ತಮಿಳುನಾಡು ರಾಜಕೀಯ ಹೈಡ್ರಾಮಾ; ಟಿವಿಕೆಗೆ ಬಹುಮತ ಸಾಬೀತು ಸವಾಲು, 25 ಶಾಸಕರು ರೆಸಾರ್ಟ್‌ಗೆ ಶಿಫ್ಟ್

ಚೆನ್ನೈ: ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಅಧಿಕ ಮತಗಳನ್ನು ಗೆದ್ದ ಬೆನ್ನಲ್ಲೆ ನಿರಂತರವಾಗಿ ರಾಜ್ಯಪಾಲರನ್ನು ಭೇಟಿ ಮಾಡುತ್ತಿದ್ದಾರೆ. ನೆನ್ನೆ ಬುಧವಾರ ಭೇಟಿ ಮಾಡಿದ್ದ ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು ಇಂದು ಸ್ವತಃ ಲೋಕಭವನಕ್ಕೆ ರಾಜ್ಯಪಾಲರೇ ಆಹ್ವಾನಿಸಿದರು. ಬಹುಮತ ಸಾಬೀತು ಕುರಿತು ಕೇಳಿದ್ದಾರೆ. ಇತ್ತ ಅಣ್ಣಾಡಿಎಂಕೆ ಪಕ್ಷದಿಂದಲೂ ರಾಜ್ಯಪಾಲರ ಭೇಟಿಗೆ ವಿನಂತಿಸಲಾಗಿದೆ. ಇನ್ನೊಂದೆಡೆ ಡಿಎಂಕೆ ಹಾಗೂ ಕಾಂಗ್ರೆಸ್‌ನಿಂದ ಸಭೆ ನಡೆಯಲಿವೆ. ಈ ನಡುವೆ 25 ಶಾಸಕರು ರೆಸಾರ್ಟ್‌ಗೆ ಶೀಫ್ಟ್ ಆಗಿದ್ದಾರೆ. ರಾಜ್ಯದಲ್ಲಿ ಕ್ಷಣ ಕ್ಷಣಕ್ಕೂ ರಾಜಕೀಯ ಬೆಳವಣಿ ನಡೆಯುತ್ತಿದ್ದು, ಕೂತೂಹಲ ಹೆಚ್ಚಾಗುವಂತೆ ಮಾಡಿವೆ.

ಗುರುವಾರ ಬೆಳಗ್ಗೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ವಿಜಯ್ ಅವರನ್ನು ರಾಜ್ಯಪಾಲರು ಲೋಕಭವನಕ್ಕೆ ಬರುವಂತೆ ತಿಳಿಸುತ್ತಿದ್ದರು ಅದರಂತೆ ವಿಜಯ್ ಅವರನ್ನು ಭೇಟಿ ಮಾಡಿದ್ದಾರೆ. ಬಹುಮತ ನಿಮ್ಮಲ್ಲಿದೆಯೇ? ಆ ಬಗ್ಗೆ ಸ್ಪಷ್ಟತೆ ನೀಡುವಂತೆ ರಾಜ್ಯಪಾಲರು ಕೇಳಿದ್ದಾರೆ. ಇದಕ್ಕೆ ವಿಜಯ್ ಅವರು ಮೊದಲು ಸರ್ಕಾರ ರಚನೆಗೆ ನಮಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

TVK Vijay Tamil Nadu politics

ಈ ಮೂಲಕ ಟಿವಿಕೆ ಪಕ್ಷ ತಮಿಳುನಾಡಿನಲ್ಲಿ ಬಹುಮತ (118 ಸ್ಥಾನ) ಸಾಬೀತು ಮಾಡುವ ಮೊದಲೇ ಪದಗ್ರಹಣ ಮಾಡಲು ಮುಂದಾಗುತ್ತಿದೆ. ಇದಕ್ಕೆ ರಾಜ್ಯಪಾಲರಲ್ಲಿ ವಿಜರ್ ಅವರು ಮನವಿಯೇ ಸಾಕ್ಷಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌ ಬೆಂಬಲ ಘೋಷಿಸಿದ ಬಳಿಕವು 112 ಸ್ಥಾನಗಳನ್ನು ಹೊಂದಿರುವ ಟಿವಿಕೆಗೆ ಬಹುಮತ ಸಾಬೀತು ಮಾಡುವುದೇ ದೊಡ್ಡ ಸವಾಲಾಗಿದೆ.

ಎಐಎಡಿಎಂಕೆ ಶಾಸಕರಿಗೆ ಟಿವಿಕೆ ಗಾಳ, ನಡೆಯುತ್ತಾ ಕುದುರೆ ವ್ಯಾಪಾರ?

ಈಗಾಗಲೇ ಟಿವಿಕೆಗೆ ಬೆಂಬಲ ವ್ಯಕ್ತಪಡಿಸುವಂತೆ ವಿಜಯ್ ಅವರು ಅಣ್ಣಾಡಿಎಂಕೆ ಮೈತ್ರಿ ಪಕ್ಷಗಳನ್ನು ಕೋರಿದ್ದಾರೆ. ಈ ಬಗ್ಗೆ ಯಾವುದೇ ಸ್ಪಷ್ಟ ಪ್ರತ್ಯುತ್ತರ ಅವರು ಪಡೆದಿಲ್ಲ. ಸರ್ಕಾರ ರಚನೆ ಟಿವಿಕೆಗೆ ಸವಾಲಾಗುತ್ತಿದ್ದಂತೆ ಕುದುರೆ ವ್ಯಾಪಾರ ನಡೆಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

ರಾಜ್ಯಪಾಲರ ಭೇಟಿಗೆ ಪಳನಿಸ್ವಾಮಿ ಮನವಿ

ಟಿವಿಕೆ ವಿಜಯ್ ರಾಜ್ಯಪಾಲರನ್ನು ಭೇಟಿ ಮಾಡುತ್ತಿರುವ ನಡುವೆಯೇ ಇಂದು ಮಧ್ಯಾಹ್ನ ತಮಗೂ ರಾಜ್ಯಪಾಲರ ಭೇಟಿಗೆ ಅವಕಾಶ ನೀಡುವಂತೆ ಎಐಎಡಿಎಂ ಪ್ರಧಾನ ಕಾರ್ಯದರ್ಶಿ ಪಳನಿಸ್ವಾಮಿ ಅವರು ಸಹ ಮನವಿ ಮಾಡಿದ್ದಾರೆ. ಎಐಎಡಿಎಂಕೆ ಪಕ್ಷಕ್ಕೆ 47 ಸ್ಥಾನ ಬಂದಿವೆ. ಹೀಗಿದ್ದರೂ ರಾಜ್ಯಪಾಲರ ಮನವಿಗೆ ಕೋರುತ್ತಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ಮತ್ತೊಂದೆಡೆ ಇದೇ ಪಕ್ಷದ ಶಾಸಕರಿಗೆ ಟಿವಿಕೆ ಗಾಳ ಹಾಕಿದ್ದು, ಯಾವೊಬ್ಬ ಶಾಸಕ ಮೀನು ಸಿಕ್ಕಿಲ್ಲ. ತಮಿಳುನಾಡು ರಾಜಕೀಯದಲ್ಲಿ ಹೊಸ ಸರ್ಕಾರ ರಚನೆ ಆಗುವವರೆಗೂ ಇಂಥಹ ಬೆಳವಣಿಗೆಗಳಿಗೆ ಮತದಾರರು ಸಾಕ್ಷಿಯಾಗಲಿದ್ದಾರೆ.

AIADMK 25 ಶಾಸಕರು ರೆಸಾರ್ಟ್‌ಗೆ ಶಿಪ್ಟ್!

ಹೌದು, ಟಿವಿಕೆ ಸರ್ಕಾರ ರಚನೆಗೆ ಕ್ಷಣಗಣನೆ ಶುರುವಾಗಿದೆ. ವಿಜಯ್ ಅವರು 24 ಗಂಟೆಯಲ್ಲಿ ರಾಜ್ಯಪಾಲರನ್ನು ಎರಡು ಬಾರಿ ಭೇಟಿಯಾಗಿ ಮೊದಲು ಸರ್ಕಾರ ರಚನೆಗೆ ಅವಕಾಶ ಕೋರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೆ ಎಐಎಡಿಎಂಕೆ ಪಕ್ಷಕ್ಕೆ ಕುದುವೆ ವ್ಯಾಪಾರ ಭಯ ಶುರುವಾಗಿದೆ. ಟಿವಿಕೆಗೆ ಬಹುಮತಕ್ಕೆ 6 ಜನ ಶಾಸಕರ ಅಗತ್ಯವಿದೆ. ಸದ್ಯ ಯಾರೊಬ್ಬರು ಬಹಿರಂಗವಾಗಿ ತಮ್ಮ ಬೆಂಬಲ ಘೋಷಿಸಲು ಮುಂದಾಗಿಲ್ಲ.

ಈ ನಡುವೆ ಟಿವಿಕೆ-ಕಾಂಗ್ರೆಸ್ ಜೊತೆಗೂಡಿ ತಮ್ಮ ಶಾಸಕರನ್ನು ಖರೀದಿಸುತ್ತಾರೆ ಎಂಬ ಭಯಕ್ಕೆ 25 ಶಾಸಕರನ್ನು ರೆಸಾರ್ಟ್‌ ಸ್ಥಳಾಂತರ ಮಾಡಿದ್ದಾರೆ. ಯಾರೊಬ್ಬರು ಅಲ್ಲಿಂದ ಕದಲದಂತೆ ವ್ಯವಸ್ಥೆ ಮಾಡಿಕೊಂಡಿದೆ. ಇದರಿಂದ ಎಐಎಡಿಎಂಕೆಗೆ ಕೇವಲ ಟಿವಿಕೆಯನ್ನು ಸರ್ಕಾರ ರಚನೆಯಿಂದ ತಪ್ಪಿಸುವ ಪ್ಲಾನ್ ಮಾಡಿದೆ. ತಮ್ಮ ಶಾಸಕರು ಒಡೆದು ಹೋಗದಂತೆ ಕಾಪಾಡುವ, ಕಟ್ಟಿಹಾಕುವ ಯತ್ನ ಇದಾಗಿದೆ.

ಇಂದು ಸಂಜೆ ಕಾಂಗ್ರೆಸ್, ಡಿಎಂಕೆ ಪ್ರತ್ಯೇಕ ಸಭೆ

ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಿಸಿದ ಬೆನ್ನಲ್ಲೆ ಕಾಂಗ್ರೆಸ್ ಸಭೆ ನಡೆಸಲು ತೀರ್ಮಾನಿಸಿದೆ. ಟಿವಿಕೆ ಇನ್ನೇನು ಬಹುಮತದತ್ತ ದಾಪುಗಾಲು ಇಡುತ್ತಿದೆ. ಕಾಂಗ್ರೆಸ್‌ನಿಂದ ಹೇಗೆ ಬೆಂಬಲಿಸಬೇಕು. ಸರ್ಕಾರ ರಚನೆ ಬಳಿಕ ಅದರಲ್ಲಿ ಕಾಂಗ್ರೆಸ್ ಎಷ್ಟು ಸಚಿವ ಸ್ಥಾನಗಳನ್ನು ಪಡೆಯಬಹುದು, ಷರತ್ತುಗಳು ಸೇರಿದಂತೆ ಬೆಂಬಲ ಕುರಿತಾಗಿ ಮಹತ್ವದ ವಿಚಾರಗಳನ್ನು ಕಾಂಗ್ರೆಸ್ ನಾಯಕರು ಚರ್ಚಿಸಿ ನಿರ್ಧರಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+