Get Updates
Get notified of breaking news, exclusive insights, and must-see stories!

ಸರಸ ಜನನ ವಿರಸ ಮರಣ ಸಮರಸವೇ ಜೀವನ

Love compatibility astrology
ಗಂಡು ಹೆಣ್ಣಿನ ನಡುವೆ ಸಹಕಾರ, ಸಾಮರಸ್ಯ ತುಂಬಾ ಅಗತ್ಯ ಎಂಬ ಸರಳ ಸತ್ಯವನ್ನು ದಂಪತಿಗಳು ಅರಿತರೆ ಬಾಳು ಬಂಗಾರವಾಗಿರುತ್ತದೆ. ಎಲ್ಲರೂ ಮೆಚ್ಚುವಂತೆ ಎರಡು ದೇಹ ಒಂದು ಜೀವ ಎಂಬಂತೆ ಬದುಕಿದರೆ ಎಷ್ಟು ಚೆಂದ ಅಲ್ಲವೆ? ಪ್ರೀತಿ ನೀಡಿ ಪ್ರೀತಿ ಗಳಿಸುವಂಥ ಸಂಗಾತಿ ಎಲ್ಲರ ಜೀವನದಲ್ಲೂ ಸಿಗಲಿ.

* ಧವಳ

ಮಿಥುನ ರಾಶಿ ಪುರುಷ - ಕುಂಭ ರಾಶಿ ಸ್ತ್ರೀ : ಕುಂಭ ರಾಶಿ ಸ್ತ್ರೀ ಬದುಕನ್ನು ಸಫಲಗೊಳಿಸುವ ಮನೋಭಾವ ಹೊಂದಿರುತ್ತಾಳೆ. ಇಂಥ ಸಂಗಾತಿ ಸಿಕ್ಕರೆ ಯಾರಿಗೆ ಖುಷಿ ಬದುಕು ಸಿಗದು ಹೇಳಿ. ಕ್ಷಮಾಗುಣ ಈ ಹೆಣ್ಣುಮಗಳ ವಿಶೇಷತೆ. ಪ್ರೀತಿಯ ವಿಷಯದಲ್ಲಿ ಆಗಾಗ ಇವರಿಂದ ತಪ್ಪು ನಡಿತಾನೆ ಇರುತ್ತೆ, ಆದರೆ ಪ್ರೀತಿ ಅನ್ನುವ ಮಾದಕ ಮದಿರೆಯನ್ನು ಕುಡಿದವರಿಗೆ ಅದರ ಸೆಳೆತ ಇದ್ದೆ ಇರುತ್ತದೆ ಅಲ್ವೆ ಹಾಗೆ ಈಕೆಯ ಕಥೆಯು. ಮದುವೆ ಆದ ಬಳಿಕ ಸಂಗಾತಿಯನ್ನು ಪ್ರೀತಿಸುವ ವಿಷಯದಲ್ಲಿ ಸದಾ ಮುಂದು. ಈಕೆಯನ್ನು ಪತಿರಾಯ ಎಷ್ಟು ಪ್ರೀತಿಸಿದರೆ ಅದಕ್ಕಿಂತ ಡಬ್ಬಲ್ ಪ್ರೀತಿಯನ್ನು ಪಡೆಯುತ್ತಾನೆ. ಈಕೆಯ ಒಂದು ವಿಭಿನ್ನ ಗುಣ ಅಂದ್ರೆ ತಾನು ಹೇಳಿದ್ದು ಸಂಗಾತಿಗೆ ಸರಿಯಾಗಿ ಅರ್ಥ ಆಗಿಲ್ಲ, ನಾನೇನೋ ಹೇಳಿದ್ರೆ ಈತನೇನೋ ತಿಳಿಯುತ್ತಾನೆ ಎಂದು ಕಲ್ಪನೆ ಮಾಡಿಕೊಳ್ಳುವ ಗುಣ ಹೆಚ್ಚು. ಕೆಲವು ಸಂದರ್ಭಗಳಲ್ಲಿ ಇದು ವಿಕೋಪಕ್ಕೂ ತಿರುಗುತ್ತದೆ. ಅತಿ ವಿಚಿತ್ರ ಅಂಶ ಈ ರಾಶಿಯ ಸ್ತ್ರೀಯರಲ್ಲಿ ಇದೆ, ಅಕಸ್ಮಾತ್ ಆಕೆ ಸಿಕ್ಕಾಪಟ್ಟೆ ನಗುತ್ತಾ ಇದ್ದಾಳೆ ಅಂದ್ರೆ ಆಕೆಯ ಹೃದಯದ ದುಃಖದಿಂದ ಭಾರವಾಗಿದೆ ಎಂದೇ ಅರ್ಥ. ಅದೇ ರೀತಿ ಆಕೆ ಅಳ್ತಾ ಇದ್ದಾಳೆ ಎಂದರೆ ಅವಳು ಹ್ಯಾಪಿ ಹ್ಯಾಪಿಯಾಗಿದ್ದಾಳೆ ಎಂದು ತಿಳಿಯಿರಿ.

ಮಿಥುನ ರಾಶಿ ಸ್ತ್ರೀ - ಮೀನ ರಾಶಿ ಪುರುಷ : ಮಿಥುನ ರಾಶಿ ಸ್ತ್ರೀಯರ ಮನವು ಎಳೆಯ ಮಕ್ಕಳಂತೆ ಮುಗ್ಧವಾಗಿರುತ್ತದೆ. ಭಾವುಕತೆಯ ಮಾತೊಂದು ರೂಪವೇ ಇವರಾಗಿರುತ್ತಾರೆ. ವೃತ್ತಿ, ತಾಯಿ ತಂದೆಯರ ವಿಷಯದಲ್ಲಿ ಆಗಾಗ ವಿವಾದಗಳು ಉಂಟಾಗುತ್ತವೆ. ಇಂತಹ ಸಂಗತಿಗಳೇ ಸಂಗಾತಿಯೊಂದಿಗೆ ಬಿರುಕು ಉಂಟಾಗಲು ಕಾರಣ ಆಗುತ್ತದೆ. ಯಾವಾಗ ಒಬ್ಬರ ಮನಸ್ಸು ಮತ್ತೊಬ್ಬರ ಬಗ್ಗೆ ಬೇಸರ ತಾಳುತ್ತದೆಯೋ ಆಗ ಮನಸ್ಸಿನ ಅಂತರ ಹೆಚ್ಚಾಗುತ್ತದೆ. ಇನ್ನು ಮೀನ ರಾಶಿಯ ಪುರುಷರ ವಿಷಯಕ್ಕೆ ಬರುವುದಾದರೆ ಇವರು ಕನಸು ಕಾಣುವುದಕ್ಕೆ ಹೆಚ್ಚು ಗಮನ ನೀಡ್ತಾರೆ. ಹೀಗಿದ್ರೆ ಚೆನ್ನ, ಹಾಗಾದ್ರೆ ಇನ್ನೂ ಚೆನ್ನ ಎನ್ನುವ ಕನಸು ಆತನದು. ತನ್ನ ಸಂಗಾತಿಯ ಕನಸುಗಳನ್ನು ಅರ್ಥಮಾಡಿಕೊಂಡು ತನ್ನ ಕೈಲಿ ಆಗುವಂತಹುದ್ದನ್ನು ನೆರೆವೇರಿಸುವ ಪ್ರಯತ್ನ ಮಾಡಿದರೆ ಈಕೆ ಪತಿಯ ಜೊತೆ ಸುಖವಾಗಿರಬಹುದು. ಆದರೆ ಈತ ಹುಚ್ಚು ಹುಚ್ಚಾಗಿ ಕನಸುಗಳನ್ನು ಕಂಡ್ರೆ ಅದನ್ನು ನೆರವೇರಿಸಲು ಸಾಧ್ಯವೇ? ಇದು ಸಹ ಯೋಚಿಸಬೇಕಾದ ವಿಷಯ, ಆಗ ಇದ್ದೆ ಇದೆಯಲ್ಲ ದಂಡಂ ದಶಗುಣಂ!

ಮಿಥುನ ರಾಶಿ ಪುರುಷ - ಮೀನ ರಾಶಿ ಸ್ತ್ರೀ : ಮೀನ ರಾಶಿ ಸ್ತ್ರೀ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುವ ಗುಣ ಹೊಂದಿರುತ್ತಾಳೆ. ತನ್ನ ಬಾಳ ಸಂಗಾತಿಯ ಮನಸ್ಸಿನಂತೆ-ಇಚ್ಛೆಯಂತೆ ನಡೆಯಲು ಇಷ್ಟ ಪಡುತ್ತಾಳೆ. ಕಾಣಿಕೆಗಳನ್ನು ಕೊಟ್ಟು -ತೆಗೆದುಕೊಳ್ಳುವ ವಿಷಯ ಇಬ್ಬರಿಗೂ ಖುಷಿ ತರುವಂತಹದ್ದು. ಮಿಥುನ ರಾಶಿ ಪುರುಷ ಸಹ ಬದಲಾವಣೆಯನ್ನು ಇಷ್ಟಪಡುವ ವ್ಯಕ್ತಿತ್ವ. ಆ ಮಾರ್ಪಾಟಿನ ವಿಷಯದಲ್ಲಿ ತನ್ನ ಸಹಕಾರದ ಅಗತ್ಯ ತುಂಬಾ ಇರುತ್ತದೆ ಎನ್ನುವ ಸರಳ ಸತ್ಯವನ್ನು ಈ ಜಾಣೆ ಅರಿತಿರುತ್ತಾಳೆ. ಈ ಸಂಗತಿಯೇ ಇವರಿಬ್ಬರ ದಾಂಪತ್ಯ ಹಸನಾಗಿರಿಸುತ್ತದೆ. ಈ ಜೋಡಿ ಜೋಡಿ ಹಕ್ಕಿಗಳೆಂದು ಕರೆಸಿಕೊಳ್ಳುವುದಕ್ಕೆ ಲಾಯಕ್ಕಾಗಿರುತ್ತಾರೆ. ಅಷ್ಟೊಂದು ಸಾಮರಸ್ಯ ಹಾಗೂ ಪ್ರೀತಿ ಇವರಿಬ್ಬರ ಬಾಂಧವ್ಯದಲ್ಲಿ ಇರುತ್ತದೆ. ಇವರಿಬ್ಬರಿಗೂ ಒಬ್ಬರ ಮನಸ್ಸು ಮತ್ತೊಬರಿಗೆ ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಇಂತಹ ಸಂಗಾತಿಯನ್ನು ತಾನೆ ಎಲ್ಲರು ಬಯಸುವುದು. ಸರಸ ಜನನ, ವಿರಸ ಮರಣ, ಸಮರಸವೇ ಜೀವನ ಎಂಬ ಬೇಂದ್ರೆಯವರ ನುಡಿಮುತ್ತನ್ನು ಗಮನವಿಟ್ಟುಕೊಂಡರೆ ಜೀವನದಲ್ಲಿ ಎಲ್ಲವೂ ಸಲೀಸು. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)

(ಮುಂದಿನ ಕಂತಿನಿಂದ ಕರ್ಕಾಟಕ ರಾಶಿಯ ಪುರುಷ ಸ್ತ್ರೀಯರ ಬಾಂಧವ್ಯ ಇತರ ರಾಶಿಯವರೊಂದಿಗೆ ಹೇಗಿರುತ್ತದೆ ಎಂಬುದನ್ನು ತಿಳಿಯುವಿರಿ.)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+