ವೃಶ್ಚಿಕದ ಮಕ್ಕಳೆಂದರೆ ಎಲ್ಲ ಗುಣಗಳ ಕಿಚಡಿ, ಯಾವುದಕ್ಕೂ ಒಂದು ಕಣ್ಣಿಡಿ!
ವೃಶ್ಚಿಕ ರಾಶಿಯ ಮಕ್ಕಳ ಬಗ್ಗೆ ಇಂದಿನ ಲೇಖನ. ಈ ಮಕ್ಕಳು ಹುಟ್ಟಿರುವುದೇ ಗೆಲ್ಲುವುದಕ್ಕೆ ಎಂಬ ಧೋರಣೆ ಹೊಂದಿರುತ್ತವೆ. ಎಲ್ಲದರಲ್ಲೂ ಗೆಲ್ಲಬೇಕು ಎಂಬುದು ಈ ಮಕ್ಕಳ ತುಡಿತ. ವೃಶ್ಚಿಕ ರಾಶಿಯ ಮಕ್ಕಳಿಗೆ ಚುರುಕಾದ ಬುದ್ಧಿ ಹಾಗೂ ಆಕರ್ಷಕ ವ್ಯಕ್ತಿತ್ವ ಇರುತ್ತದೆ. ಈ ಮಕ್ಕಳಿಗೆ ಕುಟುಂಬದ ಜತೆಗಿನ ನಂಟು ಗಾಢವಾಗಿರುತ್ತದೆ.
ಕುಟುಂಬ ಸದಸ್ಯರಿಗೆ ಮೊದಲ ಆದ್ಯತೆ ನೀಡುವ ಮಕ್ಕಳು, ತಮಗೆ ತಾವು ಹೆಚ್ಚು ಪ್ರಾಮುಖ್ಯ ಕೊಡುತ್ತವೆ. ಈ ಮಕ್ಕಳು ತುಂಬ ಚಟುವಟಿಕೆಯಿಂದ ಇರುತ್ತವೆ. ಶೀಘ್ರ ಕಲಿಕೆಯ ಮನಸ್ಥಿತಿ ಹಾಗೂ ಬುದ್ಧಿವಂತಿಕೆ ಇರುತ್ತದೆ. ಹೊಸ ವಿಷಯ ಕಲಿಕೆಯತ್ತ ಕುತೂಹಲ ಇರುವ ಈ ರಾಶಿಯ ಮಕ್ಕಳು ಕ್ರಿಯೇಟಿವ್ ಆಗಿರುತ್ತಾರೆ. ಅವರ ಊಹಾ ಶಕ್ತಿ, ಕ್ರಿಯೇಟಿವಿಟಿಗೆ ಕಡಿವಾಣ ಹಾಕಬೇಡಿ.
ಆದರೆ, ವೃಶ್ಚಿಕ ರಾಶಿಯ ಮಕ್ಕಳಿಗೆ ಶಿಸ್ತು ಅಂದರೆ ಆಗಿಬರಲ್ಲ. ಸಾಮಾಜಿಕ ಹೇಗಿರಬೇಕು, ಏನು ಮಾಡಬೇಕು- ಮಾಡಬಾರದು ಎಂಬ ಬಗ್ಗೆ ತಿಳಿ ಹೇಳುತ್ತಲೇ ಇರಬೇಕು. ಅದರಲ್ಲಿ ಇನ್ನೊಂದು ಸವಾಲಿದೆ. ಈ ಮಕ್ಕಳು ಯಾರನ್ನು ತುಂಬ ಹೆಚ್ಚು ಇಷ್ಟಪಡುತ್ತವೋ ಅಥವಾ ಗೌರವಿಸುತ್ತದೋ ಅಂಥವರ ಮಾತನ್ನು ಮಾತ್ರ ಕೇಳುತ್ತವೆ.

ಸೇಡು ತೀರಿಸಿಕೊಳ್ಳುವ ವೃಶ್ಚಿಕ
ಅಂದಹಾಗೆ ಬೇರೆಯವರನ್ನು ಗೌರವಿಸುವುದು, ಇತರರ ಜತೆಗೆ ನಡೆದುಕೊಳ್ಳುವ ರೀತಿಯನ್ನು ಈ ಮಕ್ಕಳಿಗೆ ಹೇಳಿಕೊಡಬೇಕು. ಸಣ್ಣ ವಯಸ್ಸಿನ ವೃಶ್ಚಿಕದಲ್ಲಿ ಸೇಡು ತೀರಿಸಿಕೊಳ್ಳುವ ಸ್ವಭಾವ ಇರುತ್ತದೆ. ತನಗೆ ಇಷ್ಟವಾದ ಆಟಿಕೆ ಹಾಳು ಮಾಡಿದ ಓರಗೆಯ ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳಲು ಸಹ ಹಿಂಜರಿಯುವುದಿಲ್ಲ.

ಸುಲಭಕ್ಕೆ ಗುಟ್ಟು ಬಿಟ್ಟುಕೊಡಲ್ಲ
ಬೇರೆಯವರ ರಹಸ್ಯಗಳನ್ನು ಸುಲಭವಾಗಿ ತಿಳಿದುಕೊಳ್ಳುವ ವೃಶ್ಚಿಕ ರಾಶಿಯ ಮಕ್ಕಳು ತಮ್ಮ ಆಲೋಚನೆ, ರಹಸ್ಯಗಳನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡುವುದಿಲ್ಲ. ತನಗೆ ಬೇಕಾಗಿರುವುದರ ಬಗ್ಗೆ ಬಹಳ ಸ್ಪಷ್ಟತೆ ಇರುವ ಈ ಮಕ್ಕಳು ಅದನ್ನು ಪಡೆಯುವ ದಾರಿಗಳನ್ನು ಸಹ ಅರಿತಿರುತ್ತವೆ. ಈ ಮಕ್ಕಳನ್ನು ಸರಿ ದಾರಿಯಲ್ಲಿ ನಡೆಸಬೇಕು ಅಂದರೆ, ಅದಕ್ಕೆ ಬೇಕಾದ ಪ್ರೀತಿ, ಕಾಠಿಣ್ಯ, ತಂತ್ರಗಾರಿಕೆ ಎಲ್ಲವನ್ನೂ ಬಳಸಬೇಕಾಗುತ್ತದೆ.

ಚಿಕ್ಕ ವಯಸ್ಸಿನಲ್ಲೇ ಪ್ರೀತಿ- ಪ್ರೇಮ
ಈ ಮಕ್ಕಳು ಒಂದಿಲ್ಲೊಂದು ಚಟುವಟಿಕೆಯಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ನಿರತವಾಗಿರುವಂತೆ ನೋಡಿಕೊಳ್ಳಬೇಕು. ತುಂಬ ಚಿಕ್ಕ ವಯಸ್ಸಿನಲ್ಲೇ ಪ್ರೀತಿ- ಪ್ರೇಮಕ್ಕೆ ಬೀಳುವ ಸಾಧ್ಯತೆ ಇರುವುದರಿಂದ ಪೋಷಕರು ಈ ಬಗ್ಗೆ ಕೂಡ ಸ್ವಲ್ಪ ಎಚ್ಚರವಾಗಿರಬೇಕು.

ಸುಲಭಕ್ಕೆ ಇತರರ ಜತೆಗೆ ಬೆರೆಯಲ್ಲ
ಹಣಕಾಸಿನ ವಿಚಾರದ ಬಗ್ಗೆ ಈ ಮಕ್ಕಳಿಗೆ ಅರ್ಥ ಮಾಡಿಸುವುದು ತುಂಬ ಕಷ್ಟದ ಕೆಲಸ. ಯಾವುದೇ ವಿಚಾರವನ್ನು ಆಳವಾಗಿ ಚಿಂತಿಸುವ ವೃಶ್ಚಿಕ ರಾಶಿಯ ಮಕ್ಕಳು, ಬಹಳ ಬುದ್ಧಿವಂತಿಕೆ ಹೊಂದಿರುತ್ತವೆ. ಮಹತ್ವಾಕಾಂಕ್ಷೆ ಇರುತ್ತದೆ. ಎಲ್ಲರ ಜತೆಗೆ ತುಂಬ ಸುಲಭವಾಗಿ ಬೆರೆಯುವುದಿಲ್ಲ ಅನ್ನೋದು ಸಹ ಗಮನಿಸಬೇಕಾದದ್ದು.

ಚಂಚಲ ಸ್ವಭಾವ
ಈ ಮಕ್ಕಳು ತಮ್ಮಷ್ಟಕ್ಕೆ ಆಟವಾಡಲು ಬಯಸುತ್ತವೆ. ತೀರಾ ಚಂಚಲ ಸ್ವಭಾವದಿಂದ ಕ್ಷಣಕ್ಷಣಕ್ಕೂ ನಿರ್ಧಾರ ಬದಲಿಸುತ್ತವೆ. ಯಾವುದೇ ವಿಷಯ ಕೆಲ ಸಲ ಸುಲಭಕ್ಕೆ ಗೊತ್ತಾಗದಂತೆ ಕಾಣುತ್ತವೆ. ಕೆಲವು ಸಲ ತಮ್ಮ ಶತ್ರುಗಳನ್ನು ಮರೆಯುತ್ತವೆ. ಒಳತೋಟಿಗಳನ್ನು ಹಾಗೆ ಸಲೀಸಾಗಿ ಹೊರ ಹಾಕುವುದಿಲ್ಲ.

ವೈದ್ಯರು, ವಿಜ್ಞಾನಿಗಳಾಗಬಹುದು
ವೃಶ್ಚಿಕ ರಾಶಿಯ ಮಕ್ಕಳು ಯಾವುದರಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಪೋಷಕರು ಮೊದಲು ಗುರುತಿಸಬೇಕು. ಆ ಕ್ಷೇತ್ರದಲ್ಲಿ ಅವರನ್ನು ಪ್ರೋತ್ಸಾಹಿಸಬೇಕು. ವೈದ್ಯರು, ಶಸ್ತ್ರಚಿಕಿತ್ಸಕರು ಮತ್ತು ವಿಜ್ಞಾನಿಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದು ಕೂಡ ಪೋಷಕರು ಹೇಗೆ ಪ್ರೋತ್ಸಾಹಿಸುತ್ತಾರೆ ಎಂಬ ಆಧಾರದಲ್ಲಿ ನಿರ್ಧಾರವಾಗುತ್ತದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications