Get Updates
Get notified of breaking news, exclusive insights, and must-see stories!

Jio Big Offer: ಜಿಯೋ ಬಳಕೆದಾರರಿಗೆ 18 ತಿಂಗಳು ಇದು ಉಚಿತ.. ಉಚಿತ.. ಭಾರೀ ಆಫರ್ ಘೋಷಣೆ!

Jio Big Offer: ಜಿಯೋ ಗ್ರಾಹಕರ ಕೈಗೆಟಕುವ ದರದಲ್ಲಿ ಆಗಾಗ ಹೊಸ ಹೊಸ ಪ್ಯಾಕೇಜ್‌ಳನ್ನು ಘೋಷಣೆ ಮಾಡುತ್ತಲಿರುತ್ತದೆ. ಹಾಗೆಯೇ ಇದೀಗ ಬಳಕೆದಾರರಿಗೆ ಮತ್ತೊಂದು ಗುಡ್‌ ನ್ಯೂಸ್‌ವೊಂದನ್ನು ನೀಡಿದೆ. ಜಿಯೋ ಚಂದಾದಾರರಿಗೆ 18 ತಿಂಗಳವರೆಗೆ 35,100 ರೂಪಾಯಿ ಮೌಲ್ಯದ ಗೂಗಲ್‌ನ ಜೆಮಿನಿ ಪ್ರೊ ಯೋಜನೆಗೆ ಉಚಿತ ಪ್ರವೇಶವನ್ನು ನೀಡಲು ಗೂಗಲ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

ಇದೀಗ ಎಲ್ಲಿ ನೋಡಿದರೂ ಎಐನದ್ದೇ ಹಾವಳಿಯಾಗಿದೆ. ದೇಶದಲ್ಲಿ ಎಐ ಅಳವಡಿಕೆಯನ್ನು ಮತ್ತಷ್ಟು ಹೆಚ್ಚಳ ಮಾಡಲು ಮತ್ತು ಅದರ 5G ಪರಿಸರ ವ್ಯವಸ್ಥೆಯನ್ನು ಬಲಪಡಿಸಲು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ಅಂಗಸಂಸ್ಥೆ ರಿಲಯನ್ಸ್ ಇಂಟೆಲಿಜೆನ್ಸ್ ಲಿಮಿಟೆಡ್ ಮೂಲಕ 18ರಿಂದ 25 ವರ್ಷದ ಒಳಗಿನ ಗ್ರಾಹಕರಿಗೆ ಈ ಕೊಡುಗೆ ಉಚಿತವಾಗಿ ಸಿಗಲಿದೆ ಎಂದು ತಿಳಿಸಿದೆ.

Reliance Jio Partners with Google to Offer Free Gemini Pro Access for 18 Months to Young Users

ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಗೂಗಲ್ ಗುರುವಾರ (ಅಕ್ಟೋಬರ್ 30) ಮಹತ್ವದ ಪಾಲುದಾರಿಕೆಯನ್ನು ಘೋಷಣೆ ಮಾಡಿದೆ. ಇದರಡಿಯಲ್ಲಿ ಭಾರತದಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯನ್ನು ವೇಗವಾಗಿ ವಿಸ್ತರಣೆ ಮಾಡಲಿ ಎರಡೂ ಕಂಪನಿಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಜಿಯೋ ಬಳಕೆದಾರರು 18 ತಿಂಗಳವರೆಗೆ ಗೂಗಲ್ ಎಐ ಪ್ರೊ ಯೋಜನೆಗೆ ಉಚಿತ ಬಳಕೆ ಅವಕಾಶವನ್ನು ಕಲ್ಪಿಸುವ ಉದ್ದೇಶ ಈ ಪಾಲುದಾರಿಕೆಯದ್ದಾಗಿದೆ.

ಈ ಆಫರ್ ಪ್ರತಿ ಬಳಕೆದಾರರಿಗೆ ಸುಮಾರು 35,100 ರೂಪಾಯಿ ಮೌಲ್ಯದ್ದಾಗಿದೆ. ಗೂಗಲ್ ಜೆಮಿನಿ 2.5 ಪ್ರೊ, ಇತ್ತೀಚಿನ ನ್ಯಾನೋ ಬನಾನಾ ಮತ್ತು ವಿಯೋ 3.1 ಮಾದರಿಗಳೊಂದಿಗೆ ಅದ್ಭುತ ಚಿತ್ರಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಲು ಬಳಕೆದಾರರಿಗೆ ವಿಸ್ತೃತ ಅವಕಾಶಗಳು ಸೃಷ್ಟಿಯಾಗುತ್ತಲಿವೆ. ಅಧ್ಯಯನ ಹಾಗೂ ಸಂಶೋಧನೆಗಾಗಿ ನೋಟ್‌ಬುಕ್ ಎಲ್ಎಂಗೆ ಹೆಚ್ಚಿನ ಪ್ರವೇಶ ಮತ್ತು 2 ಟಿಬಿ ಕ್ಲೌಡ್ ಸ್ಟೋರೇಜ್‌ನಂತಹ ಪ್ರೀಮಿಯಂ ಸೇವೆಗಳನ್ನು ಸಹ ಈ ಹೊಸ ಆಫರ್ ಒಳಗೊಂಡಿದೆ.

ಆರಂಭದಲ್ಲಿ ಈ ವೈಶಿಷ್ಟ್ಯವು 18 ರಿಂದ 25 ವರ್ಷ ವಯಸ್ಸಿನ ಜಿಯೋ ಬಳಕೆದಾರರಿಗೆ ಲಭ್ಯ ಇರುತ್ತದೆ. ನಂತರ, ಜಿಯೋದ ಎಲ್ಲಾ ಬಳಕೆದಾರರು ಇದರ ಪ್ರಯೋಜನ ದೊರೆಯಲಿದೆ. ಕಂಪನಿಯು ಈ ಎಐ ವೈಶಿಷ್ಟ್ಯವನ್ನು 5ಜಿ ಅನ್‌ಲಿಮಿಟೆಡ್ ಯೋಜನೆಗಳನ್ನು ಹೊಂದಿರುವ ಜಿಯೋ ಗ್ರಾಹಕರಿಗೆ ಮಾತ್ರ ಒದಗಿಸುತ್ತದೆ. ರಿಲಯನ್ಸ್‌ನ ಅಂಗಸಂಸ್ಥೆ ರಿಲಯನ್ಸ್ ಇಂಟೆಲಿಜೆನ್ಸ್ ಲಿಮಿಟೆಡ್ ಮತ್ತು ಗೂಗಲ್ ಸೇರಿ ಈ ವಿಶೇಷ ಆಫರ್ ಅನ್ನು ಜಿಯೋ ಗ್ರಾಹಕರಿಗೆ ತಂದಿವೆ. ಪ್ರತಿ ಭಾರತೀಯ ಗ್ರಾಹಕ, ಸಂಸ್ಥೆ ಮತ್ತು ಡೆವಲಪರ್ ಅನ್ನು ಎಐನೊಂದಿಗೆ ಜೋಡಿಸುವುದು ಇದರ ಉದ್ದಶವಾಗಿದೆ.

ಪಾಲುದಾರಿಕೆಯು ರಿಲಯನ್ಸ್‌ನ ಎಲ್ಲರಿಗೂ ಎಐ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ. ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, "145 ಕೋಟಿ ಭಾರತೀಯರಿಗೆ ಎಐ ಸೇವೆಗಳು ದೊರೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಗೂಗಲ್‌ನಂತಹ ದೀರ್ಘಕಾಲೀನ ಪಾಲುದಾರರೊಂದಿಗೆ ನಾವು ಭಾರತವನ್ನು ಕೇವಲ ಎಐ ಸಕ್ರಿಯಗೊಳಿಸುವುದಷ್ಟೇ ಅಲ್ಲದೆ, ಪ್ರತಿ ನಾಗರಿಕ ಮತ್ತು ಸಂಸ್ಥೆಯು ಎಐ ಬಳಸಿ ಅಭಿವೃದ್ಧಿ ಹೊಂದಲು ಕೃತಕ ಬುದ್ಧಿಮತ್ತೆ-ಸಕ್ರಿಯಗೊಳಿಸಬೇಕೆಂದು ಬಯಸುತ್ತೇವೆ," ಎಂದು ಹೇಳಿದರು.

"ಭಾರತದ ಡಿಜಿಟಲ್ ಭವಿಷ್ಯವನ್ನು ಸಾಕಾರಗೊಳಿಸುವಲ್ಲಿ ರಿಲಯನ್ಸ್ ಪ್ರಮುಖ ಪಾಲುದಾರಿಕೆ ಹೊಂದಿದೆ. ಈಗ ನಾವು ಈ ಸಹಯೋಗವನ್ನು ಎಐ ಯುಗಕ್ಕೆ ಕೊಂಡೊಯ್ಯುತ್ತಿದ್ದೇವೆ. ಈ ಉಪಕ್ರಮವು ಗೂಗಲ್‌ನ ಅತ್ಯಾಧುನಿಕ ಎಐ ಪರಿಕರಗಳನ್ನು ಭಾರತೀಯ ಗ್ರಾಹಕರು, ವ್ಯವಹಾರಗಳು ಮತ್ತು ಡೆವಲಪರ್‌ಗಳಿಗೆ ತರುತ್ತದೆ," ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದರು.

ಭಾರತವು ಜಾಗತಿಕ ಎಐ ಕೇಂದ್ರ ಆಗುವುದಕ್ಕೆ ಸಹಾಯ ಮಾಡಲು, ರಿಲಯನ್ಸ್ ಮತ್ತು ಗೂಗಲ್ ಸೇರಿ ಭಾರತದ ಕಂಪನಿಗಳಿಗೆ ಸುಧಾರಿತ ಎಐ ಹಾರ್ಡ್‌ವೇರ್, ಅಂದರೆ ಟೆನ್ಸರ್ ಪ್ರೊಸೆಸಿಂಗ್ ಯೂನಿಟ್‌ಗಳು ಬಳಕೆಯನ್ನು ಹೆಚ್ಚಳ ಮಾಡುತ್ತವೆ. ಇದು ಭಾರತೀಯ ವ್ಯವಹಾರಗಳು ದೊಡ್ಡ ಮತ್ತು ಸಂಕೀರ್ಣ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಇನ್ನು ರಿಲಯನ್ಸ್ ಇಂಟೆಲಿಜೆನ್ಸ್ ಅನ್ನು ಗೂಗಲ್ ಕ್ಲೌಡ್‌ನ ಕಾರ್ಯತಂತ್ರ ಪಾಲುದಾರ ಎಂದು ಕರೆಯಲಾಗಿದೆ. ಇದು ಭಾರತೀಯ ವ್ಯವಹಾರಗಳಲ್ಲಿ ಜೆಮಿನಿ ಎಂಟರ್‌ಪ್ರೈಸ್ ಬಳಕೆಯನ್ನು ಉತ್ತೇಜಿಸುತ್ತದೆ. ಇದು ಆಧುನಿಕ ಎಐ ವೇದಿಕೆಯಾಗಿದ್ದು, ಇದು ಉದ್ಯೋಗಿಗಳಿಗೆ ವಿವಿಧ ಕಾರ್ಯಗಳಲ್ಲಿ ಎಐ ಏಜೆಂಟ್‌ಗಳನ್ನು ಸೃಷ್ಟಿಸಲು ಮತ್ತು ಬಳಸಲು ಅನುವು ಮಾಡಿಕೊಡುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+