ಈ ಗುಣ ಗಂಡು ಹೆಣ್ಣು ಅರ್ಥ ಮಾಡಿಕೊಂಡರೆ!

* ಧವಳ
ವೃಷಭ ರಾಶಿ ಪುರುಷ - ವೃಶ್ಚಿಕ ರಾಶಿ ಸ್ತ್ರೀ : ವೃಶ್ಚಿಕ ರಾಶಿ ಸ್ತ್ರೀ ಹಟಮಾರಿ ಹೆಣ್ಣು. ತನ್ನ ಮೂಗಿನ ನೇರಕ್ಕೆ ನಡೆಯಬೇಕು ಎಂದು ಹಠ ಹಿಡಿಯುವ ಸ್ವಭಾವ. ಹಾಗೆಂದು ಈ ಗುಣವನ್ನು ಸರಿ ಮಾಡಲು ಸಾಧ್ಯವಿಲ್ಲ ಎಂದೇನೂ ಚಿಂತಿರಾಗುವ ಅಗತ್ಯವಿಲ್ಲ. ಆಕೆಯನ್ನು ದಂಡಂ ದಶಗುಣಂ ಮಂತ್ರದಿಂದ ಸರಿಮಾಡಬಹುದು. ತಮಾಷೆ ಅಂದ್ರೆ ವೃಷಭ ರಾಶಿ ಪುರುಷ ಹಾಗೂ ವೃಶ್ಚಿಕ ರಾಶಿ ಸ್ತ್ರೀ ತಾವು ತುಂಬಾ ಸಹನಾವಂತರು ಎಂದು ತಮ್ಮ ಬೆನ್ನು ತಾವು ಸದಾ ತಟ್ಟಿಕೊಳ್ತಾ ಇರ್ತಾರೆ. 'ನಾನು' ಆಗಿದ್ದಕ್ಕೆ ಇವಳ ಹತ್ರ ಬದುಕ್ತಾ ಇದ್ದೀನಿ ಎಂದು ಗಂಡ ಜಂಭ ಕೊಚ್ಚಿಕೊಂಡ್ರೆ, 'ನಾನು' ಇದ್ದಿದ್ದಕ್ಕೆ ಈ ಮನೆ ಇಷ್ಟು ಉದ್ದಾರ ಆಗಿರೋದು, ನನ್ನ ಬದಲು ಯಾರೇ ಈ ಜಾಗದಲ್ಲಿ ಇದ್ದಿದ್ರೂ ಈ ಮನುಷ್ಯನನ್ನು ಬಿಟ್ಟು ಓಡಿ ಹೋಗಿರೋರು ಎಂದು ಈಕೆ ಹೇಳಿಕೊಂಡು ತಿರುಗಾಡುವುದು ಸಾಮಾನ್ಯ ಸಂಗತಿ. ಕ್ಷಮಿಸ್ತೀನಿ ಎಂದು ಕೇವಲ ಬಾಯಿ ಮಾತಲ್ಲಿ ಹೇಳ್ತಾರೆ ಅಷ್ಟೆ. ಆದರೆ ಈತ /ಈಕೆ ಮಾಡಿದ ತಪ್ಪಿನ ಆ ಘಟನೆಯನ್ನು ನೆನಪಿನಲ್ಲಿ ಇಟ್ಟುಕೊಂಡು, ಪದೇಪದೆ ಜ್ಞಾಪಕ ಮಾಡಿಕೊಳ್ಳುವುದರಲ್ಲಿ ಇವರಿಬ್ಬರೂ ನಿಸ್ಸೀಮರು. ಒಬ್ಬರಿಗೊಬ್ಬರು ಸುಳ್ಳು ಹೇಳಿಕೊಂಡು ಕಾಲ ಕಳೆಯುತ್ತಾರೆ. ಕ್ಷಮೆ ಅನ್ನುವ ಪದಕ್ಕೆ ಈ ಜೋಡಿ ಬೆಲೆ ಕೊಡೋದೇ ಇಲ್ಲ. ಅದೇ ಅವರ ಬಾಳಿನ ವಿಪರ್ಯಾಸ. ಈ ಜೋಡಿ ಒಟ್ಟಾಗಿ ಇರುವುದೇ ಅಪರೂಪ. ಇದ್ರೆ ಮಾತ್ರ ಸಂಪೂರ್ಣ ಬದುಕನ್ನು ಒಟ್ಟಾಗಿ ಕಳೆಯುತ್ತಾರೆ.
ವೃಷಭ ರಾಶಿ ಸ್ತ್ರೀ - ಧನಸ್ಸು ರಾಶಿ ಪುರುಷ : ವೃಷಭ ರಾಶಿ ಸ್ತ್ರೀ ಪ್ರೀತಿಸುವ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ. ಅವರು ಬಯಸುವ ಗುಣಗಳನ್ನು ಧನಸ್ಸು ರಾಶಿ ಪುರುಷರಲ್ಲಿ ಕಾಣ ಬಯಸುತ್ತಾರೆ. ಗಂಡನ ಬಗ್ಗೆ ಎಂದಿಗೂ ಅನುಮಾನ ಪಡುವುದಿಲ್ಲ. ಅದೇ ರೀತಿ ತನ್ನ ಪತಿ ತನ್ನ ಬಗ್ಗೆ ಅನುಮಾನಿಸುವ ರೀತಿಗೂ ಎಂದಿಗೂ ಆದ್ಯತೆ, ಅವಕಾಶ ನೀಡರು. ಪ್ರೀತಿಯನ್ನು ಕೊಟ್ಟಷ್ಟು ಆಕೆ ತನ್ನ ಪತಿಯನ್ನು ಹೆಚ್ಚು ಪ್ರೀತಿಸುತ್ತಾಳೆ. ಪ್ರೀತಿಯ ಮುಂದೆ ಬೇರೆ ಎಲ್ಲವು ನಿಕೃಷ್ಟ ಆಕೆಗೆ. ಸಂತೋಷ ಸದಾ ಆಕೆಯ ಜೊತೆ ಇರುತ್ತದೆ. ಈ ಗುಣವನ್ನು ಅರ್ಥ ಮಾಡಿಕೊಂಡರೆ ಬದುಕು ನಂದನವನ. ಜೀವನವನ್ನು ಸುಂದರವಾಗಿಟ್ಟು ಕೊಳ್ಳುವುದು ನಿಮ್ಮ ಕೈಲೆ ಇದೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)












Click it and Unblock the Notifications