AI recruitment: ಐಟಿ ಕಂಪನಿಗಳಲ್ಲಿ ಎಐ ತಂತ್ರಜ್ಞಾನ ಬಳಸಿ ಉದ್ಯೋಗ ನೇಮಕಾತಿ
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದಾಗಿ ಅನೇಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಐಟಿ ಕಂಪನಿಗಳು ಇದೀಗ ತಮ್ಮ ನೇಮಕಾತಿಗಾಗಿ ಇದೇ ಎಐ ತಂತ್ರಜ್ಞಾನದ ಮೊರೆ ಹೋಗಿವೆ. ಭಾರತದಲ್ಲಿ AI ಆಧಾರಿತ ನೇಮಕಾತಿಗಳು ಈಗ ಶೇ 70ರಷ್ಟು ಐಟಿ ಕಂಪನಿಗಳಲ್ಲಿ ನಡೆಯುತ್ತಿವೆ.
ಶೇ 50ರಷ್ಟು ಬ್ಯಾಂಕಿಂಗ್ ಸೆಕ್ಟರ್‌ನಲ್ಲಿ ಎಐ ಬಳಸಲ್ಪಡುತ್ತಿವೆ. ಇದರಿಂದ ಉದ್ಯೋಗಾಕಾಂಕ್ಷಿಗಳ ರೆಸ್ಯೂಮೆ ಸ್ಕ್ರೀನಿಂಗ್ ಮತ್ತು ಸ್ಕಿಲ್ ಮ್ಯಾಚಿಂಗ್ ಈಗ ಸ್ವಯಂಚಾಲಿತಗೊಂಡಿದೆ. ಇಂಡಿಯಾ ಸ್ಕಿಲ್ಸ್ ರಿಪೋರ್ಟ್ 2026 ಪ್ರಕಾರ ಭವಿಷ್ಯದ ಉದ್ಯೋಗಗಳು AI, ಡೇಟಾ ಮತ್ತು ಕ್ಲೌಡ್ ತಂತ್ರಜ್ಞಾನಗಳಿಂದ ರೂಪುಗೊಳ್ಳುತ್ತಿವೆ. ಇದೀಗ ಎಐ ಸೇಫ್ಟಿ ಅನಲಿಸ್ಟ್‌ಗಳಂತಹ ಹೊಸ ಉದ್ಯೋಗಗಳಿಗೆ ಬೇಡಿಕೆ ಹೆಚ್ಚಾಗಿದ್ದು, 2027ರ ವೇಳೆಗೆ 1.25 ಮಿಲಿಯನ್ ಎಐ ತಜ್ಞರ ಅಗತ್ಯವಿದೆ ಎಂದು ಈ ವರದಿ ಹೇಳಿದೆ. ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ ಮತ್ತು ಕ್ಲೌಡ್ ಆರ್ಕಿಟೆಕ್ಚರ್‌ನಲ್ಲಿ ತೀವ್ರ ಕೊರತೆ ಇದ್ದು, ಇದು ದೇಶದ ಡಿಜಿಟಲ್ ಬೆಳವಣಿಗೆಗೆ ತೊಡಕಾಗಿದೆ ಎಂದು ಹೇಳಿದೆ.

ಸಾಂಪ್ರದಾಯಿಕ ಪದವಿ ಬದಲು ಎಐ ಸಾಕ್ಷರತೆ, ಡೇಟಾ ಫ್ಲೂಯೆನ್ಸಿ, ಕ್ಲೌಡ್ ಫಂಡಮೆಂಟಲ್ಸ್ ಮತ್ತು ಪ್ರಾಂಪ್ಟ್-ರೈಟಿಂಗ್‌ನಂತಹ ಮೈಕ್ರೋ-ಸ್ಕಿಲ್‌ಗಳು ಈಗ ಮುಖ್ಯವಾಗಿವೆ. ಡಿಜಿಟಲ್ ರೆಡಿನೆಸ್ ಮತ್ತು ಜೆನ್‌ಎಐ ಟೂಲ್‌ಗಳ ಜ್ಞಾನ ಬೇಕಾಗಿದೆ. ಅನಲಿಟಿಕಲ್ ಥಿಂಕಿಂಗ್ ಮತ್ತು ಅಡಾಪ್ಟಬಿಲಿಟಿ, ಹೆಚ್‌ಆರ್‌ನಿಂದ ಲಾಜಿಸ್ಟಿಕ್ಸ್‌ವರೆಗೆ ಕ್ರಾಸ್-ಡೊಮೇನ್ ಎಐ ಅಪ್ಲಿಕೇಶನ್‌ಗಳು ಇದೀಗ ನೇಮಕಾತಿಯಲ್ಲಿ ಬಳಸಲ್ಪಡುತ್ತಿವೆ.
ಮಾಡ್ಯುಲರ್ ಕೋರ್ಸ್‌ಗಳು, ಶಿಕ್ಷಕರಿಗೆ ಎಐ ತರಬೇತಿ ಮತ್ತು ರಾಷ್ಟ್ರೀಯ AI ಲಿಟರಸಿ ಕಾರ್ಯಕ್ರಮಗಳ ಮೂಲಕ ಟ್ಯಾಲೆಂಟ್ ಗ್ಯಾಪ್ ನಿವಾರಿಸಲು ಶಿಫಾರಸು ಮಾಡಲಾಗಿದೆ. ಫ್ರೆಶರ್‌ಗಳು ತಮ್ಮ ಡೊಮೇನ್‌ನೊಂದಿಗೆ ಎಐ ಟೂಲ್‌ಗಳನ್ನು ಸಂಯೋಜಿಸಿದರೆ ತಕ್ಷಣ ಉದ್ಯೋಗ ಪಡೆಯಲು ಅರ್ಹತೆ ಪಡೆಯಲಿದ್ದಾರೆ.
AI ಈಗ ನೇಮಕಾತಿ ಕೋಣೆಗೂ ಕಾಲಿಟ್ಟಿದೆ. ಈ ವರದಿಯು ಭಾರತದ ನೇಮಕಾತಿ ಪಟ್ಟಿಯಲ್ಲಿ ಜೆನ್‌ಎಐ ಎಷ್ಟರ ಮಟ್ಟಿಗೆ ಬಳಸಿದೆ ಎನ್ನುವುದನ್ನು ತೋರಿಸುತ್ತದೆ. ಸಂಶೋಧನೆಗಳ ಪ್ರಕಾರ ಸುಮಾರು ಶೇ 70ರಷ್ಟು ಐಟಿ ಕಂಪನಿಗಳು AI-ಚಾಲಿತ ನೇಮಕಾತಿ ಸಾಧನಗಳನ್ನು ಬಳಸುತ್ತವೆ. ಶೇ 50ರಷ್ಟು ಬಿಎಫ್‌ಎಸ್‌ಐ ಉದ್ಯೋಗದಾತರು ತಮ್ಮ ನೇಮಕಾತಿಯಲ್ಲಿ ಸ್ವಯಂಚಾಲಿತ ಭಾಗಗಳನ್ನು ಹೊಂದಿದ್ದಾರೆ.
ಇವು ಪ್ರತಿಭೆಯನ್ನು ಹೇಗೆ ಫಿಲ್ಟರ್ ಮಾಡಲಾಗುತ್ತದೆ ಎಂಬುದರಲ್ಲಿ ರಚನಾತ್ಮಕ ಬದಲಾವಣೆಯ ಸಂಕೇತಗಳಾಗಿವೆ. ನೇಮಕಾತಿಯ ಸ್ಕ್ರೀನಿಂಗ್, ಕೌಶಲ್ಯ-ಹೊಂದಾಣಿಕೆ, ನಡವಳಿಕೆಯ ಪರಿಶೀಲನೆಗಳು ಮತ್ತು ಸಂವಹನ ಮೌಲ್ಯಮಾಪನಗಳು ಸಹ ಎಐನಿಂದ ಹೆಚ್ಚು ಸ್ವಯಂಚಾಲಿತವಾಗುತ್ತಿವೆ. ಅಭ್ಯರ್ಥಿ ಈ ಕೆಲಸಕ್ಕೆ ಸರಿಹೊಂದುತ್ತಾರಾ? ಎಂಬುದನ್ನು ತಂತ್ರಜ್ಞಾನ ನಿರ್ಧರಿಸಲಿದೆ. ಅಭ್ಯರ್ಥಿಯ ಪ್ರೊಫೈಲ್ ಅನ್ನು AI ಪರಿಶೀಲಿಸಿ ಉದ್ಯೋಗಕ್ಕೆ ಅರ್ಹತೆ ಇದ್ದಾರೆಯೇ? ಎಂಬುದನ್ನು ತಿಳಿಸಲಿದೆ.












Click it and Unblock the Notifications