ಮಜನೂ ಡಾರ್ಲಿಂಗ್, ಪ್ರೀತಿ ಹುಟ್ಟಿದ್ದು ಎಲ್ಲಿಂದ?

ಮಜನೂ : ಅಷ್ಟೂ ಗೊತ್ತಿಲ್ವೇನೆ ಲೈಲಿ... ಚೀನಾದಿಂದ.
ಲೈಲಾ : ಅದ್ಹೇಗೆ ಅಷ್ಟು ನಿಖರವಾಗಿ ಹೇಳ್ತೀಯಾ?
ಮಜನೂ : ಯಾಕಂದ್ರೆ ಪ್ರೀತಿಗೆ ಗ್ಯಾರಂಟಿ ಮತ್ತು ವಾರಂಟಿ ಎರಡೂ ಇರುವುದಿಲ್ಲ!
***
ಗುಂಡಣ್ಣ : ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಬಸ್ ಕಂಡಕ್ಟರ್ ನಡುವಿನ ಸಾಮ್ಯತೆ ಏನು?
ಟಿಂಗಣ್ಣ : ಏನೋಪ್ಪಾ? ನೀನೇ ಹೇಳಿಬಿಡು.
ಗುಂಡಣ್ಣ : ಸಿಂಪಲ್, ಅವರಿಬ್ಬರು ಜಪಿಸುವ ಮಂತ್ರ ಒಂದೇ, ಅದು 'ಚೇಂಜ್ ಬೇಕು'!
***
ಗುಂಡನ ಮಡದಿ ಅವಳಿ ಮಕ್ಕಳಿಗೆ ಜನ್ಮವಿತ್ತಳು
ಗುಂಡ ಇಡೀ ರಾತ್ರಿ ನಿದ್ದೆ ಮಾಡದೆ ಆಲೋಚಿಸುತ್ತಿದ್ದ..
ಗುಂಡ ಏನು ಆಲೋಚನೆ ಮಾಡುತ್ತಿದ್ದಾಂದರೆ... ಎರಡನೇ ಮಗುವಿನ ತಂದೆ ಯಾರಿರಬಹುದು ಎಂದು!
***
ರಾಜಕಾರಿಣಿಯ ಮಗ ಸ್ಕೂಲ್ ನಲ್ಲಿ ಓದುತ್ತಿದ್ದ...
ಟೀಚರ್ : ನಿಮ್ಮ ಮಗ ಫೈಲ್ ಆಗಿದ್ರೂ ನೀವು ಯಾಕೆ ಸಿಹಿ ಹಂಚುತ್ತಿದ್ದೀರಾ ಎಂದು ನನಗೆ ಅರ್ಥವಾಗುತ್ತಿಲ್ಲ.
ರಾಜಕಾರಿಣಿ : ಟೀಚರ್, ಕ್ಲಾಸ್ ನಲ್ಲಿ 50 ಜನರ ಪೈಕಿ 40 ವಿದ್ಯಾರ್ಥಿಗಳು ಫೈಲ್, ಹಾಗಿದ್ದ ಮೇಲೆ ಬಹುಮತ ನನ್ನ ಮಗನ ಕಡೆಗೆ ಇದ್ದ ಹಾಗೆ ತಾನೇ!
***
ಗುಂಡನಿಗೆ ಈಜು ಬರುತ್ತಿರಲಿಲ್ಲ. ಒಂದು ದಿನ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದ, ನೀರಿನಲ್ಲಿ ಮುಳುಗಬೇಕಾದರೆ ಕೈಗೆ ಸಿಕ್ಕಿದ ಒಂದು ಮೀನನ್ನು ದಡಕ್ಕೆ ಎಸೆದು ಹೇಳ್ತಾನೆ... ನಾನಂತೂ ಬದುಕೊಲ್ಲ.. ನೀನಾದ್ರೂ ಬದುಕೋ ಹೋಗು.
***
ನಿಜವಾದ ಗೆಳೆತನದ ಪರಮಾವಧಿ...
ತಡರಾತ್ರಿ ಮನೆಗೆ ಬಂದ ಮಗನನ್ನು ಅಪ್ಪ ಪ್ರಶ್ನಿಸುತ್ತಾನೆ.
ಅಪ್ಪ: ಎಲ್ಲಿಗೆ ಹೋಗಿದ್ದೆ ಇಷ್ಟು ಹೊತ್ತು?
ಮಗ: ಸ್ನೇಹಿತನ ಮನೆಯಲ್ಲಿದ್ದೆ ಅಪ್ಪಾ.
ಅಪ್ಪ ಅವನ 10 ಜನ ಸ್ನೇಹಿತರಿಗೆ ಫೋನ್ ಮಾಡಿ ವಿಚಾರಿಸಿದಾಗ..
ಹತ್ತು ಜನ ಸ್ನೇಹಿತರಲ್ಲಿ ಆರು ಜನ ಇಲ್ಲೇ ಇದ್ದಾ ಅಂಕಲ್ ಅಂದರು.
ಮೂರು ಜನ, ಈಗಷ್ಟೆ ಹೋರಾಟ ಅಂಕಲ್ ಹೇಳಿದರು.
ಇನ್ನೊಬ್ಬ, ಇಲ್ಲೇ ಇದ್ದಾನೆ ಅಂಕಲ್ ಫೋನ್ ಕೊಡ್ಲಾ ಅಂದಾಗ ಅಪ್ಪ ಹೌಹಾರಿದ..
***
ಗುಂಡ ರೈಲ್ವೆ ಟಿಸಿಯ ಬಳಿ ವಿಚಾರಿಸುತ್ತಾನೆ..
ಗುಂಡ: ಎಕ್ಸ್ ಪ್ರೆಸ್ ಟ್ರೈನ್ ಎಷ್ಟು ಗಂಟೆಗಿದೆ?
ಟಿಸಿ: ಒಂದು ಗಂಟೆಗೆ
ಗುಂಡ: ಲೋಕಲ್ ಟ್ರೈನ್?
ಟಿಸಿ: 9 ಗಂಟೆಗೆ
ಗುಂಡ: ಗೂಡ್ಸ್ ಗಾಡಿ..?
ಟಿಸಿ: ನಿನಗೆ ಎಲ್ಲಪ್ಪಾ ಹೋಗಬೇಕು?
ಗುಂಡ: ಎಲ್ಲೂ ಇಲ್ಲಾ.. ಹಳಿ ದಾಟಬೇಕಿತ್ತು.












Click it and Unblock the Notifications