ಭಾರತದಲ್ಲೇ ಎಐ ಕ್ರಾಂತಿ: 2026ರರಿಂದ ಮೊದಲ ಹಂತದ ಎಐ ಉತ್ಪನ್ನಗಳ ಡಿಪ್ಲಾಯ್ಮೆಂಟ್ ಶುರು!
ಯುಎಸ್, ಚೈನಾಗೆ ಹೋಲಿಸಿದರೆ ನಮ್ಮ ದೇಶ ಎಐ ಇನ್ನೋವೇಶನ್‌ನಲ್ಲಿ ಬಹಳ ಹಿಂದಿದೆ ಎಂಬುದು ಜನಜನಿತ ಸಂಗತಿ. ಅಂತೆಯೇ ಆ ದೇಶಗಳಿಗೆ ಹೋಲಿಸಿದ್ದಲ್ಲಿ ನಮ್ಮಲ್ಲಿನ ಸಾಮಾಜಿಕ ವ್ಯವಸ್ಥೆ, ರಾಜಕೀಯ ಇಚ್ಛಾಶಕ್ತಿ ಮತ್ತು ಜನರ ಮನೋಭಾವವೂ ಸಾಪೇಕ್ಷಿತವಾಗಿ ತುಸು ಹಿಂದೆ ಎಂಬುದು ಗೊತ್ತಿರುವ ಸಂಗತಿ. ಆದರೆ ಇಂದಿನ ಬಹುತೇಕ ಎಐ ಇನ್ನೋವೇಶನ್‌ನ ಹಿಂದೆ ಭಾರತೀಯರೇ ತುಂಬಿಕೊಂಡಿದ್ದಾರೆ ಎಂಬುದೂ ಸಹ ಮರೆಯಬಾರದ ಸತ್ಯ.
ಎಐ (ಕೃತಕ ಬುದ್ಧಿಮತ್ತೆ) ಇದೀಗ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದೆ. ಇದು ಯಂತ್ರಗಳನ್ನು ಮಾನವರಂತೆ ಯೋಚಿಸುವಂತೆ, ಕಲಿಯುವಂತೆ ಮತ್ತು ಸಮಸ್ಯೆಗಳನ್ನು ಪರಿಹರಿಸುವಂತೆ ಮಾಡುವ ತಂತ್ರಜ್ಞಾನವಾಗಿದ್ದು, ಇದನ್ನು ಆರೋಗ್ಯ, ಹಣಕಾಸು, ಮಾಧ್ಯಮ, ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ. ಈ ಎಐ ಕುರಿತು ಫೇಸ್ ಬಳಕೆದಾರರಾದ Madhu YN ಅವರು ತಮ್ಮ ಅಭಿಪ್ರಾಯವನ್ನ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಮುಖ್ಯವಾಗಿ ಕಳೆದ ಎರಡು ಮೂರು ವರುಷಗಳಿಂದ ಎದ್ದಿರುವ ಎಐ ಅಲೆಗೆ ಮೂಲ ವ್ಯಕ್ತಿ ಆಶೀಶ್ ವಸ್ವಾನಿ. ಇವರೇ 'Transformer' ಎಂಬ ಹೊಸ ತಂತ್ರಜ್ಞಾನಕ್ಕೆ ಪಾಯ ಹಾಕಿದವರು. 2017ರಲ್ಲಿ ಬಂದ 'Attention Is All You Need' ಎಂಬ ಸಂಶೋಧನಾ ಪ್ರಬಂಧದ ಸಹ-ಲೇಖಕರಲ್ಲಿ ಒಬ್ಬರು ಇವರು. ಲೆಕ್ಕದಲ್ಲಿ ಇವರಿಗೆ ಎಷ್ಟು ನೋಬೆಲ್ ಕೊಟ್ಟರೂ ಸಾಲದು. ಬಿಟ್ ಮೆಸ್ರಾ (BIT Mesra)ದ ಹಳೆಯ ವಿದ್ಯಾರ್ಥಿಯಾದ ಇವರು, ಇಂದಿನ ಚಾಟ್‌ಜಿಪಿಟಿ ಯುಗಕ್ಕೆ ಪರೋಕ್ಷವಾಗಿ ದಾರಿ ಮಾಡಿಕೊಟ್ಟ ಪ್ರಮುಖರಲ್ಲಿ ಒಬ್ಬರು. ಸಧ್ಯಕ್ಕೆ ಎಸೆಂಶಿಯಲ್ ಎಐ ಎಂಬ ಹೊಸ ಕಂಪನಿಯನ್ನು ಹುಟ್ಟುಹಾಕಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ.
ಪುಷ್ಮೀತ್ ಕೊಹ್ಲಿ (Google DeepMind): ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಬೆಳೆದ ಪುಷ್ಮೀತ್, ಇಂದು ಲಂಡನ್‌ನ Google DeepMind ನಲ್ಲಿ 'AI for Science' ವಿಭಾಗದ ಉಪಾಧ್ಯಕ್ಷರು. ಇತ್ತೀಚೆಗೆ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಡೇವಿಡ್ ಬೇಕರ್ ಮತ್ತು ಡೆಮಿಸ್ ಹಸ್ಸಾಬಿಸ್ ಅವರಂತಹ ದಿಗ್ಗಜರ ಜೊತೆ, ವಿಜ್ಞಾನದ ಕಠಿಣ ಸಮಸ್ಯೆಗಳನ್ನು ಬಿಡಿಸುವ ತಂಡದಲ್ಲಿ ಪುಷ್ಮೀತ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಪ್ರೋಟೀನ್ ರಚನೆಯನ್ನು ಭೇದಿಸುವ AlphaFold ನಂತಹ ಯೋಜನೆಗಳಲ್ಲಿ ಇವರ ತಂಡದ ಕೊಡುಗೆ ದೊಡ್ಡದು.
ಅನಿಮಾ ಆನಂದ್‌ಕುಮಾರ್ (Caltech): ಇದು ನಮ್ಮ ಮೈಸೂರಿಗೆ ಹೆಮ್ಮೆಯ ವಿಷಯ. ಕ್ಯಾಲ್ಟೆಕ್ ನಲ್ಲಿ ಪ್ರೊಫೆಸರ್ ಆಗಿರುವ ಅನಿಮಾ, ವಿಜ್ಞಾನ ಮತ್ತು AI ಎರಡನ್ನೂ ಬೆಸೆಯುವ ಪ್ರಯೋಗಗಳಲ್ಲಿ ತೊಡಗಿದ್ದಾರೆ. ಹಿಂದೆ NVIDIA ದಲ್ಲಿ AI ಸಂಶೋಧನೆಯ ನಿರ್ದೇಶಕರಾಗಿದ್ದ ಇವರು, ಇಂಜಿನಿಯರಿಂಗ್ ಮತ್ತು ಗಣಿತದ ಹಿನ್ನೆಲೆಯಿಂದ ಬಂದು ಜಾಗತಿಕ ಮನ್ನಣೆ ಗಳಿಸಿದ್ದಾರೆ.
ಮನೀಶ್ ಗುಪ್ತಾ (Google Research): ಎಲ್ಲರೂ ವಿದೇಶಕ್ಕೆ ಹಾರಿದರೆ, ಮನೀಶ್ ಗುಪ್ತಾ ಅವರು ಗೂಗಲ್‌ನ AI ಸಂಶೋಧನಾ ತಂಡದ ನಿರ್ದೇಶಕರಾಗಿ ಭಾರತದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತೀಯ ಭಾಷೆಗಳು ಮತ್ತು ಇಲ್ಲಿನ ಸಮಸ್ಯೆಗಳಿಗೆ AI ಪರಿಹಾರ ಕಂಡುಕೊಳ್ಳುವಲ್ಲಿ ಇವರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ರೋಹಿತ್ ಪ್ರಸಾದ್ (Amazon): ನಮ್ಮ ಮನೆಯ ಅಲೆಕ್ಸಾ ಹಿಂದೆ ಇರುವ ಪ್ರಮುಖ ತಾಂತ್ರಿಕ ನಾಯಕರಲ್ಲಿ ರಾಂಚಿಯ ರೋಹಿತ್ ಪ್ರಸಾದ್ ಒಬ್ಬರು. ಅಮೆಜಾನ್‌ನ AGI ವಿಭಾಗದ ಹಿರಿಯ ಉಪಾಧ್ಯಕ್ಷರಾಗಿದ್ದ ಇವರು, ಕಂಪನಿಯ AI ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ನೆನ್ನೆ ಮದ್ಯಾನದ ವರದಿಯ ಪ್ರಕಾರ, ಇವರು 2025ರ ಡಿಸೆಂಬರ್ ಅಂತ್ಯದಲ್ಲಿ ಅಮೆಜಾನ್ ನಿಂದ ನಿರ್ಗಮಿಸಲಿದ್ದಾರೆ.
ಅರವಿಂದ್ ಶ್ರೀನಿವಾಸ್ (Perplexity AI): ಗೂಗಲ್ ಸರ್ಚ್‌ಗೆ ಪೈಪೋಟಿ ನೀಡುತ್ತಿರುವ 'Perplexity AI' ಸ್ಥಾಪಕ, ಚೆನ್ನೈ ಮೂಲದ ಅರವಿಂದ್ ಶ್ರೀನಿವಾಸ್. 'Hurun India Rich List 2025' ವರದಿಯ ಪ್ರಕಾರ, ಇವರು ಭಾರತದ ಅತ್ಯಂತ ಕಿರಿಯ ಬಿಲಿಯನೇರ್ (ಶತಕೋಟ್ಯಧಿಪತಿ) ಎಂದು ಗುರುತಿಸಲ್ಪಟ್ಟಿದ್ದಾರೆ. ಇವರ ಕಂಪನಿಯ ಮೌಲ್ಯ ಸುಮಾರು $3 ಬಿಲಿಯನ್ (ಸುಮಾರು 25,000 ಕೋಟಿ ರೂ.) ಎಂದು ಅಂದಾಜಿಸಲಾಗಿದೆ.
ಮೇಲಿನವರೆಲ್ಲಾ ತಾಂತ್ರಿಕವಾಗಿ ಎಐ ವಲಯದಲ್ಲಿ ದುಡಿದವರು. ಕೆಳಗಿನ ತ್ರಿಮೂರ್ತಿಗಳು ಮೂರು ದೈತ್ಯ ಎಐ ಕಂಪನಿಗಳನ್ನು ಮುನ್ನಡೆಸುತ್ತಿರುವವರು.
1. ಸುಂದರ್ ಪಿಚೈ (Google & Alphabet): ತಮಿಳುನಾಡಿನ ಮದುರೈ ಮೂಲದ ಪಿಚೈ, ಗೂಗಲ್‌ನಂತಹ ಬೃಹತ್ ಸಂಸ್ಥೆಯ CEO. ಇವರ ನಾಯಕತ್ವದಲ್ಲಿ ಗೂಗಲ್ ತನ್ನನ್ನು 'AI-First' ಕಂಪನಿಯಾಗಿ ರೂಪಿಸಿಕೊಂಡಿತು. ಇಂದು ನಾವು ನೋಡುತ್ತಿರುವ 'Gemini' AI ಮಾಡೆಲ್‌ಗಳು ಜಗತ್ತಿಗೆ ಪರಿಚಯವಾಗಿದ್ದು ಇವರ ನೇತೃತ್ವದಲ್ಲೇ. ಖರಗ್‌ಪುರ IITಯಿಂದ ಆರಂಭವಾದ ಇವರ ಪಯಣ ಇಂದು ಜಾಗತಿಕ ಮಟ್ಟದಲ್ಲಿ ನಿಂತಿದೆ.
2. ಸತ್ಯ ನಾಡೆಲ್ಲಾ (Microsoft): ಹೈದರಾಬಾದ್‌ನ ಸತ್ಯ ನಾಡೆಲ್ಲಾ, ಮೈಕ್ರೋಸಾಫ್ಟ್‌ನ ದಿಕ್ಕನ್ನೇ ಬದಲಿಸಿದ ಚತುರ. OpenAI (ChatGPT) ಜೊತೆಗಿನ ಪಾಲುದಾರಿಕೆ ಇವರ ಮಾಸ್ಟರ್ ಸ್ಟ್ರೋಕ್ (ಇದೀಗ ಈ ಒಪ್ಪಂದದಿಂದ ಹೊರಬರುತ್ತಿದ್ದಾರೆ) ಮೈಕ್ರೋಸಾಫ್ಟ್‌ನ ಉತ್ಪನ್ನಗಳಲ್ಲಿ 'Copilot' ತರುವ ಮೂಲಕ AI ಅನ್ನು ಜನಸಾಮಾನ್ಯರ ಬಳಕೆಗೆ ಹತ್ತಿರವಾಗಿಸಿದ ಕೀರ್ತಿ ಇವರ ನಾಯಕತ್ವಕ್ಕೆ ಸಲ್ಲುತ್ತದೆ.
3. ಅರವಿಂದ್ ಕೃಷ್ಣ (IBM): ಶತಮಾನದ ಇತಿಹಾಸವಿರುವ IBM ಕಂಪನಿಯನ್ನು 'ಹೈಬ್ರಿಡ್ ಕ್ಲೌಡ್ ಮತ್ತು AI' ದಿಕ್ಕಿನಲ್ಲಿ ಮುನ್ನಡೆಸುತ್ತಿರುವವರು ಆಂಧ್ರ ಮೂಲದ ಅರವಿಂದ್ ಕೃಷ್ಣ. ತಾಂತ್ರಿಕವಾಗಿ ಮತ್ತು ವ್ಯಾವಹಾರಿಕವಾಗಿ IBM ಅನ್ನು ಹೊಸ ಯುಗಕ್ಕೆ ಸಜ್ಜುಗೊಳಿಸುತ್ತಿರುವ ಹೆಗ್ಗಳಿಕೆ ಇವರದ್ದು. ರೆಡ್ ಹ್ಯಾಟನ್ನು ಐಬಿಎಂನೊಂದಿಗೆ ವಿಲೀನಗೊಳಿಸುವಲ್ಲಿ ಬಹಳ ಮುಖ್ಯ ಪಾತ್ರವಹಿಸಿದವರು.
ಈ ಪಟ್ಟಿಗೆ ಲೇಟೆಸ್ಟ್ ಎಂಟ್ರಿಗಳು.
ಅಮರ್ ಸುಬ್ರಮಣ್ಯ (Apple): ಇದು ಇತ್ತೀಚಿನ ಸುದ್ದಿ. ಬೆಂಗಳೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಅಮರ್ ಸುಬ್ರಮಣ್ಯ ಈಗ ಆಪಲ್ ನ AI ವಿಭಾಗದ ಉಪಾಧ್ಯಕ್ಷರು! ದೀರ್ಘಕಾಲ ಗೂಗಲ್‌ನಲ್ಲಿದ್ದು, ನಂತರ ಮೈಕ್ರೋಸಾಫ್ಟ್ ಸೇರಿದ್ದ ಇವರು, ಈಗ ಆಪಲ್‌ನ ಸಿರಿ ಮತ್ತು AI ಭವಿಷ್ಯವನ್ನು ರೂಪಿಸಲು ಸಜ್ಜಾಗಿದ್ದಾರೆ.
ನೀಲ್ ಸುಂದರೇಶನ್ ಮತ್ತು ರಿತಿಕಾ ಗುನ್ನಾರ್ (IBM): ಇವರಿಬ್ಬರೂ IBM ನಲ್ಲಿ AI ವಿಭಾಗದ ಪ್ರಮುಖ ಹುದ್ದೆಗಳಲ್ಲಿದ್ದಾರೆ. ನೀಲ್ ಸುಂದರೇಶನ್ ಅವರು ಡೆವಲಪರ್‌ಗಳಿಗೆ ಕೋಡಿಂಗ್ ಸುಲಭವಾಗಿಸುವ AI ಟೂಲ್ಸ್‌ಗಳ ಅಭಿವೃದ್ಧಿಯಲ್ಲಿ (ಮುಂಚೆ ಮೈಕ್ರೋಸಾಫ್ಟ್‌ನಲ್ಲೂ) ಕೆಲಸ ಮಾಡಿದ್ದಾರೆ. ರಿತಿಕಾ ಗುನ್ನಾರ್ ಅವರು ಉದ್ಯಮಗಳಿಗೆ ಡೇಟಾ ಮತ್ತು AI ಅಳವಡಿಕೆಯಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಇವರಷ್ಟೇ ಅಲ್ಲ, AI ಕ್ಷೇತ್ರದ ಪಿತಾಮಹರೆಂದೇ ಕರೆಯಲ್ಪಡುವ ಟ್ಯೂರಿಂಗ್ ಪ್ರಶಸ್ತಿ ವಿಜೇತ ರಾಜ್ ರೆಡ್ಡಿ, OpenAI ನಲ್ಲಿ ಸಂಶೋಧಕರಾಗಿರುವ ಪುಣೆ ಮೂಲದ ಪ್ರತಿಭೆ ಪ್ರಫುಲ್ಲ ಧಾರಿವಾಲ್, ಮತ್ತು ಐಐಟಿ ಬಾಂಬೆಯ ಪ್ರೊಫೆಸರ್ ಸುನಿತಾ ಸರವಾಗಿ ಅವರಂತಹ ದಿಗ್ಗಜರು ಈ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.
ಗಮನಿಸಿದ್ದಲ್ಲಿ ಈ ತ್ವರಿತ ಗತಿಯ ಬೆಳವಣಿಗೆಗಳಲ್ಲಿ ಸ್ಪರ್ಧೆಗಳಲ್ಲಿ ಅಲ್ಲಿನವರು ಇಲ್ಲಿಗೆ ಇಲ್ಲಿನವರು ಅಲ್ಲಿಗೆ ಜಾಗ ಬದಲಾಯಿಸ್ತಿದಾರೆ. ಸಿಕ್ಕಾಪಟ್ಟೆ ಚರ್ನಿಂಗ್ ಆಗ್ತಾ ಇದೆ. ಪಬ್ಲಿಕ್ ಟಿವಿ ಭಾಷೆಯಲ್ಲಿ ಹೇಳುವುದಾದರೆ ಈ ಎಲ್ಲಾ ಕಂಪನಿಗಳು ಎದುರಾಳಿ ಕಂಪನಿಗಳಿಂದ ಪ್ರಖಾಂಡ ಮೆದುಳುಗಳನ್ನು ಖರೀದಿಸುವ 'ರಣಬೇಟೆ'ಯಲ್ಲಿ ತೊಡಗಿದ್ದಾರೆ. ಈ ಎಲ್ಲ ರಣಬೇಟೆಗಳ ಗುರಿ ಹೆಚ್ಚಾಗಿ ಭಾರತೀಯರೇ ಆಗಿದ್ದಾರೆ. ಹೊಸ ಅಂಕಿ-ಅಂಶಗಳ ಪ್ರಕಾರ ವಿಶ್ವದ ಉನ್ನತ 10% AI ಸಂಶೋಧಕರಲ್ಲಿ ಪ್ರತಿ 8ರಲ್ಲಿ ಒಬ್ಬರು ಭಾರತೀಯ ಮೂಲದವರಾಗಿದ್ದಾರೆ. 2025ರ ಅಂತ್ಯದ ವೇಳೆಗೆ ಭಾರತದ AI ಮಾರುಕಟ್ಟೆ ಮೌಲ್ಯ ಸುಮಾರು $17 ಬಿಲಿಯನ್ ದಾಟುವ ನಿರೀಕ್ಷೆಯಿದೆ. ಭಾರತ ಇಂದು ವಿಶ್ವದ 3ನೇ ಅತಿದೊಡ್ಡ AI ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ.
ಕಳೆದ ಮೂರು ವರುಷಗಳಿಂದ ಈ ತಂತ್ರಜ್ಞಾನ ಲ್ಯಾಬ್‌ನಲ್ಲಿದೆ, ಪ್ರೊಡಕ್ಷನ್‌ನಲ್ಲಿದೆ, ಡಿಪ್ಲಾಯ್ಮೆಂಟ್ ಆಗಲಿದೆ ಎಂದು ಹೇಳುತ್ತ ಬಂದೆವಲ್ಲಾ...ಮುಂದಿನ ವರುಷ ಅಂದರೆ 2026ರರಿಂದ ಮೊದಲ ಹಂತದ ಎಐ ಉತ್ಪನ್ನಗಳ ಡಿಪ್ಲಾಯ್ಮೆಂಟ್ ಶುರುವಾಗಲಿದೆ. ಪ್ರತಿ ತಂತ್ರಜ್ಞಾನ ಮೊದಲು ಡಿಪ್ಲಾಯ್ ಆಗುವುದು ತನ್ನದೇ ವಲಯದಲ್ಲಿ. ಹಾಗಾಗಿ ಇದರ ಒಟ್ಟಾರೆ ಪ್ರತಿಫಲ ಮತ್ತು ಹೊಡೆತ ಎರಡನ್ನೂ ಮೊದಲು ತಿನ್ನುವವರು ಐಟಿ ಎಂಜಿನೀರ್‌ಗಳಾಗಲಿದ್ದಾರೆ.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications