ಪ್ರೀತಿನೇ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ

* ಧವಳ
ವೃಷಭ ರಾಶಿ ಪುರುಷ ಕರ್ಕಾಟಕ ರಾಶಿ ಸ್ತ್ರಿ :
ವೃಷಭ ರಾಶಿ ಪುರುಷರು ಒಂದು ರೀತಿಯಲ್ಲಿ ಸ್ಥಿತಪ್ರಜ್ಞರು. ಏನೂ ಬೇಡ-ಯಾವುದೂ ಬೇಡ. ಒಟ್ಟಾರೆ ಕಲ್ಲಿನಂತೆ. ಆದ್ರೆ ಕರ್ಕಾಟಕ ರಾಶಿ ಸ್ತ್ರೀಯರು ನೀರಂತೆ ಸದಾ ಒಂದೇ ರೀತಿಯ ನಿರ್ಧಾರಕ್ಕೆ ಬದ್ಧರಾಗಿ ಇರುವುದಿಲ್ಲ. ವೃಷಭ ರಾಶಿ ಪುರುಷರು ಪ್ರೀತಿಯ ವಿಷಯದಲ್ಲಿ ಲೇಟ್ ಲತೀಫ್ ಗಳು. ಆದರೆ ಕರ್ಕಾಟಕ ರಾಶಿ ಸ್ತ್ರೀಯರು ಹಾಗಲ್ಲ ಪ್ರೀತಿಯ ವಿಷಯದಲ್ಲಿ ಸ್ವಲ್ಪ ಜಾಸ್ತೀನೆ ಫಾಸ್ಟ್. ಮಕ್ಕಳು, ಮನೆ, ಸಂಸಾರ, ಅಡುಗೆ... ಇಂಥ ವಿಷಯಗಳ ಬಗ್ಗೆ ಇವರಿಗೆ ನಿರಾಸಕ್ತಿ. ತಮಾಷೆ ಅಂದ್ರೆ ಇಂತಹ ಬೇಸರಗಳು ಕೇವಲ ಮದುವೆ ಆಗುವ ತನಕ, ಆದ್ರೆ ವೈವಾಹಿಕ ಜೀವನಕ್ಕೆ ಒಮ್ಮೆ ಕಾಲಿಟ್ಟರು ಅಂದ್ರೆ ಕರ್ಕಾಟಕ ರಾಶಿ ಸ್ತ್ರೀಯರು ಬದುಕನ್ನು ತುಂಬಾ ಇಷ್ಟ ಪಡೋಕೆ ಆರಂಭಿಸುತ್ತಾರೆ. ಒಟ್ಟಾರೆ ಒಂದು ಬಗೆಯಲ್ಲಿ ವಿಚಿತ್ರ ಜೀವಗಳು. ಇನ್ನು ವೃಷಭ ರಾಶಿ ಪುರುಷರು ತಮ್ಮ ಸಂಗಾತಿ ಸದಾ ತಮ್ಮ ಜೊತೇನೆ ಇರಬೇಕು ಎಂದು ಬಯಸುತ್ತಾರೆ. ಇವರಲ್ಲಿ ಪ್ರೀತಿಯ ರೇಟಿಂಗ್ ಸಿಕ್ಕಾಪಟ್ಟೆ ಜಾಸ್ತಿ. ಒಂದರ್ಥದಲ್ಲಿ ಹೆಂಡತಿ ಸೆರಗು ಹಿಡಿದುಕೊಂಡು ಓಡಾಡುವ ಮುದ್ದಿನ ಮಾಮ! ಇಬ್ಬರು ಎಂತಹ ಪರಿಸ್ಥಿತಿಯಲ್ಲೂ ಸಂಬಂಧಗಳನ್ನು ಹಾಳು ಮಾಡಿಕೊಳ್ಳುವುದಿಲ್ಲ. ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ ಎಂದು ನಂಬಿರುವುದೇ ಇದಕ್ಕೆ ಕಾರಣ. ಪ್ರೀತಿ-ಪ್ರೇಮ ಇವರ ಬದುಕನ್ನು ಸುಂದರವಾಗಿಡುತ್ತದೆ.
ವೃಷಭ ರಾಶಿ ಸ್ತ್ರೀ - ಸಿಂಹ ರಾಶಿ ಪುರುಷ :
ವೃಷಭರಾಶಿ ಸ್ತ್ರೀಯರು ಸಂಗೀತಪ್ರಿಯರು. ಮುಖ್ಯವಾಗಿ ಮೆಲೋಡಿ ಹಾಡುಗಳ ಬಗ್ಗೆ ಹೆಚ್ಚು ಆಸಕ್ತಿ. ಆದರೆ ಸಿಂಹ ರಾಶಿ ಪುರುಷರಿಗೆ ಅಬ್ಬರದ ಸಂಗೀತದತ್ತ ಹೆಚ್ಚಿನ ಒಲವು. ಈ ಮಂದ್ರಸ್ಥಾಯಿ ಹಾಗೂ ಏರುಸ್ಥಾಯಿಗಳು ಅನೇಕ ಬಾರಿ ಇವರಿಬ್ಬರಲ್ಲಿ ಜಗಳ ತಂದಿಡುತ್ತದೆ. ಒಂದರ್ಥದಲ್ಲಿ ಇಬ್ಬರಲ್ಲೂ ಏತಿ ಹಾಗೂ ಪ್ರೇತಿ ಅನ್ನುವ ನೇಚರ್. ಹಾಗಂತ ಇಬ್ಬರೂ ಸದಾ ಶರಂಪರ ಎಂದು ಜಗಳ ಆಡಿಕೊಂಡು ಇರ್ತಾರೆ ಎಂದು ತಿಳಿಯುವ ಅಗತ್ಯವಿಲ್ಲ. ದಾಂಪತ್ಯ ಬದುಕು ತುಂಬಾ ಸುಂದರವಾಗಿ ಇಟ್ಟುಕೊಂಡಿರ್ತಾರೆ. ಎಂತಹ ಕಷ್ಟ ಬಂದ್ರು ಇಬ್ಬರೂ ಎದುರಿಸಿ ಬದುಕನ್ನು ಹಸನಾಗಿಟ್ಟು ಕೊಂಡಿರ್ತಾರೆ. ಅದ್ಭುತ ರೀತಿಯಲ್ಲಿ ಬಾಳ್ವೆ ನಡೆಸುತ್ತಿರುತ್ತಾರೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications