Summer Special Trains: ಮೈಸೂರಿನಿಂದ ವಿಶೇಷ ರೈಲು ಸೇವೆ; ಹುಬ್ಬಳ್ಳಿ, ಬೆಂಗಳೂರಿನ ರೈಲು ಸೇವೆ ವಿಸ್ತರಣೆ

Summer Special Trains Karnataka: ಶಾಲಾ ಮಕ್ಕಳಿಗೆ ಬೇಸಿಗೆ ರಜೆ. ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಬೇರೆ ಬೇರೆ ಊರುಗಳಿಗೆ, ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ದಟ್ಟಣೆ ನಿವಾರಣೆಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ನೈಋತ್ಯ ರೈಲ್ವೆಯು ಹುಬ್ಬಳ್ಳಿ ಹಾಗೂ ಮೈಸೂರು ನಗರಗಳಿಂದ ಬೇಸಿಗೆ ವಿಶೇಷ ರೈಲುಗಳ ಕಾರ್ಯಾಚರಣೆ ನಡೆಸುತ್ತಿದೆ. ಈ ರೈಲುಗಳ ಸಮಯ, ಸಂಖ್ಯೆ, ವೇಳಾಪಟ್ಟಿ ವಿವರ ಇಲ್ಲಿದೆ.

ಬೇಸಿಗೆಯ ಹೆಚ್ಚುವರಿ ಪ್ರಯಾಣಿಕರ ಸಂಚಾರವನ್ನು ನಿಭಾಯಿಸಲು ಮೈಸೂರು ಜೋಧಪು‌ರ್ ನಡುವೆ ವಿಶೇಷ ರೈಲುಗಳು ಮತ್ತು ಹುಬ್ಬಳ್ಳಿಯಿಂದ ವಿವಿಧೆಡೆ ಹೊರಡುವ ವಿಶೇಷ ರೈಲುಗಳ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Summer Special Trains

* ಮೈಸೂರು - ಜೋಧಪುರ್ ಎಕ್ಸ್‌ಪ್ರೆಸ್ ವಿಶೇಷ ರೈಲು (06273) ಈ ರೈಲು ಏಪ್ರಿಲ್ 13, 20 ಮತ್ತು 27 ರಂದು ಮೂರೂ ಸೋಮವಾರ ದಿನದಂದು ಮೈಸೂರು ನಿಲ್ದಾಣದಿಂದ ರಾತ್ರಿ 20:15 ಗಂಟೆಗೆ ಹೊರಡುತ್ತದೆ. ಜೋಧಪುರ್ ಗೆ ಬುಧವಾರ ಸಂಜೆ 17 ಗಂಟೆಗೆ ತಲುಪಲಿದೆ.

* ಮರಳಿ ಅದೇ ದಿನಕ್ಕಿನಲ್ಲಿ ಜೋಧಪುರ್ ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು (06274) ಜೋಧಪುರ್ ನಿಲ್ದಾಣದಿಂದ ರಾತ್ರಿ 22:45 ಗಂಟೆಗೆ ಮೂರು ಗುರುವಾರ ಅಂದರೆ ಏಪ್ರಿಲ್ 16, 23 ಮತ್ತು 30 ರಂದು ಸಂಚಾರ ಮಾಡುತ್ತದೆ. ಶನಿವಾರ ಸಂಜೆ 18 ಗಂಟೆಗೆ ಮೈಸೂರು ಮುಟ್ಟುತ್ತದೆ.

ಹುಬ್ಬಳ್ಳಿ ವಿಶೇಷ ರೈಲು ಸೇವೆ ವಿಸ್ತರಣೆ

ಬೇಸಿಗೆ ದಟ್ಟಣೆ ನಿರ್ವಹಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಹೊರಡುವ ಈ ವಿಶೇಷ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

* ಎಸ್‌ಎಸ್‌ಎಸ್‌ ಹುಬ್ಬಳ್ಳಿ-ಗಾಜಿಪುರ ಸಿಟಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (07337) ಪ್ರತಿ ಸೋಮವಾರ ಹುಬ್ಬಳ್ಳಿಯಿಂದ ಹೊರಡುತ್ತದೆ. ಈ ರೈಲು ಸೇವೆಯನ್ನು ಏಪ್ರಿಲ್ 6 ರಿಂದ ಏಪ್ರಿಲ್ 27 ರವರೆಗೆ ಸಂಚರಿಸುವಂತೆ ವಿಸ್ತರಿಸಲಾಗಿದೆ.

* ಮರಳಿ ಅದೇ ದಿಕ್ಕಿನಲ್ಲಿ ಪ್ರತಿ ಗುರುವಾರ ಗಾಜಿಪುರ ಸಿಟಿ-ಎಸ್‌ಎಸ್‌ಎಸ್‌ ಹುಬ್ಬಳ್ಳಿ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (07338) ಸೇವೆಯು ಏಪ್ರಿಲ್ 9 ರಿಂದ ಏಪ್ರಿಲ್ 30 ರವರೆಗೆ ಸಂಚರಿಸಲಿದೆ. ಈ ವಿಸ್ತರಣೆಯ ಅವಧಿಯಲ್ಲಿ ಎರಡು ದಿಕ್ಕಗಳಲ್ಲಿ ತಲಾ ನಾಲ್ಕು ಟ್ರಿಪ್‌ಗಳ ಸೇವೆ ಲಭ್ಯವಾಗಲಿದೆ.

* ಎಸ್‌ಎಸ್‌ಎಸ್‌ ಹುಬ್ಬಳ್ಳಿ-ಮುಜಾಫರ್‌ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (07315) ಪ್ರತಿ ಬುಧವಾರ ಹುಬ್ಬಳ್ಳಿಯಿಂದ ಹೊರಡುತ್ತದೆ. ಏಪ್ರಿಲ್ 8 ರಿಂದ ಏಪ್ರಿಲ್ 29 ರವರೆಗೆ ರೈಲಿನ ಸೇವೆ ವಿಸ್ತರಣೆ ಮಾಡಲಾಗಿದೆ.

* ಮರಳಿ ಅದೇ ರೈಲು (07316) ಪ್ರತಿ ಶನಿವಾರ ಮುಜಾಫರ್‌ಪುರದಿಂದ ಹೊರಟ ಎಸ್‌ಎಸ್‌ಎಸ್‌ ಹುಬ್ಬಳ್ಳಿಗೆ ಬಂದು ಸೇರುತ್ತದೆ. ಈ ಹಿಂದೆ ನಿಗದಿ ಆಗಿದ್ದ ಏಪ್ರಿಲ್ 4 ರ ಬದಲಾಗಿ ಏಪ್ರಿಲ್ 11 ರಿಂದ ಮೇ 2 ರವರೆಗೆ ಸಂಚರಿಸುವಂತೆ ಸೇವೆ ವಿಸ್ತರಣೆ ಮಾಡಲಾಗಿದ್ದು, ಒಟ್ಟು ಎಂಟು ಟ್ರಿಪ್ ಸೇವೆ ಪ್ರಯಾಣಿಕರಿಗೆ ಸಿಗಲಿದೆ.

ಬೆಂಗಳೂರಿನಿಂದ ಹೊರಡುವ ರೈಲು ಸೇವೆ ವಿಸ್ತರಣೆ

* ಯಶವಂತಪುರ-ಬಿಕಾನೇರ್ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ವಿಶೇಷ ರೈಲು (06543) ಪ್ರತಿ ಬುಧವಾರ ಯಶವಂತಪುರದಿಂದ ಹೊರಡುತ್ತದೆ. ಈ ರೈಲು ಕಾರ್ಯಾಚರಣೆಯನ್ನು ಏಪ್ರಿಲ್ 8 ರಿಂದ ಏಪ್ರಿಲ್ 29 ರವರೆಗೆ ವಿಸ್ತರಿಸಲಾಗಿದೆ.

* ಮರಳಿ ಅದೇ ದಿಕ್ಕಿನಲ್ಲಿ ಶನಿವಾರ ಬಿಕಾನೇರ್‌ನಿಂದ ಹೊರಡುವ ಬಿಕಾನೇರ್-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ರೈಲು (06544) ಏಪ್ರಿಲ್ 11 ರಿಂದ ಮೇ 2 ರವರೆಗೆ ಸಂಚರಿಸಲಿದೆ. ಈ ಸೇವೆಗಳು ಸಹ ತಲಾ ನಾಲ್ಕು ಟ್ರಿಪ್‌ಗಳನ್ನು ಪೂರೈಸಲಿವೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+