ಹಾಲು ಜೇನು ಒಂದಾದ ಹಾಗೆ ಇವರ ಜೀವನ

* ಧವಳ
ಮಿಥುನ ರಾಶಿ ಪುರುಷ - ತುಲಾ ರಾಶಿ ಸ್ತ್ರೀ : ಇಬ್ಬರಲ್ಲೂ ಭರಪೂರ ಪ್ರೀತಿಯು ತುಂಬಿರುತ್ತದೆ. ತಾವು ಒಬ್ಬಂಟಿಯಾಗಿದ್ದಾಗ ಬಿಡಿ ಆ ವಿಷ್ಯ ಬೇರೆ, ಆದರೆ ಸಂಗಾತಿಯ ಜೊತೆ ಆದಾಗ ಅವರ ಸ್ವಭಾವದಲ್ಲಿ ತುಂಬಾ ಬದಲಾವಣೆ ಕಂಡು ಬರುತ್ತದೆ. ತಮ್ಮ ಸಂಗಾತಿ ಬಗ್ಗೆ ಅಪಾರ ಗೌರವ ಹೊಂದಿರುತ್ತಾರೆ ಸ್ತ್ರೀಯರು. ಮಿಥುನ ರಾಶಿಯವರು ಸಹ ಅದೇ ರೀತಿಯ ಗುಣವನ್ನು ಹೊಂದಿರುತ್ತಾರೆ. ಇದು ಈ ಜೋಡಿಯ ಪ್ರೀತಿಯನ್ನು ಹೆಚ್ಚುಗಟ್ಟಿಗೊಳಿಸುತ್ತದೆ. ಸಂಗಾತಿಯ ಸುಖಕ್ಕಾಗಿ ತಮ್ಮ ಕಾಲ ಮೀಸಲಿಡುವ ಗುಣ ಇವರಿಬ್ಬರಲ್ಲೂ ಇರುತ್ತದೆ. ಒಂದರ್ಥದಲ್ಲಿ ಒಬ್ಬರಿಗಾಗಿ ಮತ್ತೊಬ್ಬರು ಹುಟ್ಟಿದ್ದಾರೆ ಎಂದು ಹೇಳಬಲ್ಲ ದಂಪತಿಗಳು. ಹಣಕಾಸಿನ ವಿಷಯದಲ್ಲಿ ಇವರಿಬ್ಬರೂ ಸ್ವಲ್ಪ ಭಿನ್ನ ಗುಣ ಹೊಂದಿರುತ್ತಾರೆ. ಮಿಥುನರಾಶಿ ಪುರುಷ ಅಗತ್ಯ ಇರುವಷ್ಟು ಹಣ ಕೂಡಿಡಲು ಗಮನ ಕೊಟ್ರೆ, ತುಲಾ ರಾಶಿ ಸ್ತ್ರೀಯರು ತುಂಬಾ ಜಾಸ್ತಿ ದುಡ್ಡು ಸಂಪಾದಿಸಲು ಇಷ್ಟ ಪಡ್ತಾರೆ. ಸಂಸಾರದಲ್ಲಿ ಈ ಅಂಶ ಜಗಳಕ್ಕೆ ಕಾರಣ ಆಗಬಾರದು. ಯೋಚಿಸಿ ಸ್ವಲ್ಪ ಹುಳಿ ಸಾಕು ಹಾಲು ಒಡೆಯಲು!
ಮಿಥುನ ರಾಶಿ ಸ್ತ್ರೀ - ವೃಶ್ಚಿಕ ರಾಶಿ ಪುರುಷ : ಇವರಿಬ್ಬರು ಅತ್ಯುತ್ತಮ ಬಾಳಸಂಗಾತಿಗಳು. ಇವರಲ್ಲಿ ಇರುವ ವಿಶೇಷತೆ ಏನಂದ್ರೆ ಯಾವುದೇ ನಿರ್ಣಯ ತೆಗೆದುಕೊಂಡರು ಅದರಿಂದ ತಪ್ಪು ಫಲಿತಾಂಶ ಕಂಡು ಬಂದ್ರೆ, ತಪ್ಪು ಒಬ್ಬರ ಮೇಲೆ ಒಬ್ಬರು ಹೊರಿಸುವ ದುಷ್ಟ ಗುಣ ಹೊಂದಿಲ್ಲ. ಇಂತಹ ದೊಡ್ದ ಗುಣ ಇಬ್ಬರ ಬಾಂಧವ್ಯವನ್ನು ಸದಾ ಸುಂದರವಾಗಿ ಇಟ್ಟಿರುತ್ತದೆ. ಅದೇ ರೀತಿ ಅವರ ಬದುಕನ್ನು ಹಸನಾಗಿ ಇಡುತ್ತದೆ. ತನ್ನ ಪತ್ನಿಯ ಬಗ್ಗೆ ಕಾಳಜಿ, ಆಸಕ್ತಿ, ಅಕ್ಕರೆ ಎಲ್ಲವು ಪತಿಗೆ ಇರುತ್ತದೆ. ಗಂಡನ ಈ ಅಮಿತವಾದ ಪ್ರೀತಿಯನ್ನು ಕಂಡಾಗ ಯಾವ ಹೆಣ್ಣು ತಾನೆ ಸೋಲಲ್ಲ, ಆಕೆಯು ಸಹ ತನ್ನ ತನ್ನವನ ಈ ಪ್ರೀತಿಯನ್ನು ಜೋಪಾನವಾಗಿ ಕಾಯ್ದಿಡುತ್ತಾಳೆ ಹಾಗೂ ಕಾಪಾಡುತ್ತಾಳೆ. ಈ ಸಂಗತಿಗಳು ಇವರಿಬ್ಬರ ಪ್ರೀತಿಯನ್ನು ಮತ್ತಷ್ಟು ಗಟ್ಟಿ ಮಾಡುತ್ತದೆ. ಇಬ್ಬರ ಹೃದಯದಲ್ಲಿ ಸದಾ ನೆಲೆ ನಿಂತಿರುವುದು ಪ್ರೀತಿ ಪ್ರೀತಿ ಪ್ರೀತಿ! ಅದೇ ಅವರ ಜೀವನದ ಅಡಿಪಾಯವನ್ನು ದೃಢ ಮಾಡುವ ಸಂಗತಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)












Click it and Unblock the Notifications