ನಿಮಗೊಂದು ಕಿವಿಮಾತು, ಹೆಂಡ್ತಿ ಮಾತು ಕೇಳಿ!

To be happy just listen to your wife
ಸುಖ ಸಂಸಾರಕ್ಕೆ ಎಷ್ಟು ಸೂತ್ರಗಳೋ ಬಲ್ಲವರು ಯಾರು? ಹೆಂಡ್ತಿ ಮಾತನ್ನು ಕೇಳಿದವನು ಒಂದರ್ಥದಲ್ಲಿ ಸುಖವಾಗಿ ಬಾಳುತ್ತಾನೆ ಎನ್ನುವುದು ಆ ಸೂತ್ರಗಳಲ್ಲಿ ಒಂದೆನ್ನುವುದನ್ನು ಹೆಚ್ಚು ಗಂಡಂದಿರು ಅಲ್ಲಗಳೆಯಲಾರರು. ಹಾಗೆಂದು, ಹೆಂಡ್ತಿ ಮಾತು ಕೇಳುವವರು ಹೆನ್ಪೆಕ್ಡ್ ಹಸ್ಬೆಂಡ್ ಅಂತೇನೂ ತಿಳಿಯಬೇಕಿಲ್ಲ, ಅಲ್ವಾ?

* ಧವಳ

ಮಿಥುನ ರಾಶಿ ಪುರುಷ - ವೃಶ್ಚಿಕ ರಾಶಿ ಸ್ತ್ರೀ : ಈ ಪುರುಷನಿಗೆ ಸ್ತ್ರೀಯನ್ನು ಹೆಚ್ಚು ಪ್ರೀತಿಸುವುದು ಗೊತ್ತಿಲ್ಲ. ಒಬ್ಬರೊಂದಿಗೆ ಮತ್ತೊಬ್ಬರು ವಿಶ್ವಾಸ ಹೊಂದಿರುತ್ತಾರೆ. ಮಾನಸಿಕ ಅಂತರ ಹೆಚ್ಚಾದರೆ ಕಾರಣ ತಿಳಿಯುವುದೇ ಇಲ್ಲ ಇಬ್ಬರಿಗೂ! ಪ್ರಪಂಚದ ಮಾತು ಅರ್ಥಾತ್ ಪರರ ಮಾತಿಗೆ ಹೆಚ್ಚು ಕಿವಿ ಕೊಡುವ ಮನುಷ್ಯ ಈತ. ಅಂದ್ರೆ ಬದುಕು ಹಂಚಿಕೊಳ್ಳಲು ಬಂದ ಬಾಳ ಸಂಗಾತಿಯ ಮಾತಿಗಿಂತ ಪಕ್ಕದ ಮನೆಯ ಆಂಟಿ ಮಾತೇ ಸರಿ ಅಂದ್ರೆ ಯಾರಿಗೆ ಕೋಪ ಬರುವುದಿಲ್ಲ ಹೇಳಿ? ಈತನನ್ನು ಆ ಭಗವಂತ ಅದ್ಯಾವ ಗಳಿಗೆಯಲ್ಲಿ ಸೃಷ್ಟಿ ಮಾಡಿದನೋ ಗೊತ್ತಿಲ್ಲ, ಸದಾ ಬೇರೆಯವರ ಮಾತಿಗೆ ಮರ್ಯಾದೆ. ಇದು ಸಂಸಾರದಲ್ಲಿ ಸಮರಸ ಕಡಿಮೆ ಆಗಲು ಕಾರಣ ಆಗುತ್ತದೆ. ರೀ ಈ ದುರ್ಗುಣದಿಂದ ಮನೆಯ ನೆಮ್ಮದಿಯನ್ನು ಪರರಿಗೇಕೆ ಮಾರ್ತೀರಿ? ನಂಬಿ ಬಂದವಳ ಹೃದಯಕ್ಕೆ ಘಾಸಿ ಮಾಡದಿರಿ.

ಮಿಥುನ ರಾಶಿ ಸ್ತ್ರೀ - ಧನಸ್ಸು ರಾಶಿ ಪುರುಷ : ಧನಸ್ಸು ರಾಶಿ ಪುರುಷ ಉತೃಷ್ಟವಾದ ಸ್ವಭಾವ ಹೊಂದಿರುತ್ತಾರೆ. ಒಂದರ್ಥದಲ್ಲಿ ಹೇಳುವುದಾದರೆ ಭೂಮಿ ತೂಕದ ಮನುಷ್ಯ. ಗೌರವಾನ್ವಿತ ವ್ಯಕ್ತಿತ್ವ. ಆದ್ರೆ ಹೆಂಡತಿ ಮಾತ್ರ ಉಹುಂ ಒಂದು ಮಾತಿಗೆ ಬದ್ಧ ಆಗಿರೋಲ್ಲ. ಇವತ್ತು ಪಿಜ್ಜಾ ತಿನ್ನೋಣ ಎಂದು ಹೇಳಿರ್ತಾಳೆ ಆದ್ರೆ ನಾಳೆ ಬಜ್ಜಿ ಸಾಕು ಎಂದು ನಿರ್ಧಾರ ಬದಲಾಯಿಸಿ ಬಿಡ್ತಾಳೆ. ಪಾಪ ಪಿಜ್ಜಾ ಆಸೆಯನ್ನು ಹೊತ್ತ ಪತಿದೇವ ಬಜ್ಜಿಯಲ್ಲೇ ತೃಪ್ತಿ ಹೊಂದಬೇಕು. ಆದರೆ ಈ ಜೋಡಿ ಜಗಳ ಆಡೋಕೆ ಪ್ರಾಮುಖ್ಯತೆ ಕೊಡಲ್ಲ, ಇದೆ ಇವರ ವಿಶೇಷತೆ. ಒಂದರ್ಥದಲ್ಲಿ ಸಮಾಜಕ್ಕೆ ಈ ಜೋಡಿಯು ಇಷ್ಟ ಆಗುತ್ತದೆ. ಮತ್ತೊಂದು ವಿಶೇಷ ಮಿಥುನ ರಾಶಿ ಸ್ತ್ರಿಯದ್ದು ಇದೆ. ಎಲ್ಲದಕ್ಕೂ ತಪ್ಪು ತಿಳಿಯಲ್ಲ. ಸಾರಿ ಕಣೆ ನಿಜವಾಗಿಯು ಆಫೀಸ್ನಲ್ಲಿ ಮೀಟಿಂಗ್ ಇತ್ತು ಅದಕ್ಕೆ ಸಂಜೆ ನಿನ್ನನ್ನು ಶಾಪಿಂಗ್ ಗೇ ಕರೆದುಕೊಂಡು ಹೋಗಲು ಆಗಲಿಲ್ಲ ಎಂದರೆ, ಹೋಗ್ಲಿ ಬಿಡಿ ಪಾಪ ನೀವೇನು ಮಾಡೋಕೆ ಆಗುತ್ತೆ ಆ ಹಾಗಲಕಾಯಿ ಮುಖದ ಬಾಸ್ ಹತ್ರ ಹೆಣಗೋದು ಅಂದ್ರೆ ಸುಮ್ನೆನಾ? ಎಂದು ಸಮಾಧಾನ ಚಿತ್ತದಿಂದ ಕಾಫಿ ಕೊಟ್ಟು ಒಳ್ಳೆಯ ಮಾತುಗಳನ್ನು ಹೇಳುವಂತಹ ಒಳ್ಳೆಯ ಹೆಣ್ಣುಮಗಳು. ಇಂತಹ ಸಂಗಾತಿಯನ್ನು ಹೆಚ್ಚು ಪ್ರೀತಿಯಿಂದ ಕಾಪಾಡುವ ಹೊಣೆ ನಿಮ್ಮ ಮೇಲೆ ಇದೆ ಮಹನೀಯರೇ! (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+