Free AI Course: ಕೇಂದ್ರ ಸರ್ಕಾರದಿಂದ ಎಐ ಬೇಸಿಕ್ಸ್‌ ಉಚಿತ ಕೋರ್ಸ್‌, ನೋಂದಣಿ ಹೇಗೆ?

ಇಂದಿನ ಉದ್ಯೋಗಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕೌಶಲ್ಯಗಳನ್ನು ಪರಿಗಣಿಸಲಾಗುತ್ತಿದೆ. ಎಐ ಟೂಲ್‌ಗಳ ಬಳಕೆ ಜ್ಞಾನ ಇದ್ದವರಿಗೆ ಕೆಲಸವೂ ಸುಲಭವಾಗಿ ಸಿಗುತ್ತಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರವು ಉಚಿತ ಕೋರ್ಸ್‌ವೊಂದನ್ನು ವಿದ್ಯಾರ್ಥಿಗಳಿಗಾಗಿ ಪರಿಚಯಿಸಿದೆ. ಇದರಿಂದ ವಿದ್ಯಾರ್ಥಿಗಳು ಉಚಿತವಾಗಿ ಎಐ ಬೇಸಿಕ್ಸ್‌ ಕಲಿಯಲು ಸಹಾಯವಾಗಲಿದೆ. ಇದಕ್ಕಾಗಿ ಸರ್ಕಾರವೇ 'ಯುವ ಎಐ ಫಾರ್‌ ಆಲ್' ಎಂಬ ಕೋರ್ಸ್ ಅನ್ನು ಪರಿಚಯಿಸಿದ್ದು, ಇದಕ್ಕೆ ವಿದ್ಯಾರ್ಥಿಗಳು ನೋಂದಾಯಿಸುವುದು ಹೇಗೆ ಎಂಬ ವಿವರ ಇಲ್ಲಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಕೋರ್ಸ್‌ ಅನ್ನು ಹೊರತಂದಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇಂಡಿಯಾಎಐ ಮಿಷನ್ ಅಡಿಯಲ್ಲಿ ರಾಷ್ಟ್ರವ್ಯಾಪಿಯಾಗಿ ಈ ಉಪಕ್ರಮವನ್ನು ಪ್ರಾರಂಭಿಸಿದೆ. ಇದು ಎಲ್ಲ ವಯೋಮಾನದ ಯುವಕರನ್ನು ಅಗತ್ಯ ಎಐ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ಇದು ಕೃತಕ ಬುದ್ಧಿಮತ್ತೆ ಕುರಿತಂತೆ ಸಂಪೂರ್ಣ ಉಚಿತ ಕೋರ್ಸ್ ಆಗಿದೆ.

Free Govt AI Basics Course How to Register for YUVA AI For All

ಈ ಹೊಸ ಎಲ್ಲರಿಗೂ ಯುವ ಎಐ ಫಾರ್‌ ಆಲ್ ಕಾರ್ಯಕ್ರಮವು ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಕೃತಕ ಬುದ್ಧಿಮತ್ತೆಯನ್ನು ಸರಳೀಕರಿಸಲು ವಿನ್ಯಾಸಗೊಳಿಸಲಾದ ಕೋರ್ಸ್‌ ಆಗಿದೆ. ಈ ಕೋರ್ಸ್‌ನ ಅವಧಿ ಸುಮಾರು 4.5 ಗಂಟೆಗಳು. ಭಾರತದಲ್ಲಿ ಎಐಗೆ ಸಂಬಂಧಿಸಿದ ಉದಾಹರಣೆಗಳು ಮತ್ತು ಪ್ರಾಯೋಗಿಕ ಪ್ರದರ್ಶನಗಳೊಂದಿಗೆ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಮೊದಲ ಬಾರಿಗೆ ಎಐ ಕಲಿಯುವವರಿಗೆ ಅರ್ಥವಾಗುವ ರೀತಿಯಲ್ಲಿ ವಿವರಣೆ ನೀಡಿ ಅರ್ಥೈಸಲಿದೆ.

ಕೋರ್ಸ್‌ನಲ್ಲಿ ಏನೆಲ್ಲ ಕಲಿಯಬಹುದು?

ಈ ಕೋರ್ಸ್ ಉಚಿತವಾಗಿದ್ದು, ಫ್ಯೂಚರ್‌ಸ್ಕಿಲ್ಸ್ ಪ್ರೈಮ್, ಐಜಿಒಟಿ ಕರ್ಮಯೋಗಿ ಹಾಗೂ ಇತರ ಆಯ್ದ ಎಡ್-ಟೆಕ್ ಪ್ಲಾಟ್‌ಫಾರ್ಮ್‌ಗಳಲ್ಲೂ ಲಭ್ಯವಿದೆ. ಕೋರ್ಸ್‌ ಪೂರ್ಣಗೊಂಡ ನಂತರ ಭಾರತ ಸರ್ಕಾರದ ಅಧಿಕೃತ ಪ್ರಮಾಣಪತ್ರವನ್ನು ಪಡೆಯಬಹುದು. ಒಟ್ಟು ಆರು ರೀತಿಯ ವಿಷಯಗಳನ್ನು ಈ ಕೋರ್ಸ್‌ ಒಳಗೊಂಡಿದೆ. AI ಎಂದರೇನು ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು, ಎಐ ಶಿಕ್ಷಣ, ಸೃಜನಶೀಲತೆ ಮತ್ತು ಕೆಲಸದ ಮಾರ್ಗಗಳನ್ನು ಹೇಗೆ ಬದಲಾಯಿಸುತ್ತಿದೆ ಎಂಬುದರ ಕುರಿತು, ಎಐ ಟೂಲ್‌ಗಳ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಯನ್ನು ಕಲಿಯುವುದು, ಎಐನಲ್ಲಿ ಉದಯೋನ್ಮುಖ ಅವಕಾಶಗಳು ಮತ್ತು ಭವಿಷ್ಯದ ವೃತ್ತಿ ಮಾರ್ಗಗಳು ಈ ಕೋರ್ಸ್‌ನಲ್ಲಿವೆ.

ಫ್ಯೂಚರ್‌ಸ್ಕಿಲ್ಸ್ ಪ್ರೈಮ್, ಐಜಿಒಟಿ ಕರ್ಮಯೋಗಿ ಅಥವಾ ಇತರ ಎಡ್-ಟೆಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಕೋರ್ಸ್‌ಗೆ ಪ್ರವೇಶಿಸಬಹುದು. ಹೊಸ ಖಾತೆಯನ್ನು ರಚಿಸಿ, ಸೈನ್ ಇನ್ ಮಾಡಿ. ಬಳಿಕ ಕೋರ್ಸ್ ಪುಟವನ್ನು ತೆರೆಯಿರಿ ಮತ್ತು ಅದನ್ನು ನಿಮ್ಮ ಡ್ಯಾಶ್‌ಬೋರ್ಡ್‌ಗೆ ಸೇರಿಸಲು ದಾಖಲಾತಿ ಅಥವಾ ಪ್ರಾರಂಭ ಬಟನ್ ಅನ್ನು ಒತ್ತಿ. ಬಳಿಕ ಕೋರ್ಸ್‌ ಮುಗಿಸಿದ ನಂತರ ಭಾರತ ಸರ್ಕಾರದ ಪ್ರಮಾಣಪತ್ರವನ್ನು ಪಡೆಯಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+