ಧನು ರಾಶಿ ಮಕ್ಕಳೆಂದರೆ ನಡೆದಾಡುವ ಕ್ವೆಶ್ಚನ್ ಮಾರ್ಕ್
ಈ ದಿನ ಧನುಸ್ಸು ರಾಶಿಯ ಮಕ್ಕಳ ಬಗ್ಗೆ ಲೇಖನವನ್ನು ಓದುತ್ತಿದ್ದೀರಿ. ಈ ರಾಶಿಯ ಮಕ್ಕಳು ವಿಪರೀತ ಚಟುವಟಿಕೆ ಹಾಗೂ ಖುಷಿಯಿಂದ ಇರುತ್ತದೆ. ನಗುನಗುತ್ತಾ ಸುತ್ತ ಮುತ್ತ ನಗು ಉಕ್ಕಿಸುತ್ತಾ ಇರುತ್ತವೆ. ನಿಂತಲ್ಲಿ ನಿಲ್ಲದ ಈ ಮಕ್ಕಳು ಒಂದು ಕಡೆ ಇರುವುದಿಲ್ಲ. ಹೊಸಬರು-ಹಳಬರು ಎಂಬ ಭೇದವಿಲ್ಲದೆ ಎಲ್ಲರ ಜತೆಗೂ ಚೆನ್ನಾಗಿ ಮಾತನಾಡುತ್ತವೆ.
ಈ ಮಕ್ಕಳಿಗೆ ಬೇರೆಯವರು ಅದೇ ರೀತಿ ಇರಬೇಕು ಎಂಬ ನಿರೀಕ್ಷೆಯೂ ಇರುತ್ತದೆ. ಏನಾದರೊಂದು ಚಟುವಟಿಕೆಯಲ್ಲಿ ಭಾಗಿಯಾಗಿರಬೇಕು ಎಂಬುದು ಈ ಮಕ್ಕಳ ಅಪೇಕ್ಷೆ. ಅದರಲ್ಲೂ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಸಂಬಂಧ ಹಾಗೂ ಸ್ನೇಹದ ವಿಚಾರಕ್ಕೆ ಬಂದಾಗ ಈ ರಾಶಿಯವರು ತುಂಬ ಪ್ರಾಮಾಣಿಕರು. ಇದೇ ಗುಣವನ್ನು ಮತ್ತೊಬ್ಬರಿಂದಲೂ ನಿರೀಕ್ಷೆ ಮಾಡುತ್ತವೆ.
ಈ ರಾಶಿಯ ಮಕ್ಕಳು ಉಳಿದ ರಾಶಿಯವರಿಗೆ ಹೋಲಿಸಿದರೆ ಎದ್ದು-ಬಿದ್ದು ಗಾಯ ಮಾಡಿಕೊಳ್ಳುವುದು ಜಾಸ್ತಿ. ವಿಪರೀತ ಸಾಹಸ ಪ್ರವೃತ್ತಿಯ ಇವರು ಒಂದು ಜಾಗದಲ್ಲಿ ಕೂರುವುದೇ ಅಪರೂಪ. ಓಡಾಡುವ, ಆಟವಾಡುವ ಗಡಿಬಿಡಿಯಲ್ಲಿ ಎದ್ದು-ಬಿದ್ದು ಗಾಯವಾಗುತ್ತಲೇ ಇರುತ್ತವೆ.

ಹಣಕಾಸು ಖರ್ಚು ವಿಚಾರದಲ್ಲಿ ಎಚ್ಚರ
ಈ ಮಕ್ಕಳಿಗೆ ಸಾಮಾಜಿಕ ಕಟ್ಟುಪಾಡುಗಳು ಸುಲಭಕ್ಕೆ ಅರ್ಥವಾಗುವುದಿಲ್ಲ. ಪೋಷಕರೇ ಸ್ವಲ್ಪ ಗಮನ ವಹಿಸಿ, ಹೇಳಿಕೊಡಬೇಕಾಗುತ್ತದೆ. ಇನ್ನು ಈ ರಾಶಿಯ ಮಕ್ಕಳು ಏನೇ ಮಾಡಿದರೂ ಅತಿ ಅನ್ನುವಂತೆಯೇ ಮಾಡುತ್ತವೆ. ಆದ್ದರಿಂದ ಹಣಕಾಸು ಖರ್ಚು ಮಾಡುವ ವಿಚಾರದಲ್ಲಿ ಸ್ವಲ್ಪ ತಿಳಿ ಹೇಳದಿದ್ದಲ್ಲಿ ಅನಾಹುತ ಆಗುವ ಸಾಧ್ಯತೆ ಇರುತ್ತದೆ.

ಯೌವನಾವಸ್ಥೆಯಲ್ಲಿ ಉಡಾಫೆ
ಈ ಮಕ್ಕಳು ಜೀವನ ಹೇಗೆ ಬರುತ್ತದೋ ಹಾಗೇ ಸಾಗುವಂಥವು. ಒಂದು ವೇಳೆ ಬಾಲ್ಯದಲ್ಲಿ ಕೋಪಕ್ಕೆ - ಆಕ್ರೋಶಕ್ಕೆ ಈಡಾದರೆ ಯೌವನಾವಸ್ಥೆಗೆ ಬರುವ ವೇಳೆಗೆ ಎಲ್ಲದರ ಬಗ್ಗೆ ಉಡಾಫೆ ಮನೋಭಾವ ಬೆಳೆಯುತ್ತದೆ. ಆದ್ದರಿಂದ ಈ ಬಗ್ಗೆ ಕೂಡ ಪೋಷಕರು ಹೆಚ್ಚು ಜಾಗೃತರಾಗಿ ವರ್ತಿಸಬೇಕಾಗುತ್ತದೆ.

ಕುತೂಹಲದ ಪ್ರಶ್ನೆಗಳು
ಧನುರಾಶಿಯವರಿಗೆ ಎಲ್ಲದರಲ್ಲೂ ಕುತೂಹಲ. ತಿಳಿದುಕೊಳ್ಳಬೇಕೆಂಬ ಆಸಕ್ತಿ. ಆದ್ದರಿಂದ ತಮ್ಮ ಸುತ್ತಮುತ್ತಲ ಹಲವು ವಿಷಯಗಳ ಬಗ್ಗೆ ಪ್ರಶ್ನೆ ಮಾಡುತ್ತವೆ. ಉತ್ತರ ಹೇಳಬೇಕಾದಾಗ ಸರಿಯಾದ ಕಾರಣ ಕೊಟ್ಟೇ ಕೊಡಬೇಕು. ಇದರಿಂದ ಆ ಮಕ್ಕಳ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗುತ್ತದೆ.

ಜನರ ಮಧ್ಯೆ ಇರಬೇಕು
ಸದಾ ಜನರ ಮಧ್ಯೆ ಇರಬಯಸುವ ಈ ಮಕ್ಕಳು ಮಲಗುವ ಹೊತ್ತಿನಲ್ಲೂ ಸುತ್ತ ಜನರಿರಬೇಕು ಎಂದು ಬಯಸುತ್ತವೆ. ಒಂದು ವೇಳೆ ಒಬ್ಬರನ್ನೇ ಬಿಟ್ಟು ಹೋಗುವಂಥ ಸನ್ನಿವೇಶ ಇದ್ದರೆ ಟೆಡ್ಡಿ ಬೇರ್ ಬೊಂಬೆಯನ್ನೋ ಅಥವಾ ಹೊದ್ದ ಹೊದಿಕೆಯನ್ನೋ ಜತೆಗಾರರಿದ್ದಂತೆ ತಬ್ಬಿ ಮಲಗುತ್ತವೆ. ಎಲ್ಲರನ್ನೂ ನಂಬುವ ಈ ಮಕ್ಕಳು ಅನುಮಾನ ಪ್ರವೃತ್ತಿಯವಲ್ಲ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications