ಪ್ರೀತಿ ತಗೊಳೋಕೆ ಬೇಕು, ಕೊಡೋಕೆ ಬೇಡ್ವಾ?

* ಧವಳ
ವೃಷಭ ರಾಶಿ ಪುರುಷ - ಮಕರ ರಾಶಿ ಸ್ತ್ರೀ : ಸ್ವತಂತ್ರವಾಗಿ ಬದುಕಬೇಕು ಎನ್ನುವ ಆಸೆ ಮನುಷ್ಯನಲ್ಲಿ ಸಾಮಾನ್ಯ. ಆದರೆ ಆ ಸ್ವಾತಂತ್ರ್ಯ ಸ್ವಚ್ಛಂದ ಆಗಬಾರದು ಎನ್ನುವ ದೃಷ್ಟಿಯಿಂದ ನಮ್ಮ ಹಿರಿಯರು ವೈವಾಹಿಕ ಬಂಧನಕ್ಕೆ ಆದ್ಯತೆ ನೀಡಿದ್ದಾರೆ. ಸ್ವಾತಂತ್ರ್ಯವು ಮಿತಿಯಲ್ಲಿಟ್ಟು ಬದುಕು ಸುಂದರವಾಗಿ ನಡೆಯುವುದಕ್ಕೆ ಅನುಕೂಲವಾಗುವಂತಹ ವಾತಾವರಣ ಕಲ್ಪಿಸಿದ್ದಾರೆ ನಮ್ಮ ಹಿರಿಯರು. ಆದರೆ ಮನುಷ್ಯನಲ್ಲಿ ಆ ಮೂಲಗುಣ ಕೆಲವರಲ್ಲಿ ಹೆಚ್ಚು ಪ್ರಾಧಾನ್ಯತೆ ಪಡೆದಿರುತ್ತದೆ. ಸ್ವತಂತ್ರ ಪ್ರವೃತ್ತಿ ಮಕರ ರಾಶಿ ಸ್ತ್ರೀಯರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಯಾರಾದರು ಹಾಗಲ್ಲ ಹೀಗೆ ಮಾಡಿದರೆ ಸರಿ ಎಂದು ಸೂಕ್ತ ಮಾರ್ಗ ತೋರಿಸಿದರೆ ಮುಖಕ್ಕೆ ಹೊಡೆದ ಹಾಗೆ ತಾವು ನಡೆಯುವ ದಾರಿಯಲ್ಲೇ ಹೆಜ್ಜೆ ಹಾಕುತ್ತಾರೆ. ಆದರೆ ಪ್ರೀತಿಯ ವಿಷಯದಲ್ಲಿ ಹೈ ಕ್ಲಾಸ್. ತಮ್ಮ ದಾಂಪತ್ಯದ ಬದುಕಲ್ಲಿ ಎಲ್ಲಿಯೂ ಲೋಪ ಆಗದಂತೆ ಎಚ್ಚರ ವಹಿಸುತ್ತಾರೆ. ವೃಷಭ ರಾಶಿ ಪುರುಷ ಆಕೆಯ ಮನೋಗುಣ ಅರ್ಥ ಮಾಡಿಕೊಂಡು ನಡೆಯುವುದೇ ಎಲ್ಲಾ ರೀತಿಯಿಂದಲೂ ಸೂಕ್ತ. ಆಗ ಬದುಕು ಸುಂದರ.. ಬಾಳಲ್ಲಿ ಸದಾ ನವೋಲ್ಲಾಸ. ಶಾಂತವಾಗಿ, ಸುಂದರವಾದ ಜೀವನವನ್ನು ಈ ದಂಪತಿಗಳು ನಡೆಸುತ್ತಾರೆ.
ವೃಷಭ ರಾಶಿ ಸ್ತ್ರೀ - ಕುಂಭ ರಾಶಿ ಪುರುಷ : ಕುಂಭ ರಾಶಿಯವರ ಒಂದು ಬಹು ಮುಖ್ಯ ಗುಣ ಅಂದೆ ಬದಲಾವಣೆ. ಅವರು ಬದುಕಲ್ಲಿ ಸದಾ ಚೇಂಜ್ ಬಯಸ್ತಾನೆ ಇರ್ತಾರೆ. ಆದರೆ ಈ ರೀತಿಯ ಮನಸ್ಥಿತಿ ವೃಷಭ ರಾಶಿ ಸ್ತ್ರೀಗೆ ಹೆಚ್ಚು ಕಿರಿಕಿರಿ ಉಂಟು ಮಾಡುತ್ತದೆ. ಇದ್ದಂಗೆ ಇರಬೇಕು ಎನ್ನುವ ಸಿದ್ಧಾಂತ ಈಕೆಯದು. ಇವರು ಪ್ರೀತಿಗಾಗಿ ಎಂತಹ ತ್ಯಾಗಕ್ಕಾದರೂ ಸಿದ್ಧ. ಆದರೆ, ಬಾಂಧವ್ಯದಲ್ಲಿ ಏನಾದರೂ ಏರುಪೇರಾದರೆ ಎಂದಿಗೂ ಕಾಂಪ್ರೋ ಆಗೋಕೆ ಇಷ್ಟ ಪಡರು. ಇದು ಇವರ ನೆಗೆಟಿವ್ ಸಂಗತಿ. ತನ್ನ ಸಂಗಾತಿ ಹಾಗಿದ್ದ ಮೇಲೆ ಕುಂಭ ರಾಶಿ ಪುರುಷ ಸುಮ್ಮನೆ ಇರ್ತಾರಾ, ಅದು ಸಾಮರಸ್ಯ ಹಾಳಾಗಲು ಕಾರಣ ಆಗುತ್ತದೆ. ಒಮ್ಮೆ ಇವರಿಬ್ಬರು ಬೇರೆಯಾದರೆ ಮತ್ತೆಂದಿಗೂ ಒಂದಾಗರು. ಇದು ಈ ಜೋಡಿಯ ಮೈನಸ್ ಪಾಯಿಂಟ್. ಆದ್ದರಿಂದ ಆದಷ್ಟು ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರವಹಿಸಿ. ಕೈ ಮೀರಿದರೆ ಆಮೇಲೆ ಏನೂ ಮಾಡಿದರೂ ಸರಿಯಾಗದು. ಇಬ್ಬರು ತಮ್ಮ ಮೂಗಿನ ನೇರಕ್ಕೆ ನಡೆಯುವುದನ್ನು ಬಿಟ್ಟರೆ ಎಲ್ಲವು ಸರಿಯಾಗುತ್ತದೆ, ಆದರೆ ಅದು ಅವರಿಬ್ಬರ ಕೈಲೆ ಇದೆ.
ವೃಷಭ ರಾಶಿ ಪುರುಷ - ಕುಂಭ ರಾಶಿ ಸ್ತ್ರೀ : ಕುಂಭ ರಾಶಿ ಸ್ತ್ರೀ ಪ್ರೀತಿಸುವ ರೀತಿ ಭಿನ್ನ ಆಗಿರುತ್ತದೆ. ಈ ರೀತಿಯು ವೃಷಭ ರಾಶಿಯ ಪುರುಷನನ್ನು ಆಕರ್ಷಿಸುತ್ತದೆ. ಈ ಸ್ತ್ರೀಗೆ ತುಂಬಾ ಸುರಕ್ಷೆ ನೀಡಬೇಕು ಎಂದು ತಿಳಿಯುತ್ತಾನೆ. ತಮಾಷೆ ಅಂದ್ರೆ ಈಕೆ ತನ್ನ ಸಂಗಾತಿ ಎಷ್ಟು ಪ್ರೀತಿಸಿದರೂ ಇನ್ನೂ ಪ್ರಿತಿಸಬಹುದಿತ್ತು ಎಂದು ಅಂದು ಕೊಳ್ತಾನೆ ಇರ್ತಾಳೆ. ಆತ ಬೇಕಾದ್ರೆ ಸ್ವರ್ಗವನ್ನೇ ತಂದಿಡಲಿ, ಛೇ! ಬರೀ ಒಂದೇ ರೀತಿಯ ಸ್ವರ್ಗಾನ ಎಂದು ಹೇಳುವ ಮನಸ್ಥಿತಿ ಈಕೆಯದು. ಕೊಟ್ಟಷ್ಟು ಧಾರಾಳವಾಗಿ ಪಡೆಯುವ ಉದಾರ ಹೃದಯಿ ಈಕೆ. ಆದರೆ ಅದೇ ತಾನು ಪ್ರೀತಿ ನೀಡುವ ವಿಷಯಕ್ಕೆ ಬಂದಾಗ ಮಾತ್ರ ಕಂಜೂಸ್ ಕಣ್ರೀ, ಪಾಪದ ಸಂಗಾತಿ ಕಾಯ್ತಾನೆ ಇರಬೇಕು, ಕೊಡುವುದನ್ನು ಅಳೆದು ಸುರಿದು ಕೊಡ್ತಾಳೆ. ಆಕೆಯ ಈ ಗುಣವನ್ನು ಮಾರ್ಪಾಟು ಮಾಡುವ ಶಕ್ತಿ ಪತಿದೇವರ ಕೈಲಿ ಇದೆ, ಸೊ ಪ್ರಯತ್ನಿಸಿ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)












Click it and Unblock the Notifications