ಚೆಪಾಕ್‌ನಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟರ್‌ಗಳ ಅಬ್ಬರಕ್ಕೆ ಬ್ರೇಕ್ ಹಾಕಿದ ಸಿಎಸ್‌ಕೆ ಬೌಲರ್ಸ್
MI Vs CSK: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶನಿವಾರ (ಮೇ 2) ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಮನ್ ಧೀರ್ ಸ್ಫೋಟಕ ಅರ್ಧಶತಕದ ನೆರವಿನಿಂದ ಎಂಐ 159 ರನ್‌ಗಳನ್ನು ಪೇರಿಸಿತು.
ಶನಿವಾರ ನಡೆದ ಐಪಿಎಲ್ 2026ರ ನಿರ್ಣಾಯಕ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್‌ಗಳಿಗೆ ಕಟ್ಟಿಹಾಕಿದೆ.

ನಮನ್ ಧೀರ್ ಏಕಾಂಗಿ ಹೋರಾಟ
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಅವರ ವೈಯಕ್ತಿಕ ಫಾರ್ಮ್ ಮತ್ತು ತಂಡದ ಬ್ಯಾಟಿಂಗ್ ವೈಫಲ್ಯ ಎರಡೂ ಮುಂದುವರಿದವು. ನಮನ್ ಧೀರ್ 57(37), ರಯಾನ್ ರಿಕೆಲ್ಟನ್ 37(24), ಸೂರ್ಯಕುಮಾರ್ ಯಾದವ್ 21(12), ನಾಯಕ ಹಾರ್ದಿಕ್ ಪಾಂಡ್ಯ 18(23) ರನ್ ಸಿಡಿಸಿದ್ದು ಬಿಟ್ಟರೆ, ಉಳಿದವರು ಒಂದಂಕಿಯನ್ನು ಕೂಡ ದಾಟಲಿಲ್ಲ. ಇದೇ ಎಂಐ ಕಡಿಮೆ ಸ್ಕೋರ್ ಮಾಡಲು ಪ್ರಮುಖ ಕಾರಣವಾಯಿತು.
ಸಿಎಸ್‌ಕೆ ಪರ ಮಿಂಚಿದ ಅಂಶುಲ್ ಕಾಂಬೋಜ್
ಚೆನ್ನೈ ಸೂರ್ ಕಿಂಗ್ಸ್ ಪರ ಅದ್ಭುತ ಬೌಲಿಂಗ್ ಮಾಡಿದ ಅಂಶುಲ್ ಕಾಂಬೋಜ್ ಮೂರು ವಿಕೆಟ್ ಪಡೆದು ಮಿಂಚಿದರೆ, ಸ್ಪಿನ್ನರ್ ನೂರ್ ಅಹ್ಮದ್ ಎರಡು ವಿಕೆಟ್ ಕಬಳಿಸಿದರು. ಈ ಇಬ್ಬರೂ ಮಧ್ಯದ ಓವರ್‌ಗಳಲ್ಲಿ ಮುಂಬೈ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಉಳಿದಂತೆ ರಾಮಕೃಷ್ಣ ಘೋಷ್, ಜೇಮಿ ಓವರ್ಟನ್ ತಲಾ ಒಂದು ವಿಕೆಟ್ ಪಡೆದರು. ಅದರಲ್ಲೂ ಸಿಎಸ್‌ಕೆ ಪರ ಪದಾರ್ಪಣೆ ಮಾಡಿದ ರಾಮಕೃಷ್ಣ ಘೋಷ್ ಸೂರ್ಯಕುಮಾರ್ ಯಾದವ್ ಅವರ ಪ್ರಮುಖ ವಿಕೆಟ್ ಪಡೆಯುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ವಿಕೆಟ್ ಕಬಳಿಸಿದ ಕೀರ್ತಿಗೆ ಪಾತ್ರರಾದರು.
ಮುಂಬೈ ಇಂಡಿಯನ್ಸ್ ಪರ ನಮನ್ ಧೀರ್ ಬಾರಿಸಿದ ಅರ್ಧಶತಕವೊಂದೇ ಗಮನಾರ್ಹ ಇನ್ನಿಂಗ್ಸ್ ಎನಿಸಿಕೊಂಡಿತು. ಪ್ರಸ್ತುತ ಪಾಯಿಂಟ್ಸ್ ಟೇಬಲ್‌ನಲ್ಲಿ ಸಿಎಸ್‌ಕೆ ಮತ್ತು ಮುಂಬೈ ಕ್ರಮವಾಗಿ ಏಳು ಮತ್ತು 9ನೇ ಸ್ಥಾನದಲ್ಲಿದ್ದು, ಪ್ಲೇಆಫ್ ರೇಸ್‌ನಲ್ಲಿ ಜೀವಂತವಾಗಿರಲು ಈ ಪಂದ್ಯದ ಗೆಲುವು ಎರಡೂ ತಂಡಗಳಿಗೆ ಅನಿವಾರ್ಯವಾಗಿದೆ.












Click it and Unblock the Notifications