ಸತ್ಯ ನಂಬಿಕೆಗಳೇ ಸುಖದಾಂಪತ್ಯಕ್ಕೆ ಬುನಾದಿ

* ಧವಳ
ವೃಷಭ ರಾಶಿ ಸ್ತ್ರೀ - ಮೀನ ರಾಶಿ ಪುರುಷ : ಇವರಿಬ್ಬರೂ ಶಾಂತ ಸ್ವಭಾವದವರು ಆಗಿರುತ್ತಾರೆ. ವೃಷಭ ರಾಶಿ ಸ್ತ್ರೀಯರ ಹೃದಯಕ್ಕೆ ಹೆಚ್ಚು ನೋವು ಉಂಟು ಮಾಡುವುದು ಮೂರು ಕಾರಣಗಳು. ಸುಳ್ಳು, ಕೊಟ್ಟ ಮಾತು ತಪ್ಪುವುದು, ತಡವಾಗಿ ಬರುವುದು. ಇದನ್ನು ದೂರ ಮಾಡಲು ನಿಮ್ಮ ಬಳಿ ಇರುವ ಅಸ್ತ್ರ ಸತ್ಯ, ನಂಬಿಕೆ, ವಿಶ್ವಾಸ. ಇವುಗಳಿಂದ ಆಕೆಯ ಮನ ಗೆಲ್ಲಬಹುದು. ಮತ್ತೊಂದು ಸಂಗತಿ ತಿಳಿಯುವುದು ಅತಿ ಮುಖ್ಯ. ಈ ಜೋಡಿಗೆ ಕೋಪ ತುಂಬಾ ಬೇಗ ಬರುತ್ತದೆ. ಅದೇ ರೀತಿ ಅತಿ ಶೀಘ್ರವಾಗಿ ಕೋಪವು ದೂರವಾಗಿ ದೂರವಾಗುತ್ತದೆ. ಇಂತಹ ಗುಣ ತುಂಬಾ ಅಪರೂಪ. ಕೋಪವು ಇವರಿಬ್ಬರ ಬಾಂಧವ್ಯ ಹೆಚ್ಚು ಮಾಡುತ್ತದೆ. ಹಾಗೆಂದು ಕೋಪಕ್ಕೆ ಹೆಚ್ಚು ಆದ್ಯತೆ ನೀಡದಿರಿ.
ವೃಷಭ ರಾಶಿ ಪುರುಷ - ಮೀನ ರಾಶಿ ಸ್ತ್ರೀ : ವೃಷಭ ರಾಶಿ ಪುರುಷರು ಮೀನ ರಾಶಿ ಸ್ತ್ರೀಯರ ಮನಸ್ಸು ತಿಳಿದು ಅದರಂತೆ ನಡೆಯುತ್ತಾರೆ. ಸರಳವಾದ ಬದುಕಿಗೆ ಈ ಜೋಡಿ ಆದ್ಯತೆ ನೀಡ್ತಾರೆ. ಸತ್ಯ ಮಾರ್ಗದಲ್ಲಿ ನಡೆಯುವುದಕ್ಕೆ ಈ ಜೋಡಿ ತುಂಬಾ ಪ್ರಾಮುಖ್ಯತೆ ನೀಡ್ತಾರೆ. ಈ ಜೋಡಿ ಸ್ವಲ್ಪ ಒರಟರು ಎಂದು ಬೇರೆಯವರಿಗೆ ಅನ್ನಿಸುತ್ತದೆ. ಆದರೆ ಮನಸ್ಸು ಮಾತ್ರ ಮೃದು ಮಧುರ. ಈ ಜೋಡಿಯ ಮಧ್ಯೆ ಜಗಳ ಕಾಮನ್. ಆದರೆ ಅದು ತುಂಬಾ ಬೇಗ ಕರಗಿ ಬಿಡುತ್ತದೆ. ಒಟ್ಟಾರೆ ಸಮಾಜದಲ್ಲಿ ಈ ಜೋಡಿ ಆದರ್ಶಪ್ರಾಯರಾಗಿ ಬದುಕುತ್ತಾರೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
(ಸೂಚನೆ : ಇತರ ರಾಶಿಯ ಸ್ತ್ರೀ ಪುರುಷರೊಂದಿಗೆ ವೃಷಭ ರಾಶಿಯ ಪುರುಷ ಸ್ತ್ರೀಯರ ದಾಂಪತ್ಯದ ಸೀಳುನೋಟ ಇಲ್ಲಿಗೆ ಮುಕ್ತಾಯವಾಗುತ್ತದೆ. ಮಿಥುನ ರಾಶಿಯರ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ಮುಂದಿನ ಭಾಗಗಳಲ್ಲಿ ತಿಳಿಯುವಿರಿ.)












Click it and Unblock the Notifications