AI in Restaurant: ರೆಸ್ಟೋರೆಂಟ್ ಉದ್ಯಮದಲ್ಲಿ ಎಐ ಅಳವಡಿಕೆ! ಪ್ರಯೋಜನಗಳು
AI Tech in Restaurant: ಭಾರತಾದ್ಯಂತ ಅತೀ ವೇಗವಾಗಿ ಸ್ಥಾನ ಪಡೆದುಕೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ (Artificial Intelligence) ಎಲ್ಲ ರಂಗದಲ್ಲೂ ತನ್ನ ಛಾಪು ಮೂಡಿಸುತ್ತಿದೆ. ಉದ್ಯೋಗಿ ಗುಂಪುಗಳನ್ನು ಕೆಲಸದಿಂದ ದೂರು ತಳ್ಳುವ ಜೊತೆಗೆ ಅಗತ್ಯ ಕಾರ್ಯವನ್ನು ವೇಗವಾಗಿ, ಕಡಿಮೆ ಬಜೆಟ್‌ನಲ್ಲಿ ಮಾಡಲಿದೆ. ಇದರಿಂದಲೂ ಸಾಕಷ್ಟು ಅನುಕೂಲ ಆಗಲಿದೆ ಎಂಬುದನ್ನು ಮರೆಯುವಂತಿಲ್ಲ.
ಶಿಕ್ಷಣ, ಐಟಿ, ಕಾಪೋರೇಟ್ ಹೀಗೆ ನಾನಾ ವಲಯದಲ್ಲಿ ಜಾಗ ಪಡೆಯುತ್ತಿರುವ ಕೃತಕ ಬುದ್ಧಿಮತ್ತೆ (AI) ರೆಸ್ಟೋರೆಂಟ್ ಉದ್ಯಮದಲ್ಲಿ ಹೇಗೆ ಗ್ರಾಹಕರನ್ನು ಸೆಳೆಯುತ್ತದೆ. ಇಲ್ಲಿನ ಕೆಲಸ ನಿರ್ವಹಣೆಯನ್ನು, ಅನುಭವವನ್ನು ಹೇಗೆ ಸುಧಾರಿಸುತ್ತದೆ. ಕೆಲಸವನ್ನು ಹೇಗೆ ಉತ್ತಮಗೊಳಿಸುತ್ತದೆ. ಎಐನಿಂದ ರೆಸ್ಟೋರೆಂಟ್ ಉದ್ಯಮದಲ್ಲಿ ಏನೆಲ್ಲ ಬದಲಾವಣೆ ಮಾಡಬಹುದು ಎಂಬದರ ಹೈಲೆಟ್ಸ್ ಇಲ್ಲಿದೆ ನೋಡಿ.

* ಗ್ರಾಹಕ ಅನುಭವ ಸುಧಾರಣೆ
ರೆಸ್ಟೋರೆಂಟ್ ಗ್ರಾಹಕರು AI-ಚಾಲಿತ ಚಾಟ್‌ಬಾಟ್‌ಗಳು, ವರ್ಚುವಲ್ ನೆರವು, ವೆಬ್‌ಸೈಟ್‌ಗಳು, ಇತರ ಅಪ್ಲಿಕೇಶನ್‌ಗಳು ಅಥವಾ ಸಂದೇಶ ವೇದಿಕೆಗಳ ಮೂಲಕ (ಉದಾ: ವಾಟ್ಸಾಪ್, ಫೇಸ್‌ಬುಕ್) ಆಟನ, ರೂಮ್ ಕಾಯ್ದಿರಿಸಬಹುದು. ಈ ಕುರಿತು ಆದೇಶ ಪಡೆಯಬಹುದು. ಇನ್ನೂ ಆಹಾರ ಪದಾರ್ಥಗಳ ಮೆನು ಸೂಚನೆಗೆ AI ಬಳಸಿ ಗ್ರಾಹಕರ ಆದ್ಯತೆ, ಬೇಡಿಕೆ ಪೂರೈಸಬಹುದು.
ಮೊಬೈಲ್‌ನಲ್ಲಿ ಅಲೆಕ್ಸ್ ರೀತಿಯಲ್ಲಿ ಧ್ವನಿ ಕ್ರಿಯೆಗಳ ಮೂಲಕ ಸ್ಮಾರ್ಟ್ ಆರ್ಡರ್ ಮಾಡಬಹುದು. ಸ್ಮಾರ್ಟ್ ಸ್ಪೀಕರ್‌ಗಳ ಬಳಕೆ ಇಲ್ಲವೇ AI-ಚಾಲಿತ ಕಿಯೋಸ್ಕ್‌ಗಳು ಹ್ಯಾಂಡ್ಸ್ ಫ್ರೀ ಆರ್ಡರ್ ಗೆ ಅವಕಾಶ ನೀಡುತ್ತದೆ. ಒಟ್ಟಾರೆ ಗ್ರಾಹಕರಿಗೆ ಅನುಭವ ಹೆಚ್ಚಿಸಲು ಇದು ನೆರವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.
* ಸುಧಾರಿತ ಕಾರ್ಯಾಚರಣೆಗಳು ಮತ್ತು ದಕ್ಷತೆ
ರೆಸ್ಟೋರೆಂಟ್‌ಗಳಲ್ಲಿ ಎಐ ಅಳವಡಿಕೆ ಆದರೆ ದಾಸ್ತಾನು ನಿರ್ವಹಣೆ ಮಾಡುತ್ತದೆ. ಏನೆಲ್ಲ ಅವಶ್ಯಕತೆಗಳು ಇದೆ ಎಂದು ಮೊದಲೇ ಊಹಿಸಲು ಸಾಧ್ಯವಾಗುತ್ತದೆ. ತ್ಯಾಜ್ಯ ಕಡಿಮೆ ಆಗುತ್ತದೆ ಜೊತೆಗೆ ಪೂರೈಕೆ ಸರಪಳಿ ಲಾಜಿಸ್ಟಿಕ್ಸ್ ಅನ್ನು ಉತ್ತಮಗೊಳಿಸುತ್ತದೆ. ಎಐ ಚಾಲಿತ ರೋಬೋಟ್‌ಗಳನ್ನು ಬಳಸಬಹುದು. ಸ್ಮಾರ್ಟ್ ಕಿಚನ್ ಆಟೊಮೇಷನ್ ರೀತಿಯಲ್ಲಿ ಬಳಸಿ ಗ್ರಾಹಕರಿಗೆ ಆಹರ ಪೂರೈಕೆ ಮಾಡಬಹುದು.
* ಮಾರ್ಕೆಟಿಂಗ್ ಮತ್ತು ಗ್ರಾಹಕರ ಮುನ್ಸೂಚನೆ
ರೆಸ್ಟೋರೆಂಟ್ ಕುರಿತು, ಇಲ್ಲಿನ ಸಿಬ್ಬಂದಿ ಸೇವೆ ಬಗ್ಗೆ ಗ್ರಾಹಕರಿಗೆ ಮುಂಚಿತವಾಗಿ ತಿಳಿಸಬಹುದು. ಪೀಕ್ ಸಮಯದಲ್ಲಿ ಹೋಟೆಲ್ ವಿಸಿಟ್, ಗ್ರಾಹಕರಿಗೆ ಹಿತಕರ ಸಮಯ ತಿಳಿಸಲು ಎಐ ತಂತ್ರಜ್ಞಾನ ಅಗತ್ಯವಾಗಿದೆ. ರೆಸ್ಟೋರೆಂಟ್ ವೊಂದರ ಜನಪ್ರಿಯ ಭಕ್ಷ್ಯಗಳ ಮೆನು ಕಾರ್ಡ್ ಅನ್ನು ಮುಂಚಿತವಾಗಿ ತಿಳಿಸಿ, ಗ್ರಾಹಕರಿಗೆ ಸಹಾಯ ಮಾಡುತ್ತದೆ. ಇದಷ್ಟೇ ಅಲ್ಲದೇ ಗ್ರಾಹಕರಿಂದ ಸೇವೆ ಬಗ್ಗೆ ವಿಮಶೇ, ತೃಪ್ತಭಾವನೆ, ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಕೊಳ್ಳುವಿಕೆಯನ್ನು ಎಐ ನಿರ್ವಃಇಸಲಿದೆ.
* ಆಹಾರ ತ್ಯಾಜ್ಯ ಕಡಿಮೆ: ಆಹಾರ ಉಳಿಯದಂತೆ ಕ್ರಮ
AI-ಚಾಲಿತ ತ್ಯಾಜ್ಯ ಟ್ರ್ಯಾಕಿಂಗ್ ಕ್ಯಾಮೆರಾ ಹಾಗೂ ಸಂವೇದನೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಮಾಡಿ ಉಳಿಯುವಂತೆ, ಕೆಡದಂತೆ ತಡೆಯುತ್ತದೆ. ಆಹಾರ ತ್ಯಾಜ್ಯವನ್ನು ಮೇಲ್ವಿಚಾರಣೆ ಮಾಡುತ್ತವೆ. ರೆಸ್ಟೋರೆಂಟ್‌ಗಳಲ್ಲಿ ಆಹಾರ ಪದಾರ್ಥಗಳ ದಾಸ್ತಾನು ಮಾಡಲು ಸಹಾಯ ಮಾಡುತ್ತದೆ. ಲಭ್ಯತೆ, ಗ್ರಾಹಕರ ಇಷ್ಟಗಳು, ಹೆಚ್ಚಿನ ವಹೀವಾಟು ಆಧಾರದಲ್ಲಿ ಮೆನು ಬದಲಾವಣೆಗೂ ಸಹ ಎಐ ಸಹಕಾರಿಯಾಗಲಿದೆ.
* ಭದ್ರತೆ ಜತೆಗೆ ವಂಚನೆ ತಡೆಗಟ್ಟುವಿಕೆ
ರೆಸ್ಟೋರೆಂಟ್‌ಗಳಲ್ಲಿ ವಂಚನೆ ಆಗುವುದನ್ನು ತಡೆಯಲು ಎಐ ಸಹಕಾರಿಯಾಗುತ್ತದೆ. AI-ಆಧಾರಿತ ಕಣ್ಗಾವಲು ವಿಧಾನ ಅಳವಡಿಕೆ ಮಾಡಬಹುದು. ಕಳ್ಳತನ, ಅನಧಿಕೃತ ವ್ಯಕ್ತಿಗಳ ಪ್ರವೇಶ ತಡೆಯುವ ಜೊತೆಗೆ ಭದ್ರತೆ ಒದಗಿಸುತ್ತದೆ. ಸಂಭವನೀಯ ಅಪಾಯ ತಡೆಸಲು ಸಾರ್ಧಯವಾಗುತ್ತದೆ. ಇದರೊಂದಿಗೆ ಆನ್‌ಲೈನ್ ನಲ್ಲಿ ಏನಾದರೂ ಆರ್ಡರ್‌ಗಳಲ್ಲಿ ವಂಚನೆ ಆಗಿದ್ದರೂ ಪತ್ತೆ ಮಾಡಿ, ನಷ್ಟ ತಡೆಯುತ್ತದೆ. ಪದೇ ಪದೇ ವಹೀವಾಟಿನಲ್ಲಿ ತೊಂದರೆ ಉಂಟು ಮಾಡಿದರೆ ಅದನ್ನು ಬ್ಲಾಕ್ ಸಹ ಮಾಡಲು ಈ ತಂತ್ರಜ್ಞಾನ ಬಳಕೆ ಮಾಡಬಹುದು.
* ರೆಸ್ಟೋರೆಂಟ್‌ಗಳಲ್ಲಿ AI ಮತ್ತು ರೊಬೊಟಿಕ್ಸ್
ಸಾಮಾನ್ಯವಾಗಿ ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಎಐ ಚಾಲಿತ ರೋಬೋಟ್ ವೇಟರ್‌ಗಳನ್ನು ನಿಯೋಜಿಸಲಾಗಿದೆ. ಇದರಿಂದ ಹತ್ತು ಕಾರ್ಮಿಕರ ಕೆಲಸಗಳನ್ನು ಎರಡು ರೋಬೋಟ್ ಮಾಡುತ್ತವೆ. ಆರ್ಡರ್ ಪಡೆಯುವುದು, ಪೂರೈಕೆ ಮಾಡುತ್ತವೆ. ಇದರಿಂದ ರೆಸ್ಟೋರೆಂಟ್ ಮಾಲೀಕರಿಗೆ ಕಾರ್ಮಿಕರಿಗೆ ನೀಡುವ ಕೂಲಿ ಉಳಿಯುತ್ತದೆ. ಆರ್ಡರ್ ಪಡೆಯುವುದರಲ್ಲಿ ನಿಖರತೆ ಉಳಿಯುತ್ತದೆ.
ಈ ರೆಸ್ಟೋರೆಂಟ್ ಉದ್ಯಮದಲ್ಲಿ ಎಐ ನಿಂದ ಸ್ಮಾಟ್ ಹಾಗೂ ಚುರುಕುತನದ ಕಾರ್ಯಾಚರಣೆ ಸಾಧ್ಯವಾಗಿಸಬಹುದು. ಗ್ರಾಹಕ-ಕೇಂದ್ರಿತ AI ರೆಸ್ಟೋರೆಂಟ್ ಉದ್ಯಮದಲ್ಲಿ ಕ್ರಾಂತಿ ಉಂಟು ಮಾಡುವ ನಿರೀಕ್ಷೆ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನ ಅಳವಡಿಕೆ ಅಗತ್ಯ ಅನ್ನುತ್ತಾರೆ ರೆಸ್ಟೋರೆಂಟ್ ಮಾಲೀಕರು..
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications