತಾರೆ ಎಂದು ತಿಳಿಸಲಾಗಿತ್ತು. ಆ ನಂತರ ಅನೇಕ ಓದುಗರು ತಮ್ಮ ಪ್ರಶ್ನೆಗಳನ್ನು ಕಳುಹಿಸಿದ್ದರು. ಆ ಪೈಕಿ ಆಯ್ದ ಎರಡು ಪತ್ರಕ್ಕೆ ಜ್ಯೋತಿಷಿಗಳು ಉತ್ತರಿಸಿದ್ದಾರೆ. ಇನ್ನೊಂದು ವಿಚಾರ. ಕೆಲವು ಸಮಸ್ಯೆಗಳಿಗೆ ಸಾಮೂಹಿಕ ಪರಿಹಾರ ಇದ್ದು, ಅಂಥ ಸಮಸ್ಯೆಗಳಿಗೆ ಪರಿಹಾರವನ್ನು ಒಳಗೊಂಡ ಲೇಖನವನ್ನೇ ವಿಠ್ಠಲ ಭಟ್ ಅವರು ಮುಂದಿನ ದಿನಗಳಲ್ಲಿ ನೀಡಲಿದ್ದಾರೆ.

ಅಂದಹಾಗೆ ನೀವು ಕೂಡ ಪ್ರಶ್ನೆ ಕಳುಹಿಸಬಹುದು. ನಿಮ್ಮ ಹೆಸರು, ಜನ್ಮ ದಿನಾಂಕ, ಹುಟ್ಟಿದ ಸಮಯ, ಊರು-ಜಿಲ್ಲೆ-ತಾಲೂಕು, ತಂದೆ-ತಾಯಿಯ ಹೆಸರು. ನಿಮ್ಮ ಪ್ರಶ್ನೆ ಇಷ್ಟೂ ವಿವರವನ್ನು ನಮಗೆ ಈ ಮೇಲ್ astrology.kannada@oneindia.co.in ಮೂಲಕ ಕಳುಹಿಸಿದರೆ, ಆಯ್ದ ಪ್ರಶ್ನೆಗಳಿಗೆ ಪರಿಹಾರ ಸಹಿತವಾಗಿ ಜ್ಯೋತಿಷಿಗಳು ಉತ್ತರ ನೀಡುತ್ತಾರೆ.[ಜ.26ಕ್ಕೆ ಧನು ರಾಶಿಗೆ ಶನಿ ಪ್ರವೇಶ: ಯಾವ ರಾಶಿಗೆ ಏನು ಫಲ, ಪ್ರಭಾವ?]

Astrologer answer to Oneindia Kannada readers questions

ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಮೊಬೈಲ್ ಫೋನ್ ನಂಬರ್ 9845682380 ಮೂಲಕ ಸಂಪರ್ಕಿಸಬಹುದು. ಇನ್ನು ಪರಿಹಾರ ಹಾಗೂ ಫಲಿತಾಂಶಕ್ಕೆ ಸಂಬಂಧಿಸಿದಂತೆ ಜ್ಯೋತಿಷಿಗಳು ಸೂಚಿಸಿದ್ದರ ಬಗ್ಗೆ ನಂಬಿಕೆ ಇದ್ದಲ್ಲಿ ಅನುಸರಿಸಬಹುದು. ಈ ವಿಚಾರದಲ್ಲಿ ಒನ್ ಇಂಡಿಯಾ ಕನ್ನಡ ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ. -ಸಂಪಾದಕ[ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಆಯ್ದ ಪ್ರಶ್ನೆಗಳು
ಪ್ರಶ್ನೆ: ನಾನು ಕೆಲಸ ಮಾಡುವ ಕಂಪನಿಯಲ್ಲಿ ಸಮಸ್ಯೆಯಾಗಿದ್ದು, ಉದ್ಯೋಗ ವಿಚಾರದಲ್ಲಿ ಭವಿಷ್ಯ ಹೇಗಿದೆ? ನಾನು ನಿರ್ಧರಿಸಿದಂತೆ ಮುಂದೆ ಜೀವನ ಇರುತ್ತದಾ? ದಯವಿಟ್ಟು ತಿಳಿಸಿ.
-ಎಚ್.ಆರ್., ಗಂಡಸಿ, ಹಾಸನ
ಉತ್ತರ: ನಿಮ್ಮದು ತುಲಾ ಲಗ್ನ ಹಾಗೂ ವೃಶ್ಚಿಕ ರಾಶಿ. ಅಲ್ಲಿಗೆ ಲಗ್ನ ಕರ್ಮಾಧಿಪತಿ ನೀಚ ಸ್ಥಾನದಲ್ಲಿ ಸ್ಥಿತನಾಗಿದ್ದು, ಕರ್ಮ ಸ್ಥಾನದಲ್ಲಿ ಶನಿ ಇದ್ದಾನೆ. ಸದ್ಯಕ್ಕೆ ಗೋಚಾರದಲ್ಲಿ ನಿಮಗೆ ಸಾಡೇ ಸಾತ್ ಶನಿ ನಡೆಯುತ್ತಿದೆ. ಆದ್ದರಿಂದಲೇ ಅವಮಾನಗಳು ಆಗುತ್ತವೆ. ಆದರೆ ಯಾವುದೇ ಕಾರಣಕ್ಕೂ ಕೆಲಸ ಮಾತ್ರ ಬಿಡಬೇಡಿ.[ಹಣ ಸ್ಥಿರವಾಗಲು, ಲಕ್ಷ್ಮಿ ಕಟಾಕ್ಷಕ್ಕೆ ಇಲ್ಲಿವೆ ರಹಸ್ಯ ಸೂತ್ರಗಳು]

ಒಮ್ಮೆ ಇರುವ ಉದ್ಯೋಗ ಬಿಟ್ಟರೆ ಮತ್ತೆ ಸಿಗುವುದು ಬಹಳ ಕಷ್ಟ. ಆದರೂ ಈ ವರ್ಷದ ಸೆಪ್ಟೆಂಬರ್ ವರೆಗೆ ನಿಮಗೆ ಗುರುಬಲ ಇರುವುದರಿಂದ ಉದ್ಯೋಗಕ್ಕೆ ಸಂಬಂಧಿಸಿದ ನಿಮ್ಮ ಸಮಸ್ಯೆಗಳನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಿ. ಪರಿಹಾರ ಅಂದರೆ ಶನಿ ಹಾಗೂ ಚಂದ್ರ ಶಾಂತಿ ಹವನ ಮಾಡಿಸಿಕೊಳ್ಳಿ. ಗಣಪತಿ ದೇಗುಲಕ್ಕೆ ತೆರಳಿ ನಿತ್ಯ 21 ಪ್ರದಕ್ಷಿಣೆ ಮಾಡಿ. ನಿಮಗೆ ಶುಭವಾಗಲಿ

ಪ್ರಶ್ನೆ: ನಾನು __-8-1992ರಲ್ಲಿ ಹುಟ್ಟಿದ್ದು, ಮದುವೆ ವಿಚಾರವಾಗಿ ನನಗೆ ಪ್ರಶ್ನೆ ಇದೆ. ಮುಂದಿನ ಜೀವನ ಹೇಗಿರುತ್ತದೆ, ನನ್ನ ಜಾತಕದಲ್ಲಿ ದೋಷಗಳೇನಾದರೂ ಇದೆಯಾ ತಿಳಿಸಿ.
-ಊರು, ಹೆಸರು ಬೇಡ
ಉತ್ತರ: ನಿಮ್ಮದು ರೋಹಿಣಿ ನಕ್ಷತ್ರ, ನಾಲ್ಕನೇ ಪಾದ, ವೃಷಭ ರಾಶಿ. ನಿಮ್ಮ ಜಾತಕದ ಪ್ರಕಾರ ಪೂರ್ಣ ಗುರುಬಲವಿದೆ. ಈ ವರ್ಷದ ಸೆಪ್ಟೆಂಬರ್ ವರೆಗೆ ಗುರುಬಲ ಇರುತ್ತದೆ. ಅಷ್ಟರೊಳಗೆ ಪ್ರಯತ್ನಿಸಿದರೆ ಉತ್ತಮ. ಆದರೆ ಗೋಚಾರದ ರೀತಿ ಎರಡೂವರೆ ವರ್ಷಗಳ ಕಾಲ ಅಷ್ಟಮದಲ್ಲಿ ಶನಿ ಇರುವುದರಿಂದ ಅಂಥ ಉತ್ತಮ ಕಾಲ ಅಲ್ಲ.

ಉತ್ತರ: ಇನ್ನು ಮುಂದಿನ ವರ್ಷ ಅಂದರೆ 2018ರಲ್ಲಿ ರಾಹು-ಬೃಹಸ್ಪತಿ ಸಂಧಿಕಾಲ ಇದೆ. ಅಂದರೆ ರಾಹು ದಶೆ ಮುಗಿದು ಗುರು ದಶೆ ಆರಂಭವಾಗುತ್ತದೆ. ನಿಮ್ಮ ಪೋಷಕರ ಜತೆಗೆ ಖುದ್ದಾಗಿ ಬಂದು ಭೇಟಿ ಆಗಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿದು ಹೋಗಿ. ಇನ್ನು ಒಳ್ಳೆ ಕಡೆ ವಿವಾಹ ಸಿದ್ಧಿಗಾಗಿ ಶುಕ್ರ ಆರಾಧನೆ ಮಾಡಿ. ಪ್ರೀತಿ-ಪ್ರೇಮದ ವಿಚಾರಗಳು ಮನಸ್ಸಿನಲ್ಲಿದ್ದರೆ ಆಸೆ ಬಿಡುವುದು ಉತ್ತಮ. ನಿಮ್ಮ ಇಷ್ಟಾರ್ಥ ಸಿದ್ಧಿಸಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is the answers given by Astrologer Pandit Vittal Bhat to Oneindia Kannada readers questions about the future.
Please Wait while comments are loading...