Artificial Intelligence: ಹೊಸ ಎಐ ಕಂಪನಿ ಘೋಷಿಸಿದ ಭಾರತದ ಖ್ಯಾತ ಉದ್ಯಮಿ
Artificial Intelligence: ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕ್ರಾಂತಿ ಆಗುತ್ತಿದೆ. ಅದರಲ್ಲೂ ಎಐ ಕಾಲಿಟ್ಟಾಗಿನಿಂದಲೂ ತುಂಬಾ ಬೆಳವಣಿಗಳು ಆಗುತ್ತಿವೆ. ಹಾಗೆಯೇ ಇದೀಗ ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಅವರು ಹೊಸ ಎಐ ಕಂಪನಿಯನ್ನು ಘೋಷಣೆ ಮಾಡಿದ್ದಾರೆ. ಹಾಗಾದ್ರೆ, ಇದರ ಉದ್ದೇಶ ಹಾಗೂ ಉಪಯೋಗಗಳು ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಜನರು ಚೇಂಜ್ ಕೇಳ್ತಾರೆ. ಅದರಂತೆಯೇ ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾವಣೆಗಳು ಆಗುತ್ತಲಿದ್ದು, ಇದಕ್ಕೆ ತಕ್ಕಂತೆ ಕಂಪನಿಗಳು ಕೂಡ ಹೊಸ ಹೊಸ ಘೋಷಣೆಗಳನ್ನು ಮಾಡುತ್ತಲಿವೆ. ಇದೀಗ ರಿಲಯನ್ಸ್ ಇಂಡಸ್ಟ್ರೀಸ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖೇಶ್ ಅಂಬಾನಿ ಹೊಸ ಕಂಪನಿಯನ್ನು ಘೋಷಣೆ ಮಾಡಿದ್ದಾರೆ. ರಿಲಯನ್ಸ್ ಇಂಟೆಲಿಜೆನ್ಸ್ ಎಂಬ ಹೊಸ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯನ್ನು ಮುಖೇಶ್ ಅಂಬಾನಿ ಘೋಣೆ ಮಾಡಿದ್ದಾರೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತವನ್ನ ಜಾಗತಿಕ ನಾಯಕತ್ವ ಮಟ್ಟಕ್ಕೆ ಬೆಳೆಸುವುದು ಇದರ ಉದ್ದೇಶ ಆಗಿದೆ.

ದೇಶದಲ್ಲಿ ಎಐ ಅನ್ನು ಉತ್ತೇಜಿಸಲು ರಿಲಯನ್ಸ್ ರಿಲಯನ್ಸ್ ಇಂಟೆಲಿಜೆನ್ಸ್ ಎಂಬ ಅಂಗಸಂಸ್ಥೆ ಕಂಪನಿಯನ್ನು ಸ್ಥಾಪನೆ ಮಾಡಲು ಮುಂದಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಈಗಾಗಲೇ ರಿಲಯನ್ಸ್‌ನ ಡೀಪ್-ಟೆಕ್ ವ್ಯವಹಾರವಾಗಿ ರೂಪಾಂತರಗೊಳ್ಳುವ ಹಾದಿಯಲ್ಲಿ ಇದೆ ಎಂದು ನನಗೆ ಹೆಮ್ಮೆಯಿದೆ. ಈ ಕಾರ್ಯಸೂಚಿಗೆ ಮತ್ತಷ್ಟು ವೇಗ ನೀಡಲು ಇಂದು ರಿಲಯನ್ಸ್ ಇಂಟೆಲಿಜೆನ್ಸ್ ಎಂಬ ಹೊಸ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯ ರಚನೆಯನ್ನ ಘೋಷಿಸಲು ನನಗೆ ಹೆಚ್ಚು ಸಂತೋಷ ಮತ್ತು ಗೌರವ ಇದೆ ಎಂದು ಮುಖೇಶ್ ಅಂಬಾನಿ ಹೇಳಿದರು.
ರಿಲಯನ್ಸ್ ಇಂಡಸ್ಟ್ರೀಸ್ ನೂತನ ಕಂಪನಿಗಾಗಿ ಗೂಗಲ್ ಮತ್ತು ಫೇಸ್‌ಬುಕ್ ಜೊತೆ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದೆ. ಈ ವೇಳೆ, ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಪಾಲುದಾರಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಗೂಗಲ್ ಜೊತೆಗಿನ ಪಾಲುದಾರಿಕೆ ಅಡಿಯಲ್ಲಿ, ರಿಲಯನ್ಸ್ ಇಂಟೆಲಿಜೆನ್ಸ್ ಇದೀಗ ಭಾರತದಲ್ಲಿ ಎಐ-ಸಿದ್ಧ ಡೇಟಾ ಕೇಂದ್ರಗಳನ್ನು ಸ್ಥಾಪಿಸಲಿದೆ. ಗೂಗಲ್‌ನ ಕಂಪ್ಯೂಟಿಂಗ್ ಶಕ್ತಿ, ರಿಲಯನ್ಸ್‌ನ ಶುದ್ಧ ಶಕ್ತಿ ಮತ್ತು ಜಿಯೋದ ಸುಧಾರಿತ ಸಂಪರ್ಕವನ್ನು ಈ ಕೇಂದ್ರಗಳಲ್ಲಿ ಬಳಕೆ ಮಾಡಲಾಗುತ್ತದೆ.
ಗೂಗಲ್ ಸಿಇಒ ಸುಂದರ್ ಪಿಚೈ ಅವರು ಮಾತನಾಡಿದ್ದು, ಭಾರತದಲ್ಲಿ ಎಐ ತಂತ್ರಜ್ಞಾನ ಹೆಚ್ಚೆಚ್ಚು ಅತ್ಯವಶ್ಯಕವಾಗಿ ಬೇಕಾಗುವ ಸಾಧ್ಯತೆಯಿದೆ. ಗೂಗಲ್ ಮತ್ತು ರಿಲಯನ್ಸ್ ತಮ್ಮ ಕಂಪನಿಯ ಎಲ್ಲಾ ವ್ಯವಹಾರ ಕ್ಷೇತ್ರಗಳನ್ನು ಇಂಧನ, ಚಿಲ್ಲರೆ ದೂರ ಸಂಪರ್ಕ ಮತ್ತು ಹಣಕಾಸು ಸೇವೆಗಳಂತಹವುಗಳನ್ನು ಎಐ ಸಹಾಯದಿಂದ ಪರಿವರ್ತಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ರಾಷ್ಟ್ರ ಮಟ್ಟದಲ್ಲಿ ಎಐ ತರಬೇತಿ ಮತ್ತು ನಿರ್ಣಯವನ್ನ ಮಾಡಲು ಸಾಧ್ಯ ಆಗುವಂತೆ ಗ್ರೀನ್ ಎನರ್ಜಿ ಮೇಲೆ ಕಾರ್ಯನಿರ್ವಹಿಸುವ ಗಿಗಾವ್ಯಾಟ್-ಪ್ರಮಾಣದ AI-Ready ಡೇಟಾ ಕೇಂದ್ರಗಳನ್ನು ನಿರ್ಮಿಸಲಾಗುತ್ತದೆ. ಈ ಕೇಂದ್ರಗಳ ನಿರ್ಮಾಣ ಗುಜರಾತ್‌ನ ಜಾಮ್‌ನಗರದಲ್ಲಿ ಈಗಾಗಲೇ ಪ್ರಾರಂಭ ಆಗಿದೆ ಎಂದು ತಿಳಿದುಬಂದಿದೆ.
ರಿಲಯನ್ಸ್ ಇಂಟೆಲಿಜೆನ್ಸ್ ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳು ಮತ್ತು ಮುಕ್ತ-ಮೂಲ ಸಮುದಾಯಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ. ಎಐ ವ್ಯವಸ್ಥೆಗಳಲ್ಲಿ ವಿಶ್ವಾಸಾರ್ಹತೆ, ಭಾರತೀಯ ಮಾನದಂಡಗಳು ಮತ್ತು ಬಲವಾದ ಪೂರೈಕೆ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಅಲ್ಲದೆ, ಈ ಹೊಸ ಘಟಕವು ಸಾರ್ವಜನಿಕರು, ಸಣ್ಣ ವ್ಯವಹಾರಗಳಿಗೆ ಮತ್ತು ದೊಡ್ಡ ಕೈಗಾರಿಕೆಗಳಿಗೆ ಸುಲಭ ಹಾಗೂ ವಿಶ್ವಾಸಾರ್ಹ ಎಐ-ಸಕ್ರಿಯಗೊಳಿಸಿದ ಸೇವೆಗಳನ್ನು ಒದಗಿಸಲಿದೆ. ಜೊತೆಗೆ ಶಿಕ್ಷಣ, ಕೃಷಿಯಂತಹ ರಾಷ್ಟ್ರೀಯ ಪ್ರಾಮುಖ್ಯತೆಯ ಕ್ಷೇತ್ರಗಳಿಗೆ ಅನುಕೂಲ ಆಗುವಂತೆ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications