Grok AI: ಗ್ರೋಕ್ - ಎಐ ಇದನ್ನೂ ಮಾಡುತ್ತೆ ಎಂದ ಎಲಾನ್ ಮಸ್ಕ್! Viral Video
Grok AI: ಎಐ ಲೋಕದಲ್ಲಿ ದಿನಕ್ಕೊಂದು ಬದಲಾವಣೆಗಳು ಆಗುತ್ತಿವೆ. ಎಐ ಲೋಕದಲ್ಲಿ ವಿವಿಧ ಸಂಸ್ಥೆಗಳು ಅಥವಾ ಪೋರ್ಟಲ್‌ಗಳು ದಾಪುಗಲು ಇರಿಸಿವೆ. ಈ ರೀತಿ ಎಐ (Artificial Intelligence) ಲೋಕದಲ್ಲಿ ಮುನ್ನುಗ್ಗುತ್ತಿರುವ ಸಂಸ್ಥೆಗಳಲ್ಲಿ Grok ಗ್ರೋಕ್ ಸಹ ಒಂದಾಗಿದೆ. ಗ್ರೋಕ್ ಎಂಬುದು ಎಲಾನ್ ಮಸ್ಕ್ ಅವರ xAI ಅಭಿವೃದ್ಧಿಪಡಿಸಿದ AI ಚಾಟ್‌ಬಾಟ್ ಆಗಿದೆ. ಇದು ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ನಿಖರವಾಗಿ ಹಾಗೂ ನಿಷ್ಠುರವಾಗಿ ಕೆಲವು ವಿಷಯಗಳ ಬಗ್ಗೆ ಮಾಹಿತಿ ನೀಡುವ ಮೂಲಕವೇ ಗ್ರೋಕ್ ಗಮನ ಸೆಳೆದಿತ್ತು. ಈ ರೀತಿ ಕೆಲವೊಂದು ವಿಚಾರಗಳಿಗೆ ನಿಷ್ಠುರವಾಗಿ ಮಾಹಿತಿ ನೀಡುವುದರಿಂದಾಗಿ ಕೆಲವರ ಕೆಂಗಣ್ಣಿಗೂ ಎಲಾನ್ ಮಸ್ಕ್ ಅವರು ಗುರಿಯಾಗಿರುವುದು ಇದೆ. ಇದೀಗ ಗ್ರೋಕ್ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಭೌತಶಾಸ್ತ್ರಜ್ಞ ಲೂಯಿಸ್ ಬಟಲ್ಹಾ ಅವರು ಗ್ರೋಕ್ ಮತ್ತು AI-ರಚಿತ ವೀಡಿಯೊಗಳನ್ನು ಗುರುತಿಸುವ ಸವಾಲುಗಳ ಕುರಿತು ಚರ್ಚಿಸುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಆದರೆ ಭೌತಶಾಸ್ತ್ರಜ್ಞಕ್ಕೆ ಸಂಬಂಧಿಸಿದಂತೆ ಕೆಲವೊಂದು ನಿರ್ದಿಷ್ಟ ವಿಷಯಗಳ ಬಗ್ಗೆ ಗುರುತಿಸುವಲ್ಲಿ ಅಥವಾ ನಿಖರವಾಗಿ ಹೇಳುವಲ್ಲಿ ಗ್ರೋಕ್ ಸಮರ್ಪಕವಾಗಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ನಿರ್ವಾತ (ಯಾವುದೇ ವಸ್ತುವಿಲ್ಲದ ಅಥವಾ ವಾತಾವರಣದ ಒತ್ತಡಕ್ಕಿಂತ ತುಂಬಾ ಕಡಿಮೆ ಒತ್ತಡವಿರುವ ಸ್ಥಳ)ದಲ್ಲಿ ಚೆಂಡು ಮತ್ತು ಗರಿ ಬೀಳುವುದನ್ನು ಪ್ರದರ್ಶಿಸುವ ವೀಡಿಯೊವನ್ನು ಅವರು ಹಂಚಿಕೊಂಡಿದ್ದು, ಇದು AI-ರಚಿತ ದೃಶ್ಯಗಳಲ್ಲಿ ಭೌತಶಾಸ್ತ್ರದ ವಾಸ್ತವಿಕತೆಯನ್ನು ವಿವರಿಸುತ್ತದೆ.
ಭೌತಶಾಸ್ತ್ರಕ್ಕೆ ಸಂಬಂಧಿಸಿದ AI-ರಚಿತ ವೀಡಿಯೊಗಳನ್ನು ಹಾಗೂ ಅದರ ಅರ್ಥಗಳನ್ನು ತಿಳಿದುಕೊಳ್ಳುವುದರಲ್ಲಿ ಗ್ರೋಕ್ ಸಮರ್ಥವಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದಕ್ಕೆ ಟೆಸ್ಲಾ ಸಿಇಒ ಹಾಗೂ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಅವರು ತಿರುಗೇಟು ನೀಡಿದ್ದಾರೆ. ಗ್ರೋಕ್ ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂಬರ್ಥದಲ್ಲಿ ಚರ್ಚೆ ನಡೆದಿತ್ತು. ಈ ಚರ್ಚೆಗಳಿಗೆ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್ ಅವರು ಗ್ರೋಕ್ ಇಮ್ಯಾಜಿನ್ ವೀಡಿಯೊವಿನ ಭೌತಶಾಸ್ತ್ರವನ್ನು ಅರ್ಥಮಾಡಿಕೊಳ್ಳುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
Grok Imagine video generation understands physics https://t.co/tQe6gNTSds
— Elon Musk (@elonmusk) October 26, 2025
ಸುಳ್ಳು ಸುದ್ದಿಗಳ ಪತ್ತೆಗೆ ಗ್ರೋಕ್ ಸಹಕಾರಿ: ಇನ್ನು ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗುತ್ತಿರುವ ಸುಳ್ಳು ಸುದ್ದಿಗಳ ಪತ್ತೆಗೆ ಸಂಬಂಧಿಸಿದಂತೆ ಗ್ರೋಕ್ ಸಹಕಾರಿಯಾಗಿದೆ. ಗ್ರೋಕ್‌ನಿಂದಾಗಿ ಜನ ಯಾವುದು ನಿಜ ಯಾವುದು ಸುಳ್ಳು ಎನ್ನುವುದನ್ನು ತಿಳಿದುಕೊಳ್ಳುತ್ತಿದ್ದಾರೆ. ಅಲ್ಲದೇ ಗ್ರೋಕ್‌ನಿಂದ ನಿಖರ ಮತ್ತು ನಿಜವಾದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೇ ಎಐ ವಿಡಿಯೋಗಳಿಂದ ಆಗುತ್ತಿರುವ ಎಡವಟ್ಟು ಎಐ ರಚಿತ ಸುಳ್ಳು ವಿಡಿಯೋಗಳನ್ನು ಪತ್ತೆ ಮಾಡುವುದಕ್ಕೂ ಗ್ರೋಕ್ ಸಹಕಾರಿಯಾಗಿದೆ.












Click it and Unblock the Notifications