ಪಕ್ಕದ್ಮನೆಯವ್ರಿಗೆ ಹೊಟ್ಟೆ ಕಿಚ್ಚಾಗುವಂತೆ ಬದುಕಿರಿ

* ಧವಳ
ಮಿಥುನ ರಾಶಿ ಪುರುಷ - ಧನುಸ್ಸು ರಾಶಿ ಸ್ತ್ರೀ : ಭಾವುಕತೆ ಪ್ರತಿಯೊಬ್ಬರಲ್ಲೂ ಹುದುಗಿರುವ ಸಂಗತಿ. ಆದರೆ ಕೆಲವರಲ್ಲಿ ಅದರ ಪ್ರಮಾಣ ಹೆಚ್ಚಾಗಿರುತ್ತದೆ. ಧನಸ್ಸು ರಾಶಿ ಸ್ತ್ರಿಯರಲ್ಲೂ ಇಂತಹುದ್ದೆ ಗುಣ ಇದೆ. ಆದರೆ ಅದರ ಪ್ರಮಾಣ ಅತಿ ಹೆಚ್ಚಾಗಿರುವುದರಿಂದ ಮಾತನಾಡುವ ರಭಸದಲ್ಲಿ ಅತೀ ಭಾವುಕತೆ ಉಂಟಾಗಿ ಬಿಡುತ್ತದೆ. ಇವರಿಗೆ ಉದ್ವೇಗವೂ ಜಾಸ್ತಿ. ಆದರೆ ಮಿಥುನ ರಾಶಿ ಪುರುಷ ಇದಕ್ಕೆ ಸಂಪೂರ್ಣ ವಿರುದ್ಧ ಗುಣಸ್ವಭಾವ ಹೊಂದಿರುತ್ತಾರೆ. ಇವರಿಗೊಂದು ವಿಚಿತ್ರ ಸ್ವಭಾವವಿದೆ. ತನ್ನ ಸಂಗಾತಿಗೆ ನೋವು ಉಂಟು ಮಾಡುವ ವಿಷಯದಲ್ಲಿ ಮುಂದು. ನೋಯಿಸಿ ಸುಮ್ಮನಾಗೋದಿಲ್ಲ, ತಮ್ಮ ತಪ್ಪಿನ ಅರಿವಾಗಿ ಆಕೆಯನ್ನು ಸಮಾಧಾನ ಮಾಡಲು ಹೊರಡುತ್ತಾರೆ. ಅದೇನೋ ಹೇಳ್ತಾರಲ್ಲ ಆತುರಗಾರನಿಗೆ ಬುದ್ಧಿಮಟ್ಟ ಎಂದು, ಹಾಗೆ. ಇದು ಇವರ ಬದುಕಲ್ಲಿ ನಡೆಯುವ ಸಾಮಾನ್ಯ ಸಂಗತಿ. ಹೇಗಿದ್ರು ತಾವು ದುರ್ವಾಸಮುನಿ ವಂಶಕ್ಕೆ ಸೇರಿದವರು, ತಮ್ಮ ಪತ್ನಿಯು ಕಾವೇರಿ-ಗಂಗೆ ಕಾಂಟ್ರಾಕ್ಟ್ ತಗೊಂಡಿದ್ದಾರೆ ತಮಗೆ ಎಂದು ಗೊತ್ತಿದೆ, ಸೋ ನೀವು ಸ್ವಲ್ಪ ಸಮಾಧಾನಚಿತ್ತರಾದರೆ ಒಳ್ಳೆಯದು. ಇಷ್ಟೆಲ್ಲಾ ಜಟಾಪಟಿ ಇದ್ರು ಒಬ್ಬರ ಭಾವನೆಯನ್ನು ಮತ್ತೊಬ್ಬರು ಗೌರವಿಸುತ್ತಾರೆ. ಇಂತಹ ವಿಚಿತ್ರಗಳು ದಾಂಪತ್ಯ ಬದುಕಲ್ಲಿ ಇರುತ್ತವೆ.
ಮಿಥುನ ರಾಶಿ ಸ್ತ್ರೀ - ಮಕರ ರಾಶಿ ಪುರುಷ : ಕೆಲವರ ಗುಣ ಸ್ವಲ್ಪ ವಿಚಿತ್ರ. ಅದೇನು ಹೇಳ್ತಾರಲ್ಲ ಶಿವಲೀಲೆ ಎಂದು. ಪ್ರಪಂಚಕ್ಕೆ ಅರ್ಥ ಆಗುವಂತಹ ಸರಳ ವಿಷಯ ಅವರಿಗೆ ಅರ್ಥ ಆಗುವುದೇ ಇಲ್ಲ. ಈ ಅಂಶವೇ ಮಕರ ರಾಶಿ ಪುರುಷರಿಗೆ ಆಶ್ಚರ್ಯ ತರಿಸುವ ಸಂಗತಿ. ಪ್ರಪಂಚಕ್ಕೆ ಅರ್ಥ ಆಗುವ ಸರಳ ವಿಷಯ ಮಿಥುನ ರಾಶಿ ಸ್ತ್ರೀಗೆ ಯಾಕೆ ಗೊತ್ತೇ ಆಗ್ತಾ ಇಲ್ಲ? ಎಂದು ಸದಾ ಚಿಂತಿಸ್ತಾರೆ. ಆದರೆ ಮಿಥುನ ರಾಶಿ ಸ್ತ್ರೀಗೆ ಸ್ವಲ್ಪ ಹಾಗೆ ಪೆದ್ದು. ಜೊತೆಗೆ ಪುಕ್ಕಲು ಸ್ವಭಾವ. ಸ್ವಲ್ಪ ಸಹನೆಯಿಂದ ಆಕೆಯನ್ನು ತಿದ್ದಿದರೆ ಬದುಕು ಸುಂದರ. ಎಲ್ಲರು ಒಂದೇ ರೀತಿಯ ಗುಣ ಹೊಂದಿರಬೇಕು ಎಂದೇನೂ ಇಲ್ಲ ತಾನೆ. ಬದುಕು ಚೆನ್ನಾಗಿರಬೇಕಾದರೆ ನೀವು ಹೆಂಡತಿಯ ವಿಷಯದಲ್ಲಿ ಸಹನೆ ತೆಗೆದುಕೊಂಡರೆ ಆಯ್ತು. ಜೀವನಕ್ಕಿಂತ ಏನ್ರೀ ಮುಖ್ಯ? ಅವಳ ಪಾಡಿಗೆ ಅವಳಿರಲಿ ನನ್ನ ಪಾಡಿಗೆ ನಾನು ನಿರ್ಧಾರ ತಗೋತೀನಿ ಎಂದು ಆತುರ ಪಟ್ರೋ ತೊಂದ್ರೆ ಕಟ್ಟಿಟ್ಟ ಬುತ್ತಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)












Click it and Unblock the Notifications