Artificial Intelligence: AI ಕಾರಣದಿಂದ ಬೆಂಗಳೂರಿನ ಈ ಭಾಗಗಳಲ್ಲಿ ಹೆಚ್ಚಾಯ್ತು ಟ್ರಾಫಿಕ್, ಹೇಗೆ?
ಕೃತಕ ಬುದ್ಧಿಮತ್ತೆ (ಎಐ) ಕಾಲ ಕ್ರಮೇಣವಾಗಿ ಉದ್ಯೋಗಗಳಲ್ಲಿ ಕ್ರಾಂತಿ ಮೂಡಿಸುತ್ತಿರುವುದು ಒಂದೆಡೆಯಾದರೆ, ಉದ್ಯೋಗಿಗಳನ್ನು ಮನೆಗೆ ಕಳುಹಿಸುವಲ್ಲಿಯೂ ಮುಂದಿದೆ. ಈಗೆಲ್ಲ ಎಐಗೆ ಒಗ್ಗಿಕೊಳ್ಳುತ್ತಿರುವ ದೈತ್ಯ ಕಂಪನಿಗಳು ನಿಧಾನವಾಗಿ ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿವೆ. ಇನ್ನು ಬೆಂಗಳೂರಿನ ಐಟಿ ಮಂದಿಗೂ ಈ ಎಐನ ಬಿಸಿ ತಟ್ಟಿದೆ. ಮೊದಲೆಲ್ಲ ಆಫೀಸ್‌ಗೆ ಬರೋಲ್ಲ, ಮನೆಯಲ್ಲೇ ಕೆಲಸ ಮಾಡ್ತೀವಿ ಎನ್ನುತ್ತಿದ್ದವರು, ಈಗ ಎಐ ಹಾಗೂ ಕೆಲಸ ಹೋಗುವ ಭಯದಲ್ಲಿ ಸುಮ್ಮನೆ ಆಫೀಸ್‌ಗಳಿಗೆ ಬರುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.
ಹೌದು AIನಿಂದಾಗಿ ಉದ್ಯೋಗಿಗಳನ್ನು ಹೆಚ್ಚಾಗಿ ಕೆಲಸದಿಂದ ವಜಾ ಮಾಡಲಾಗುತ್ತಿದೆ. ಕೆಲಸದ ಅಭದ್ರತೆಯ ಭಯದಿಂದಾಗಿ ಬೆಂಗಳೂರಿನ ಟೆಕ್ ಮಂದಿ ಹೆಚ್ಚಾಗಿ ಕಚೇರಿಗಳಿಗೆ ಬರುತ್ತಿದ್ದಾರೆ ಎಂದು ವರದಿಯಾಗಿದೆ. ವಿಶೇಷವಾಗಿ ಬುಧವಾರದಂದು ಬಹುತೇಕ ಸಿಬ್ಬಂದಿ ಕಚೇರಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಕಚೇರಿಗಳಲ್ಲಿ ಸಿಬ್ಬಂದಿಯ ಹಾಜರಾತಿ ಹೆಚ್ಚಾಗುತ್ತಿರುವುದು ಟ್ರಾಫಿಕ್ ಹೆಚ್ಚಳಕ್ಕೂ ಕಾರಣವಾಗಿದೆ.

ವಿಶೇಷವಾಗಿ ಪ್ರಮುಖ ಟೆಕ್ ಕಾರಿಡಾರ್ ಆಗಿರುವ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿರುವ 26 ಪ್ರಮುಖ ಟೆಕ್ ಪಾರ್ಕ್‌ಗಳಲ್ಲಿ ವಾಹನಗಳ ಪ್ರವೇಶವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಜೂನ್‌ನಲ್ಲಿ ಶೇ45 ರಷ್ಟು ಹೆಚ್ಚಾಗಿದೆ. ಅದರಲ್ಲೂ ಬುಧವಾರಗಳು ವಾಹನಗಳು ಅತ್ಯಧಿಕ ಏರಿಕೆಯನ್ನು ಕಂಡಿವೆ. ಕಳೆದ ಜೂನ್‌ನಲ್ಲಿ ಸುಮಾರು 82,000 ವಾಹನಗಳ ಎಂಟ್ರಿ ದಾಖಲಾಗಿದ್ದರೆ, ಈ ವರ್ಷ 1,20,000ಕ್ಕೂ ಹೆಚ್ಚು ವಾಹನಗಳು ದಾಖಲಾಗಿವೆ. ಇದೇ ಕಾರಣಕ್ಕೆ ಇತ್ತೀಚೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಬುಧವಾರದಂದು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಕೊಡಿ ಎಂದು ಮನವಿ ಮಾಡಿದ್ದರು.
ಕೋವಿಡ್ ಹೆಚ್ಚಾದ ನಂತರ ಎಲ್ಲ ಕಂಪನಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ (ವರ್ಕ್ ಫ್ರಂ ಹೋಂ) ವಿಧಾನವನ್ನು ಪರಿಚಯಿಸಿತು. ಇದರಿಂದಾಗಿ ಉದ್ಯೋಗಿಗಳು ವರ್ಷಾನುಗಟ್ಟಲೆ ಆಫೀಸ್‌ಗಳತ್ತ ಮುಖ ಮಾಡದೆ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಒಗ್ಗಿಕೊಂಡರು. ಈಗಲೂ ಹಲವು ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿದರೆ, ಆಫೀಸ್ ಖಾಲಿಯಾಗಿ ಕಾಣುವುದು ಬೇಡ ಎಂದು ಹೈಬ್ರಿಡ್ ವ್ಯವಸ್ಥೆ ಕಲ್ಪಿಸಿದೆ. ವಾರದಲ್ಲಿ ಕೆಲವು ದಿನ ಮನೆ, ಉಳಿದ ದಿನ ಕಚೇರಿಯಲ್ಲಿ ಕೆಲಸ ಮಾಡಿಸುತ್ತಿವೆ.
ಆದರೆ ಈಗ ಎಐ ಹೆಚ್ಚಾಗಿ ಬಳಕೆಯಾಗುತ್ತಿರುವುದರಿಂದ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದಕ್ಕೆ ಹೆದರಿ ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ದೊಡ್ಡನೆಕ್ಕುಂದಿಯ ಕಂಪನಿಗಳು ಕೂಡ ವಾರದಲ್ಲಿ ಕನಿಷ್ಠ ನಾಲ್ಕು ದಿನಗಳವರೆಗೆ ತಮ್ಮ ಕಚೇರಿ ಹಾಜರಾತಿಯನ್ನು ಹೆಚ್ಚಿಸಿವೆ. ಈ ಪ್ರವೃತ್ತಿಯು ಹೊರ ವರ್ತುಲ ರಸ್ತೆ, ಸರ್ಜಾಪುರ ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಗೆ ಹೋಗುವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಳಕ್ಕೆ ಕಾರಣವಾಗಿದೆ.
ಇದನ್ನು ಮನಗಂಡ ಬೆಂಗಳೂರು ಸಂಚಾರ ಪೊಲೀಸರು ಮತ್ತು ಅಧಿಕಾರಿಗಳು ಸಂಚಾರವನ್ನು ಸುಗಮಗೊಳಿಸಲು ವಾರದ ಮಧ್ಯದಲ್ಲಿ ಮನೆಯಿಂದ ಕೆಲಸ ಮಾಡುವ ನೀತಿಗಳು ಅಥವಾ ಕಚೇರಿ ಸಮಯವನ್ನು ಬದಲಾಯಿಸಲು ಸೂಚಿಸಿದ್ದಾರೆ. ಕೆಲವು ಟೆಕ್ ಕಂಪನಿಗಳು ಹೈಬ್ರಿಡ್ ನೀತಿಗಳನ್ನು ಹೊಂದಿವೆ. ಆದರೆ ಪ್ರಸ್ತುತ ಉದ್ಯೋಗಿಗಳಲ್ಲಿ ಒಟ್ಟಾರೆ ಆದ್ಯತೆಯು ತಮ್ಮ ಉದ್ಯೋಗಗಳನ್ನು ಉಳಿಸಿಕೊಳ್ಳುವ ಕಡೆಗೆ ಹೆಚ್ಚಾಗುತ್ತಿದೆ.
-
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು









Click it and Unblock the Notifications