ಪೊಳ್ಳು ಪ್ರೀತಿ ಹೆಚ್ಚಿಗೆ ದಿನ ಬಾಳಿಕೆ ಬರಲ್ಲ!

ಸಿಂಹ ರಾಶಿ ಸ್ತ್ರೀ - ಸಿಂಹ ರಾಶಿ ಪುರುಷ : ಇವರಿಬ್ಬರು ಒಂದೇ ರಾಶಿಯವರು ಆದ್ದರಿಂದ ಹೊಂದಾಣಿಕೆ ತುಂಬಾ ಕಷ್ಟ. ಇಬ್ಬರು ತಮ್ಮ ಮೂಗಿನ ನೇರಕ್ಕೆ ನಡೆಯುವ ಪೈಕಿ. ಅದು ಸಾಮಾನ್ಯವಾಗಿ ಎಲ್ಲಾ ಬಗೆಯ ತೊಂದರೆಗಳಿಗೆ ಕಾರಣ ಆಗುತ್ತದೆ. ಆದರೆ ಇಲ್ಲಿ ಮತ್ತೊಂದು ವಿಚಿತ್ರವಾದ ಸಂಗತಿ ಇದೆ. ಸಿಂಹ ರಾಶಿಯ ಸ್ತ್ರೀಯರಿಗೆ ಬೇರೆ ರಾಶಿಯರ ಬಗ್ಗೆ ಮೋಹ ಉಂಟಾಗುತ್ತದೆ, ಆದ್ರೆ ತಮ್ಮದೇ ರಾಶಿ ಪುರುಷನ ಬಗ್ಗೆ ಇಷ್ಟ ಆಗದು. ಆದರೆ ಸಿಂಹ ರಾಶಿ ಪುರುಷರಿಗೆ ತಮ್ಮ ರಾಶಿ-ಬೇರೆಯ ರಾಶಿ ಅನ್ನುವ ಭೇದ -ಭಾವ ಇಲ್ಲ. ಅವರಿಗೆ ತಮ್ಮ ಸಂಗಾತಿ ಬಗ್ಗೆ ಹೆಚ್ಚಿನ ಪ್ರೀತಿ. ಸಿಂಹ ರಾಶಿ ಸ್ತ್ರೀ - ಪುರುಷರಲ್ಲಿ ಒಂದು ಭಿನ್ನ ಗುಣ ಇದೆ. ಇಬ್ಬರಲ್ಲೂ ಸೋಗಲಾಡಿತನ ಹೆಚ್ಚಾಗಿ ಕಂಡು ಬರುತ್ತದೆ. ಅದು ಇವರಿಬ್ಬರ ಬದುಕಿನ ಮೈನಸ್ ಪಾಯಿಂಟ್. ನಿನ್ನನ್ನು ಬಿಟ್ರೆ ನನಗ್ಯಾರು, ನನ್ನನು ಬಿಟ್ರೆ ನಿನಗ್ಯಾರು ಎನ್ನುವ ಬಣ್ಣದ ಮಾತು ಆಡಿ ಒಬ್ಬರಿಗೊಬ್ಬರು ತಲೆ ಸವರುತ್ತಾರೆ. ದಾಂಪತ್ಯ-ಪ್ರೀತಿಯಲ್ಲಿ ಇಂತಹ ಪೊಳ್ಳುಗಳು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ಎಂದು ತಿಳಿದರೆ ಬದುಕು ಸುಂದರವಾಗುತ್ತದೆ.
ಸಿಂಹ ರಾಶಿ ಸ್ತ್ರೀ - ಕನ್ಯಾ ರಾಶಿ ಪುರುಷ : ತಮ್ಮನ್ನು ಯಾರೇ ಆಗಲಿ ಹೊಗಳುತ್ತಿರಬೇಕು, ಹಾಗೆ ಮಾಡಿದ್ರೆ ಇವರಂತಹ ಒಳ್ಳೆಯ ವ್ಯಕ್ತಿ ಮತ್ತೊಬ್ಬರಿಲ್ಲ. ಹಾಗಂತ ಸುಳ್ಳು ಸುಳ್ಳು ಹೊಗಳುವ ಸಾಹಸಕ್ಕೆ ಹೋಗುವುದು ತಪ್ಪು. ಆಮೇಲೆ ಒಂದು ಹೋಗಿ ಮತ್ತೊಂದಕ್ಕೆ ದಾರಿ ಮಾಡಿ ಕೊಡುತ್ತದೆ ಅಷ್ಟೆ. ಕನ್ಯಾ ರಾಶಿ ಸ್ತ್ರೀಯರಿಗೆ ಇಷ್ಟ ಆಗುವ ಕೆಲಸ ಮಾಡಿಕೊಡಿ ಆಗ ಅವರಿಗೆ ಆಗುವ ಆನಂದ ಅಷ್ಟಿಷ್ಟಲ್ಲ! ಇವರ ಈ ಆನಂದವು ಸ್ವಲ್ಪ ದುಬಾರಿಯಾಗಿದ್ರೆ ಮತ್ತಷ್ಟು ಖುಷಿ. ಕೈ ಬಿಚ್ಚಿ ಹಣ ಖರ್ಚು ಮಾಡಿ ಗಿಫ್ಟ್ ಕೊಟ್ರೆ ಅವರಷ್ಟು ಸುಖಿಗಳು ಮತ್ತೊಬ್ಬರಿಲ್ಲ. ಹಾಗೆಂದು ಸಂಗಾತಿ ಹೆದರುವ ಅಗತ್ಯವಿಲ್ಲ. ಪ್ರೀತಿಯ ಮುಂದೆ ಎಲ್ಲವು ದೊಡ್ದ ಸೊನ್ನೆ. ನೀವು ಅವಳ ಮೇಲೆ ತುಂಬಾ ಪ್ರೀತಿ ತೋರಿಸಿ ಆಗ ಈ ವಸ್ತುಗಳು, ಗಿಫ್ಟುಗಳು ಯಾವುದೇ ಆಗಲಿ ಅಂತಹ ಸಂಗತಿಗಳಿಗೆ ಆಕೆ ಆದ್ಯತೆ ನೀಡುವುದಿಲ್ಲ. ಪ್ರೀತಿಯ ಮುಂದೆ ಎಲ್ಲವು ಚಿಕ್ಕದಾಗಿ ಬಿಡುತ್ತದೆ. (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)












Click it and Unblock the Notifications