TVK ಶಾಸಕರ ಸಂಖ್ಯೆ 116, ಬಹುಮತಕ್ಕೆ 2 ಸೀಟು ಬಾಕಿ; ವಿಜಯ್ ಪ್ರದಗ್ರಹಣಕ್ಕೆ ನೆಹರು ಮೈದಾನದಲ್ಲಿ ಸಿದ್ಧತೆ

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಬಹುಮತದ ಸವಾಲು ಎದುರಿಸುತ್ತಿದ್ದ ತಮಿಳಿಗೆ ವೆಟ್ರಿ ಕಳಗಂ (ಟಿವಿಕೆ) ವಿಜಯ್ ಅವರಿಗೆ ಬೆಂಬಲ ಹೆಚ್ಚಾಗಿದೆ. ಕಾಂಗ್ರೆಸ್ ಮತ್ತು ಸಿಪಿಐ ಶಾಸಕರ ಬೆಂಬಲ ಸೇರಿ ಒಟ್ಟು ಟಿವಿಕೆ ಸ್ಥಾನ 116ಕ್ಕೆ ಏರಿಕೆ ಆಗಿದೆ. ಇನ್ನೂ ಕೇವಲ 2 ಶಾಸಕರ ಬೆಂಬಲ ಮಾತ್ರವೇ ಬೇಕಿದೆ. ಮತ್ತೊಂದೆಡೆ ಸ್ವತಃ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಟಿವಿಕೆಗೆ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದೆ.

ಇಂದು ಗುರುವಾರ ರಾಜ್ಯಪಾಲರ ಭೇಟಿ ಮಾಡಿ ಟಿವಿಕೆ ಮುಖ್ಯಸ್ಥರ ವಿಜಯ್ ಅವರು ನಿರ್ಗಮಿಸುತ್ತಿದ್ದಂತೆ ಈ ಬೆಳವಣಿಗೆ ನಡೆದಿದೆ. ಟಿವಿಕೆ ಬೆಂಬಲಿಸುವ ಶಾಸಕರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ. ಕ್ಷಣದಿಂದ ಕ್ಷಣಕ್ಕೆ ತಮಿಳುನಾಡು ರಾಜಕೀಯದಲ್ಲಿ ಚಟವುಟಿಕೆಗಳು ಗರಿಗೆದರುತ್ತಿವೆ. ಟಿವಿಕೆ ಬಹುತಮ ಸ್ಥಾನಗಳನ್ನು (118) ಸಮೀಸುತ್ತಿದೆ.

TVK Nears Majority 116

ವಿಜಯ್ ಅವರಿಗೆ ವಿದುತಲೈ ಚಿರುತೈಗಲ್ ಕಚ್ಚಿ (VSK) 2, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) 2 ಮತ್ತು ಕಾಂಗ್ರೆಸ್ 5 ಶಾಸಕರ ಬೆಂಬಲ ಸೇರಿ ಒಟ್ಟು 116 ಸೀಟುಗಳನ್ನು ತಲುಪಿದೆ. ಇನ್ನೆರಡು ಸ್ಥಾನಗಳು ವಿಜಯ್‌ಗೆ ಅಗತ್ಯವಿದೆ. ಮತ್ತೊಂದೆಡೆ ಬಹುಮತ ಸಾಬೀತು ಮತ್ತು ಗೌರರ್ನರ್ ಅನುಮತಿ ಮುನ್ನವೇ ಚೆನ್ನೈನ ಬೃಹತ್ ಮೈದಾನದಲ್ಲಿ ಟಿವಿಕೆ ವಿಜಯ್ ಪದಗ್ರಹಣಕ್ಕೆ ಎಲ್ಲ ರೀತಿಯ ಸಿದ್ಧತೆಗಳು ಆರಂಭವಾಗಿವೆ.

ತಮಿಳುನಾಡು ರಾಜಕೀಯ ಹೈಡ್ರಾಮಾ; ಟಿವಿಕೆಗೆ ಬಹುಮತ ಸಾಬೀತು ಸವಾಲು, 25 ಶಾಸಕರು ರೆಸಾರ್ಟ್‌ಗೆ ಶಿಫ್ಟ್
ತಮಿಳುನಾಡು ರಾಜಕೀಯ ಹೈಡ್ರಾಮಾ; ಟಿವಿಕೆಗೆ ಬಹುಮತ ಸಾಬೀತು ಸವಾಲು, 25 ಶಾಸಕರು ರೆಸಾರ್ಟ್‌ಗೆ ಶಿಫ್ಟ್

ನಟ ವಿಜಯ್ ಸಿಕ್ಕ ಬೆಂಬಲ ಎಷ್ಟು?

ಟಿವಿಕೆ ಸ್ಥಾನ- 107

ಕಾಂಗ್ರೆಸ್ ಬೆಂಬಲ- 05

ಸಿಪಿಐ ಬೆಂಬಲ- 02

ವಿಸಿಕೆ ಬೆಂಬಲ- 02

ಒಟ್ಟು ಟಿವಿಕೆ ಸ್ಥಾನ-116

ಅಧಿಕಾರ ರಚನೆಯ ಮ್ಯಾಜಿಕ್ ಸಂಖ್ಯೆ- 118

ಲೋಕಭವನದ ಮುಂದೆ ಟಿವಿಕೆ ಬೆಂಬಲಿಗರ ಹೈಡ್ರಾಮಾ

ಲೋಕಭವನದಲ್ಲಿ ಪೋಸ್ಟರ್ ಹಿಡಿದ ಟಿವಿಕೆ ಬೆಂಬಲಿಗರು ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಘೋಷಣೆ ಕೂಗುವ ಮೂಲಕ ಹೈಡ್ರಾಮಾ ಮಾಡಿದರು. ಒಂದೆಡೆ ಬೆಂಬಲಿಗರ ಪಟ್ಟಿ ಸಲ್ಲಿಸಿರುವ ವಿಜಯ್ ಅವರು ಸಹ ಪದಗ್ರಹಣಕ್ಕೆ ಮನವಿ ಮಾಡಿದ್ದಾರೆ. ಇದೆಲ್ಲ ಒಂದೆಡೆಯಾದರೆ ಮತ್ತೊಂದೆಡೆ ವಿಜಯ್ ಬೆಂಬಲಿಗರು ಲೋಕಭವನದಲ್ಲಿ ಬಹುಮತ ಸಾಬೀತು ಮಾಡಿದ್ದಕ್ಕೆ ಭಿತ್ತಿ ಪತ್ರ ಹಿಡಿದು ಆಕ್ರೋಶ ಹೊರ ಹಾಕಿದ್ದಾರೆ. ವಿಧಾನಸಭೆಯಲ್ಲಿ ಬಹುತಮ ಸಾಬೀತು ಮಾಡಬೇಕು, ಲೋಕಭವನದಲ್ಲಿ ಅಲ್ಲ ಎಂದು ಆಗ್ರಹಿಸಿದ್ದಾರೆ. ಹೀಗಾಗಿ ರಾಜ್ಯಪಾಲರ ಭೇಟಿ ವೇಳೆ ಲೋಕಭವನದ ಮುಂದೆ ಹೈಡ್ರಾಮಾ ನಡೆಯಿತು.

ಚೆನ್ನೈ ನೆಹರು ಮೈದಾನದಲ್ಲಿ ಪದಗ್ರಹಣಕ್ಕೆ ಸಿದ್ಧತೆ

ಟಿವಿಕೆ ಬೆಂಬಲಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪದಗ್ರಹಣಕ್ಕೆ ವೇದಿಕೆ ಸಜ್ಜಾಗುತ್ತಿದೆ. ಸದ್ಯ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡುವ ಮುನ್ನವೇ ಚೆನ್ನೈ ಮಹಾನಗರ ನೆಹರು ಮೈದಾನದಲ್ಲಿ ಟಿವಿಕೆ ಮುಖ್ಯಸ್ಥ ಥಳಪತಿ ವಿಜಯ್ ಅವರ ಸಿಎಂ ಪದಗ್ರಹಣಕ್ಕೆ ಸಕಲ ರೀತಿಯಲ್ಲಿ ಸಿದ್ಧತೆ ಆರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+