ನಾನು ಹೇಳಿದಂತೆಯೇ ಆಗಬೇಕೆಂಬ ಹಠ ಯಾಕೆ?

* ಧವಳ
ವೃಷಭ ರಾಶಿ ಪುರುಷ - ಕನ್ಯಾ ರಾಶಿ ಸ್ತ್ರೀ
ಕನ್ಯಾ ರಾಶಿ ಸ್ತ್ರೀಯರು ಹಟಮಾರಿಗಳು. ತಾವು ಏನನ್ನು ಅಂದುಕೊಳ್ತಾರೋ ಅದೇ ಆಗಬೇಕು ಎನ್ನುವ ಭಾವ ಹೊಂದಿರುತ್ತಾರೆ. ಜೊತೆಗೆ ಅದನ್ನು ಸಾಬೀತು ಮಾಡಲು ಪ್ರಯತ್ನಿಸುತ್ತಾರೆ. ಈ ಜೋಡಿಯಲ್ಲಿ ಯಾವುದೇ ವಿಷ್ಯ ಆಗಿರಲಿ ವಾದ ಥಟ್ ಅಂತ ಶುರು ಆಗಿಬಿಡುತ್ತದೆ. ಕೊನೆಗೆ ನಿಜವಾಗಿಯೂ ಅದು ವಾದ ಮಾಡುವಂತಹ ವಿಷಯವೇನಾ ಎಂದು ಯೋಚಿಸುವಂತಾಗುತ್ತದೆ ಬೇರೆಯವರಿಗೆ. ಸದಾ ಇವರಿಬ್ಬರು ತಮ್ಮ ಸಂಗಾತಿಗಳ ಬಗ್ಗೆ ಒಂದು ಕೊಂಕು ನೋಟ ಇಟ್ಟೇ ಇಟ್ಟಿರುತ್ತಾರೆ. ಪರಿಣಾಮ ಢಂ ಢಮಾರ್! ಸದಾ ಮನೆಯ ವಾತಾವರಣ ಕೆಟ್ಟದಾಗಿದ್ದರೆ ಬದುಕಲ್ಲಿ ಖುಷಿ ಅನ್ನುವುದು ಎಲ್ಲಿರುತ್ತದೆ. ಸಂತೋಷಕ್ಕಾಗಿ ಇವರು ಹುಡುಕಾಟವನ್ನೂ ಮಾಡಲ್ಲ, ಸಿಗುವ ಸಂತೋಷದ ಬದುಕನ್ನು ಸರಿಯೂ ಪಡಿಸಿಕೊಳ್ಳುವುದಿಲ್ಲ. ಇದು ಇಬ್ಬರ ಬಾಂಧವ್ಯವನ್ನು ಹಾಳು ಮಾಡುತ್ತದೆ. ಕೊನೆಗೆ ಇಬ್ಬರು ಸಂಬಂಧಕ್ಕೆ ಟಾಟ ಟಾಟ ಬೈ ಬೈ ಹೇಳಿಬಿಡ್ತಾರೆ. ಆದರೆ ದಯಮಾಡಿ ಅಂತಹ ಯಾವುದೇ ರೀತಿಯ ನಿರ್ಧಾರಕ್ಕೆ ಹೋಗುವ ಮುನ್ನ ಯೋಚಿಸಿ..
ವೃಷಭ ರಾಶಿ ಸ್ತ್ರೀ - ತುಲಾ ರಾಶಿ ಪುರುಷ
ವೃಷಭ ರಾಶಿ ಸ್ತ್ರೀಯರು ಅತ್ಯಂತ ಶೀಘ್ರವಾಗಿ ತಮ್ಮನ್ನು ತಾವು ಹತಾಶ ಭಾವಕ್ಕೆ ಗುರಿ ಮಾಡಿಕೊಂಡು ಬಿಡ್ತಾರೆ. ಛೇ ಬದುಕು ಇಷ್ಟೆ, ಮುಗೀತು ನನ್ನ ಕನಸು, ಹೀಗೆ ತಾವೇ ಕನ್ ಕ್ಲೂಡ್ ಮಾಡಿಕೊಂಡು ಬಿಡ್ತಾರೆ. ಆದರೆ ತುಲಾ ರಾಶಿ ಪುರುಷನಿಗೆ ಈಕೆಯ ಮನೋಭಾವ ತುಂಬಾ ಚೆನ್ನಾಗಿ ಅರ್ಥ ಆಗಿರುತ್ತದೆ. ತನ್ನ ಹೆಣ್ಣು ಮಾನಸಿಕವಾಗಿ ದಣಿತಾ ಇದ್ದಾಳೆ ಎಂದು ಈತನಿಗೆ ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಅವಳ ಮನಸ್ಸನ್ನು ಚೇತೋಹಾರಿಯಾಗಿ ಮಾಡುವ ಕಲೆ ಕರಗತ. ಇಂದು ಇರುವ ಬದುಕು ನಾಳೆ ಹೇಗೋ ಎನ್ನುವುದು ಸ್ಪಷ್ಟವಾಗಿ ಗೊತ್ತು. ಈ ಎಲ್ಲಾ ಸಂಗತಿಗಳು ಸಂಸಾರ ರಸಕ್ಕೆ ಸಾರ ಹೆಚ್ಚಿಸುತ್ತದೆ. ಪರಿಣಾಮ ಬದುಕಲ್ಲಿ ಆನಂದ ಆನಂದ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ)












Click it and Unblock the Notifications