ಚರ್ಚೆ ಮನಸ್ತಾಪಕ್ಕೆ ದಾರಿ ಮಾಡಿಕೊಡದಿರಲಿ

Discussions should not lead to fight
ವಾದ ಮಾಡಿ ಬದುಕು ಹಾಳುಗೆಡವುದಕ್ಕಿಂತ ಸಹನೆಯಿಂದ ಜೀವನ ಕಟ್ಟಿಕೊಳ್ಳುವುದು ಎಲ್ಲಾ ರೀತಿಯಿಂದಲೂ ಶ್ರೇಯಸ್ಕರ ಅಲ್ಲವೇ! ವಾದ ಇರಬೇಕು, ಆದರೆ ಅದು ಮನಸ್ತಾಪಕ್ಕೆ ಎಡೆಮಾಡಿಕೊಡಬಾರದು.

* ಧವಳ

ವೃಷಭ ರಾಶಿ ಪುರುಷ - ಧನಸ್ಸು ರಾಶಿ ಸ್ತ್ರೀ

ಚರ್ಚೆ ಚರ್ಚೆ ಬರೀ ಚರ್ಚೆ. ಮಾರ್ಕೆಟ್ಟಿನಿಂದ ಮೆಣಸಿಕಾಯಿ ಸಹ ಚರ್ಚೆಗೆ ಗುರಿಯಾಗುವ ವಿಷಯ. ಕೂತರೂ ನಿಂತರೂ ಎಲ್ಲದರ ಬಗ್ಗೆ ಒಂದು ಚರ್ಚೆ ಮಾಡಲೇಬೇಕು ಇದೆ ಧನಸ್ಸು ರಾಶಿ ಸ್ತ್ರೀಯ ವಿಶೇಷತೆ. ಈಕೆ ಮಾತಿಗೆ ಕೂತಾಗ ಆತ ಸಹ ಕೂರಲೇಬೇಕು. ಮಾತು ಮಾತು ಬೆಳೆದು ಅದು ವಿಕೋಪಕ್ಕೆ ಹೋಗ್ತಾ ಇದೆ ಅನ್ನುವಷ್ಟರಲ್ಲಿ ಇಬ್ಬರೂ ಹೈ ಅಲರ್ಟ್. ತಕ್ಷಣ ಸಮಸ್ಯೆ ಪರಿಹರಿಸಿಕೊಂಡು ಬಿಡ್ತಾರೆ. ಸಾಮಾನ್ಯವಾಗಿ ಧನಸ್ಸು ರಾಶಿ ಸ್ತ್ರೀ ಚರ್ಚೆಗೆ ಎಷ್ಟು ಆದ್ಯತೆ ಕೊಡ್ತಾಳೋ ವೃಷಭ ರಾಶಿ ಪುರುಷ ಅಷ್ಟು ಪ್ರಾಮುಖ್ಯತೆ ಕೊಡಲ್ಲ. ಮುಖ್ಯವಾಗಿ ಇವರಿಬ್ಬರೂ ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಗೌರವಿಸಿದರೆ ಯಾವುದೇ ಬಗೆಯ ತೊಂದರೆ ಇರದು. ವಾದ ಮಾಡಿ ಬದುಕು ಹಾಳುಗೆಡವುದಕ್ಕಿಂತ ಸಹನೆಯಿಂದ ಜೀವನ ಕಟ್ಟಿಕೊಳ್ಳುವುದು ಎಲ್ಲಾ ರೀತಿಯಿಂದಲೂ ಶ್ರೇಯಸ್ಕರ ಅಲ್ಲವೇ!

ವೃಷಭ ರಾಶಿ ಸ್ತ್ರೀ - ಮಕರ ರಾಶಿ ಪುರುಷ

ವೃಷಭ ರಾಶಿ ಸ್ತ್ರೀಯರು ಹಿಂದಿನದನ್ನು ಬೇಗನೆ ಮರೆತು ಬಿಡ್ತಾರೆ. ಈ ಮರೆವು ಒಂದು ರೀತಿ ಒಳ್ಳೆಯದೇ. ಅದರ ಅರ್ಥ ಯಾವ ಸಮಸ್ಯೆಯನ್ನು ಹೆಚ್ಚು ಬೆಳೆಸಲ್ಲ. ಪತಿಯ ಪ್ರತಿಯೊಂದು ಸಂಗತಿಯನ್ನು ಗಮನದಲ್ಲಿ ಇಟ್ಟು ಕೊಂಡು ಅವರಿಚ್ಛೆಯಂತೆ ನಡೆಯುತ್ತಾರೆ. ಇವರಿಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬಾಳು ನಡೆಸುತ್ತಾರೆ. ಇಬ್ಬರ ಆಲೋಚನಾ ಶೈಲಿಯೂ ಸಹ ಏಕ ರೀತಿಯಲ್ಲಿ ಇರುತ್ತದೆ. ಒಂದರ್ಥದಲ್ಲಿ ಆದರ್ಶಪ್ರಾಯರಾದ ದಂಪತಿಗಳು ಇವರು. ಬದುಕಿನಲ್ಲಿ ಗಲಾಟೆ ಗದ್ದಲ ಇದ್ದೇ ಇರುತ್ತದೆ ಅಲ್ವೆ? ಆದರೆ ಈ ಜೋಡಿ ಎಂದಿಗೂ ಅದನ್ನು ತೀವ್ರವಾಗಿ ಬೆಳೆಯಗೊಡುವುದಿಲ್ಲ. ಶಾಂತಿ ನೆಮ್ಮದಿ ಇವರ ಬದುಕಿನ ಅವಿಭಾಜ್ಯ ಸಂಗತಿಗಳಾಗಿರುತ್ತದೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+