ಶಿಕ್ಷಣದಲ್ಲಿ AI: ಶಿಕ್ಷಕರಿಗೆ ಸವಾಲು, ವಿದ್ಯಾರ್ಥಿಗಳಿಗೆ ವರ?
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೊಂಚ ಕೊಂಚ ತಂತ್ರಜ್ಞಾನದತ್ತ ವಾಲುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಗೂಗಲ್ ಸರ್ಚ್ ಮೇಲೆ ಅವಲಂಬಿತರಾಗಿದ್ದ, ಜನರು ಈಗ ಎಐ ನತ್ತ ಮುಖ ಮಾಡಿದ್ದಾರೆ. ತಮ್ಮಲ್ಲಿನ ಯಾವುದೇ ಸಮಸ್ಯೆಗಳು ಇದಲ್ಲಿ ಅದನ್ನು ಅವರು ಎಐ ಮೂಲಕ ಬಗೆ ಹರಿಸಿಕೊಳ್ಳುತ್ತಾರೆ. ಎಐ ಕ್ರಮೇಣ ಜೀವನದಲ್ಲಿ ಹಾಸು ಹೊಕ್ಕುತ್ತಿದೆ. ಕೃತಕ ಬುದ್ಧಿಮತ್ತೆ ನಿಜಕ್ಕೂ ವಿದ್ಯಾರ್ಥಿಗಳಿಗೆ ವರವಾಗಿದ್ದರೆ, ಶಿಕ್ಷಕರಿಗೆ ಸವಾಲಾಗಿದೆ.
ಎಐ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸುತ್ತಾ ಸಾಗುತ್ತಿದೆ. ಇಷ್ಟು ದಿನ ಫೋಟೋ ಹಾಗೂ ವಿಡಿಯೋಗಳಿಗೆ ಹೆಚ್ಚಾಗಿ ಬಳಕೆ ಆಗುತ್ತಿದ್ದ ಈ ತಂತ್ರಜ್ಞಾನ ಈಗ ಟೆಕ್ಸಟ್ ಫಾರ್ಮೆಟ್‌ನಲ್ಲೂ ಅಬ್ಬರಿಸುತ್ತಿದೆ. ಇದರ ಲಾಭವನ್ನು ವಿದ್ಯಾರ್ಥಿಗಳು ಹೆಚ್ಚಾಗಿ ಪಡೆಯುತ್ತಿದ್ದಾರೆ. ಇದರ ಸಹಾಯದಿಂದ ವಿದ್ಯಾರ್ಥಿಗಳು ಕಠಿಣ ಸವಾಲುಗಳನ್ನು ಕ್ಷಣಾದರ್ಧದಲ್ಲಿ ಮಾಡಿ ಮುಗಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಸ್ವಂತಿಕೆ ಕಡಿಮೆ ಆಗುತ್ತಿದೆಯಾ ಎಂಬ ಸಂಶಯ ಕಾಡುತ್ತಿದೆ.

ಈ ತಂತ್ರಜ್ಞಾನವನ್ನು ಬಳಸುವುದರಿಂದ ವಿದ್ಯಾರ್ಥಿಗಳ ಸೃಜನಶೀಲತೆ ಕಡಿಮೆಯಾಗುತ್ತಿದೆ ಮತ್ತು ಮುಂಬರುವ ದಿನಗಳಲ್ಲಿ, ಬೋಧನೆ ಮತ್ತು ಮೌಲ್ಯಮಾಪನದ ವಿಧಾನಗಳನ್ನು ಬಲಪಡಿಸಲು ಶಿಕ್ಷಕರಿಗೆ ಸ್ವತಃ AI ನ ಹೆಚ್ಚುತ್ತಿರುವ ಬಳಕೆಯನ್ನು ಅರ್ಥಮಾಡಿಕೊಳ್ಳಲು ತರಬೇತಿಯ ಅಗತ್ಯವಿರುತ್ತದೆ ಎಂದು ಶಿಕ್ಷಕರು ನಂಬುತ್ತಾರೆ.
ಶಿಕ್ಷಕರಿಗೆ ಸವಾಲು
ಎಐ ಬಳಕೆಯಿಂದ ವಿದ್ಯಾರ್ಥಿಗಳ ಸೃಜನಶೀಲತೆ ಕುಂಠಿತವಾಗುತ್ತದೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಸವಾಲು ಆಗಬಹುದು. ಹೀಗಾಗಿ ಇದನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಈಗ ಶಿಕ್ಷಕರಿಗೂ ತುಂಬ ಇದೆ. ಹೀಗಾಗಿ ಹಲವು ಶಿಕ್ಷಕರು ಈಗ ತರಬೇತಿಯ ಮೊರೆ ಹೋಗುತ್ತಿದ್ದಾರೆ. ಶಿಕ್ಷಣ ತಜ್ಞರ ಪ್ರಕಾರ ತಂತ್ರಜ್ಞಾನವು ಪುಸ್ತಕವನ್ನು ಒದಗಿಸಬಹುದು. ಆದರೆ ಅದನ್ನು ಹೇಗೆ ಓದಿ, ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಗುರು ತಿಳಿಸುತ್ತಾನೆ. ಶಿಕ್ಷಕರು ತಮಗೆ ನೀಡಿದ ಕೆಲಸವನ್ನು ವಿದ್ಯಾರ್ಥಿಗಳಿಗೆ ನೀಡಿದರೆ, ವಿದ್ಯಾರ್ಥಿ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಬಗೆ ಹರಿಸುತ್ತಾನೆ. ಆದರೆ ಅನುಭವಿ ಶಿಕ್ಷಕ ಕ್ಷಣಾದರ್ಧದಲ್ಲಿ ಅದನ್ನು ಪತ್ತೆ ಹಚ್ಚಬಲ್ಲ.
ಅನೇಕ ಶಿಕ್ಷಕರಿಗೆ AI ಅನ್ನು ಸರಿಯಾಗಿ ಬಳಸುವುದು ಮತ್ತು ಅದರಿಂದ ಪಡೆದ ವಿಷಯವನ್ನು ಮೌಲ್ಯಮಾಪನ ಮಾಡುವುದು ಹೇಗೆಂದು ತಿಳಿದಿಲ್ಲ. AI ಮತ್ತು ಮೆಷಿನ್ ಲರ್ನಿಂಗ್ (ML) ಅನ್ನು ಈಗ IIT ದೆಹಲಿಯ ಎಲ್ಲಾ ಪದವಿಪೂರ್ವ ವಿದ್ಯಾರ್ಥಿಗಳಿಗೆ ಕೋರ್ಸ್‌ನಲ್ಲಿ ಸೇರಿಸಲಾಗಿದೆ, ಇದರಿಂದ ವಿದ್ಯಾರ್ಥಿಗಳು ಅದರ ಸರಿಯಾದ ಬಳಕೆಯ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ.
AI ನ ನಿಯಂತ್ರಿತ ಬಳಕೆಯತ್ತ ಸಿಂಗಾಪುರ್ ಮತ್ತು ಫಿನ್‌ಲ್ಯಾಂಡ್‌ನಂತಹ ದೇಶಗಳು ಗಮನ ಹರಿಸುತ್ತಿವೆ. ಭಾರತದಲ್ಲೂ ಶಿಕ್ಷಕರಿಗೆ ಎಐ ಕುರಿತು ತರಬೇತಿ ನೀಡುವ ಅವಶ್ಯಕತೆ ಇದೆ ಎಂದು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ತಿಳಿಸಿದೆ. ಬೋಧನಾ ವಿದಾನಗಳನ್ನು ಶಿಕ್ಷಕರು ಆಸಕ್ತಿದಾಯಕವಾಗಿಸಬೇಕು, ಅಲ್ಲದೆ ವೈವಾ ಹಾಗೂ ಪ್ರಾಯೋಗಿಕ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.












Click it and Unblock the Notifications