ಸಿಂಹಿಣಿಯಂತೆ ಪ್ರೀತಿಸಿ, ಮಹಾರಾಣಿಯಂತೆ ಬದುಕಿರಿ

ಕರ್ಕಾಟಕ ರಾಶಿ ಪುರುಷ - ಸಿಂಹ ರಾಶಿ ಸ್ತ್ರೀ : ಇವರಿಬ್ಬರು ಮದುವೆಯಾದರೆ ಸ್ತ್ರೀ ಮಹಾರಾಣಿಯಂತೆ ಇರಬೇಕೆಂದು ಬಯಸುತ್ತಾಳೆ. ಗಂಡನನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂದು ಬಯಸುತ್ತಾಳೆ. ಕರ್ಕಾಟಕ ರಾಶಿ ಪುರುಷರು ಪ್ರೇಮಮಯ ಹೃದಯವನ್ನು ಹೊಂದಿರುತ್ತಾರೆ. ಆತ ತನ್ನ ಪತ್ನಿಯನ್ನು ಪ್ರಾಮಾಣಿಕ ಮನದಿಂದ ಪ್ರೀತಿಸುತ್ತಾರೆ. ಸಿಂಹ ರಾಶಿ ಸ್ತ್ರೀಗೂ ಸಹ ತನ್ನ ಸಂಗಾತಿಯ ಬಗ್ಗೆ ಅಪಾರವಾದ ಪ್ರೀತಿ ಇರುತ್ತದೆ. ಇಬ್ಬರು ತಮ್ಮ ಬಾಳು ಬಂಗಾರವಾಗಿ ಇರಬೇಕು ಎಂದು ಬಯಸುವ ಮನದವರು.
ಅಷ್ಟೆ ಅಲ್ಲದೆ ಬದುಕನ್ನು ಎಷ್ಟು ಪ್ರೀತಿಸಿದರೆ ಅಷ್ಟು ಉತ್ತಮ ಜೀವನ ತಮ್ಮದಾಗುತ್ತದೆ ಎಂದು ಬಲ್ಲ ಜೋಡಿ ಇವರು. ತಮ್ಮ ಸಂಸಾರ ನೂರ್ಕಾಲ ಹೀಗೆ ಸುಖ-ಸಂತೋಷದಿಂದ ಇರಬೇಕು ಎಂದು ಬಯಸುವ ಮನಸ್ಥಿತಿಯನ್ನು ಇವರಿಬ್ಬರೂ ಹೊಂದಿರುತ್ತಾರೆ. ಒಬ್ಬರನೊಬ್ಬರು ಬಿಟ್ಟು ಹೋಗಬೇಕು ಎನ್ನುವ ಸಂಗತಿಯನ್ನು ಕನಸು-ಮನಸಿನಲ್ಲೂ ಬಯಸರು. ಎಲ್ಲಿ ಅಂತಹ ಮನಸ್ಥಿತಿ ಇರುತ್ತದೆಯೋ ಅಲ್ಲಿ ಯಾವುದೇ ಬಗೆಯ ಅವಘಡ ನಡೆಯದು. ಇಬ್ಬರು ಎಂತಹ ಪರಿಸ್ಥಿತಿ ಬಂದ್ರೂ ಹೊಂದಿಕೊಂಡು ಬಾಳುತ್ತಾರೆ. ಒಬ್ಬರನ್ನೊಬ್ಬರು ಪ್ರೀತಿಸಿ ಬದುಕುತ್ತಾರೆ.
ಕರ್ಕಾಟಕ ರಾಶಿ ಸ್ತ್ರೀ - ಕನ್ಯಾ ರಾಶಿ ಪುರುಷ : ಹೆಣ್ಣಿನ ಮನಸ್ಸು ಅರಿತವರು ಯಾರಿದ್ದಾರೆ ಎನ್ನುವ ಮಾತು ನಾವು ಪುರಾಣ-ಪುಣ್ಯ ಕಥೆಯಲ್ಲಿ ಮಾತ್ರವಲ್ಲ ಇತಿಹಾಸದಿಂದ ಪ್ರಸ್ತುತ ಕಾಲದವರೆಗೂ ಓದುತ್ತಲೇ ಬಂದಿದ್ದೇವೆ. ಅದೇ ರೀತಿ ಈ ಹೆಣ್ಣಿನ ಮನವನ್ನು ಅರಿಯುವ ಕೆಲಸ ಹುಟ್ಟಿಸಿದ ದೇವರಿಗೆ ಸಾಧ್ಯ ಇಲ್ಲವೇನೋ. ಎಲ್ಲಾ ವಿಷಯದಲ್ಲೂ ಓಕೆ ಆಗಿರುವ ಕರ್ಕಾಟಕ ರಾಶಿ ಸ್ತ್ರೀಗೆ ಆಗಾಗ ಒಂಟಿಯಾಗಿ ಇರಬೇಕು ಎನ್ನುವ ಮನಸ್ಥಿತಿ ಉಂಟಾಗುತ್ತದೆಯಂತೆ. ಹಾಗೆ ಒಂಟಿಯಾಗಿ ಮೂಲೆ ಸೇರಿದಾಗ ಅವರಿಗೆ ಅವರೇ ಪ್ರಪಂಚ. ಇನ್ಯಾವುದರ ಬಗ್ಗೆ ಅರಿವು ಇರಲ್ಲ. ಇಂತಹ ವಿಚಿತ್ರ ಎಲ್ಲಾದರು ಕಂಡಿದ್ದೀರಾ? ಒಂಟಿ ಮನಸು ಸೈತಾನನ ಕಾರಗಾರ ಎಂದು ಹೇಳ್ತಾರೆ. ಆದರೆ ಈಕೆಯ ವಿಷಯದಲ್ಲಿ ಹಾಗಲ್ಲ, ಒಂಟಿಯಾಗಿ ಇದ್ದಷ್ಟು ಕಾಲ ಭವಿಷ್ಯದ ಬಗ್ಗೆ ಯೋಚಿಸುತ್ತಲೇ ಇರ್ತಾಳಂತೆ.
ಮತ್ತೊಂದು ವಿಚಿತ್ರ ಏನು ಗೊತ್ತೇ, ಈ ಜೋಡಿ ಬೆಳಿಗ್ಗೆ ಆದ ತಕ್ಷಣ ಜಗಳಕ್ಕೆ ನಿಲ್ತಾರೆ. ಆದರೆ ರಾತ್ರಿ ಆದಂತೆ ಒಟ್ಟಾಗಿ ಬಾಳ್ತಾರೆ. ಪ್ರಾಯಶಃ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಇವರನ್ನು ನೋಡೇ ಹಿಂದಿನ ಕಾಲದಲ್ಲಿ ರಚಿತವಾಗಿರಬೇಕು ಎಂದು ಕಾಣುತ್ತದೆ. ಏನೇ ಇರಲಿ ಜಗಳದಿಂದ ಸಂಬಂಧಗಳು ಹಾಳಾಗುತ್ತದೆಯೇ ವಿನಃ ಯಾವುದೇ ಬಗೆಯ ಪ್ರಯೋಜನ ಇರದು. ಆ ಸಂಗಾತಿಯನ್ನು ಅರಿತರೆ ಜೀವನ ಸುಂದರ ರಮ್ಯಲೋಕ ಆಗುತ್ತದೆ. ಯೋಚಿಸಿ ನಿಮ್ಮ ಬದುಕು ನಿಮ್ಮ ಕೈಲೆ ಇದೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications