ಸುಖಮಯ ದಾಂಪತ್ಯ : ಹಣಕ್ಕಿಂತ ನೆಮ್ಮದಿ ಮುಖ್ಯ

ಸಿಂಹ ರಾಶಿ ಪುರುಷ - ತುಲಾ ರಾಶಿ ಸ್ತ್ರೀ : ತುಲಾ ರಾಶಿ ಸ್ತ್ರೀ ತಾನು ಎಲ್ಲರಿಗಿಂತ ಮೊದಲಿಗಳಾಗಿ ಇರಬೇಕೆಂದು ಬಯಸುತ್ತಾಳೆ. ಆದರೆ ಸಿಂಹ ರಾಶಿ ಪುರುಷರಿಗೆ ಅದು ಇಷ್ಟವಿಲ್ಲ. ಆದರೆ ಇವರಿಬ್ಬರಿಗೂ ಕೆಲಸ ಮಾಡುವುದೆಂದರೆ ತುಂಬಾ ಇಷ್ಟ. ಹಣ ಮಾಡುವ ಬಗ್ಗೆ ಇಬ್ಬರಿಗೂ ಆಸಕ್ತಿ ಇರುತ್ತದೆ. ಎಲ್ಲಿ ಹಣದ ಸಂಗತಿ ಬರುತ್ತದೆಯೋ ಅಲ್ಲಿ ಜಗಳ, ವಾದ ವಿವಾದ ಇದ್ದೇ ಇರುತ್ತದೆ. ಸಿಂಹ ರಾಶಿಯವರು ಮದುವೆಯ ಬಳಿಕ ಮತ್ತಷ್ಟು ಶಾಂತ ಸ್ವಭಾವದವರು, ಭಾವುಕರು ಆಗುತ್ತಾರೆ. ಹಣದ ವಿಷಯದಲ್ಲಿ ಎಂತಹುದೇ ವಾದ ವಿವಾದ ಇರಲಿ, ಆದರೆ ದಾಂಪತ್ಯದ ವಿಷಯದಲ್ಲಿ ವಿಶ್ವಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.. ಪ್ರೀತಿ, ಬಾಂಧವ್ಯದ ವಿಷಯದಲ್ಲಿ ನಂಬಿಕೆ ದೃಢವಾಗಿರುತ್ತದೆ.
ಸಿಂಹ ರಾಶಿ ಸ್ತ್ರೀ - ವೃಶ್ಚಿಕ ರಾಶಿ ಪುರುಷ : ವೃಶ್ಚಿಕ ರಾಶಿ ಪುರುಷರು ಕೆಲವು ವಿಷಯಗಳನ್ನು ಅವರ ಸಂಗಾತಿ ಕೇಳಲಿ ಬಿಡಲಿ ಹೇಳ್ತಾನೆ ಇರ್ತಾರೆ. ಹಣದ ವಿಷಯದಲ್ಲಿ ಗಲಾಟೆ ತಪ್ಪುವುದಿಲ್ಲ. ಸ್ತ್ರೀ ಖರ್ಚು ಮಾಡುವುದರಲ್ಲಿ ಮುಂದೆ. ಪುರುಷ ಅದಕ್ಕೆ ಆಸ್ಪದ ನೀಡುವುದಿಲ್ಲ. ಇಬ್ಬರು ಬಜೆಟ್ ತಯಾರಿಸಿಕೊಂಡು ಅದರಂತೆ ನಡೆದರೆ ಯಾವುದೇ ರೀತಿಯ ಜಗಳ-ಗಲಾಟೆ ಇರದು. ಮನೆಯಲ್ಲಿ ನೆಮ್ಮದಿಗಿಂತ ಯಾವುದು ಮುಖ್ಯ? ಗುಣದಲ್ಲಿ ಮಾಡಿಕೊಳ್ಳುವ ಅಲ್ಪ ಮಾರ್ಪಾಟಿನಿಂದ ಎಲ್ಲವು ಸರಿಯಾಗುತ್ತದೆ. ಬದುಕು ಹಾಯಾಗಿರುತ್ತದೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)












Click it and Unblock the Notifications