ಹೆಂಡತಿ ಕುಲುಕುಲು ನಕ್ಕರೆ ಬಾಳು ಹಾಲು ಸಕ್ಕರೆ!

* ಧವಳ
ಮಿಥುನ ರಾಶಿ ಸ್ತ್ರೀ - ಮಿಥುನ ರಾಶಿ ಪುರುಷ
ಮಿಥುನ ರಾಶಿಯವರು ಸದಾ ಅನ್ವೇಷಣೆಯನ್ನು ಮಾಡ್ತಾ ಇರ್ತಾರೆ. ಒಂದರ್ಥದಲ್ಲಿ ಕುತೂಹಲಿಗಳು. ಆದರೆ ಅದು ಕೆಟ್ಟ ರೀತಿಯ ಕುತೂಹಲವಲ್ಲ. ಸದಾ ಹೊಸ ಬಗೆಯ ವಿಷಯಗಳನ್ನು ಕಲಿಯಬೇಕು ಎನ್ನುವ ತುಡಿತ ಅವರಲ್ಲಿ ಸದಾ ಜಾಗೃತ ಆಗಿರುತ್ತದೆ. ಈ ರಾಶಿಯವರು ಮಾತಿಗೇನು ಬರ ಇಲ್ಲದಂತೆ ಆಡ್ತಾರೆ, ಬಿಟ್ರೆ ದಿನಗಟ್ಟಲೆ ಆಡ್ತಾನೆ ಇರ್ತಾರೆ. ಆದರೆ ಅವರು ತಮ್ಮ ಮನದಲ್ಲಿ ಏನಿದೆ ಎನ್ನುವುದನ್ನು ಹೇಳುವುದಕ್ಕೆ ಹೋಗೋದೇ ಇಲ್ಲ. ಕೋಪ ಬಂದಿದ್ರೆ ಮೌನವಾಗಿ ಇದ್ದು, ಅದನ್ನು ತೋರ್ಪಡಿಸದೆ ಇದ್ರೆ ಏನೂ ತೊಂದ್ರೆ ಇಲ್ಲ. ಆದರೆ ಅದೇ ಪ್ರೀತಿಯ ವಿಷಯ ಆದ್ರೆ ಏನ್ರೀ ಗತಿ? ಅದು ಹೊರಗೆ ಬರದೆ ಹಾಗೆ ಉಳಿದು ಬಿಟ್ಟರೆ, ಆಗ ಯಾರಿಗೆ ನಷ್ಟ?
ಇನ್ನೊಂದು ತಮಾಷೆ ಅಂದ್ರೆ ಈ ರಾಶಿಯವರಲ್ಲಿ ಶೇ.75ರಷ್ಟು ಜನರಿಗೆ ಕೇವಲ ಒಂದು ಹೆಸರು ಇರೋದಿಲ್ಲ ಬೇಕಾದಷ್ಟು ಹೆಸರಿಂದ ಅವರು ಪರಿಚಿತರು. ಹೆಸರುಗಳು ಕೇಳೋಕೆ ಅಂದ ಚಂದವಾಗಿದ್ರೆ ಒಳ್ಳೇದು ಅಲ್ವ? ಈ ರಾಶಿಯ ಸ್ತ್ರೀಯರು ಸದಾ ನಗುತ್ತಲೇ ಇರ್ತಾರೆ. ಆ ಮುದ್ದಾದ ನಗೆ ನೋಡಿದ ಗಂಡು ಸಿಂಹ ಎಂದಿಗೂ ಕೋಪ ಮಾಡಿಕೊಳ್ಳುವ ಛಾನ್ಸೇ ಇಲ್ಲ. ಸಾರಿಗೆ ಉಪ್ಪು ಹಾಕಿದ್ರೆನೂ, ನಗುತ್ತ ನಗುತ್ತಾ ಬಡಿಸಿದರೆ ಆ ಬಡಪಾಯಿ ಆ ನಗು ನೋಡ್ತಾ ಉಣ್ತಾರೆ! ದುಃಖಿಸುವ ಪ್ರಮಾಣವೂ ತುಂಬಾ ಕಡಿಮೆ. ಇವರು ತನ್ನ ಸಂಗಾತಿಯಿಂದ ದೂರಾಗುವ ಪರಿಸ್ಥಿತಿ ಏರ್ಪಟ್ಟರೂ ಪುನಃ ಪ್ರೀತಿಯಿಂದಲೇ ಒಂದಾಗ್ತಾರೆ. ಅದರ ಬದಲು ಬೇರೆ ಆಗದೆ ಇರುವತ್ತ ಗಮನ ನೀಡಿದರೆ ಒಳ್ಳೆಯದಲ್ವಾ, ಯೋಚಿಸಿ ಬದುಕು ನಿಮ್ಮ ಕೈಲೆ ಇದೆ!
ಮಿಥುನ ರಾಶಿ ಸ್ತ್ರೀ - ಕರ್ಕಾಟಕ ರಾಶಿ ಪುರುಷ
ಇಬ್ಬರೂ ಸಂತೋಷವಾಗಿ ಇರ್ತಾರೆ. ಇವರಲ್ಲಿ ಅಹಂ ಹೆಚ್ಚಿನ ಪಾತ್ರ ವಹಿಸಿರುತ್ತೆ. ಎಲ್ಲಿ ಅಹಂ ಅಧಿಪತ್ಯ ಇರುತ್ತದೆಯೋ ಅಲ್ಲಿ ಅಶಾಂತಿ-ಅಸಹನೆಯೂ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಹೆಣ್ಣುಮಕ್ಕಳೇ ಹೀಗೆ ಕಣ್ರೀ! ಇರುವ ದುಂಡುಮಲ್ಲಿಗೆ ಬಿಟ್ಟು ಸಿಗದೇ ಇರುವ ಆಕಾಶ ಮಲ್ಲಿಗೆಯತ್ತ ಕೈ ಚಾಚುತ್ತಾರೆ. ಆ ಮೂಲಕ ಬೇಸರ ಅಸಮಾಧಾನವನ್ನು ತಮ್ಮ ಮೈಮೇಲೆ ಎಳೆದುಕೊಳ್ತಾರೆ. ಕರ್ಕಾಟಕ ರಾಶಿ ಪುರುಷ ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು, ರೆಪ್ಪೆಯಲ್ಲಿ ಮುಚ್ಚಿಟ್ಟು ಪ್ರೀತಿಸುತ್ತಾರೆ. ಆಕೆಯ ಸಂತೋಷವೇ ತನ್ನ ಸಂತೋಷವೆಂದು ತಿಳಿಯುತ್ತಾನೆ. ಆದರೆ ಈಕೆಗೆ ಈತನ ಈ ಪ್ರೀತಿ ಮಹಾಪೂರ ಬೇಕಾಗೋಲ್ಲ. ತನ್ನನ್ನು ಮಗುವಿನಂತೆ ನೋಡಿಕೊಳ್ಳುವುದನ್ನು ಬಿಟ್ಟು ಹೆಣ್ಣಿನಂತೆ ಟ್ರೀಟ್ ಮಾಡಲಿ ಎಂದು ಬಯಸುತ್ತಾಳೆ. ಮಿಥುನ ರಾಶಿಯವರು ಹೃದಯವನ್ನು ಸುಲಭವಾಗಿ ಬಿಟ್ಟು ಕೊಡುವುದಿಲ್ಲ, ಬಿಟ್ಟುಕೊಟ್ರೆ ಆ ಪ್ರೀತಿಯನ್ನು ಎಚ್ಚರದಿಂದ ಕಾಯ್ತಾರೆ. ಸೋ, ಅವರ ಈ ಅಮೃತವನ್ನು ಖುಷಿಯಾಗಿ ಹೀರುವುದೇ ಸುರಕ್ಷಿತ ಮಾರ್ಗ. ನೋಡಿ ಯಾರಿಗುಂಟು ಇಂತಹ ಸಂಗಾತಿ! ಇಲ್ಲದ ವಿಷಯಕ್ಕೆ ಚಿಂತಿಸುತ್ತಾ ಕೂರದೆ ಬದುಕಿನ ಸುಂದರ ಕ್ಷಣಗಳನ್ನು ನಿಮ್ಮದಾಗಿಸಿಕೊಳ್ಳಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)












Click it and Unblock the Notifications