ಭಾರತದಲ್ಲಿ ಐಸ್ ಕ್ರೀಂ ರಾಜಧಾನಿ ಯಾವ ನಗರ ಗೊತ್ತಾ? ಉತ್ತರ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ
ಭಾರತದಲ್ಲಿ ಐಸ್ ಕ್ರೀಂ ಸಾಮಾನ್ಯವಾಗಿ ಬೇಸಿಗೆಯ ಸಿಹಿ ತಿಂಡಿಯಾಗಿ ಮಾತ್ರ ಪರಿಗಣಿಸಲಾಗುತ್ತದೆ. ಆದರೆ ಒಂದು ನಗರದಲ್ಲಿ ಮಾತ್ರ ಐಸ್ ಕ್ರೀಂ ದೈನಂದಿನ ಜೀವನದ ಅವಿಬಾಜ್ಯ ಅಂಗವಾಗಿದೆ. ಊಟದ ನಂತರವೂ ಐಸ್ ಕ್ರೀಂ ತಿನ್ನುವುದು ಇಲ್ಲಿ ಸಾಮಾನ್ಯ. ಇಲ್ಲಿನ ಜನರು ಹವಾಮಾನ ನೋಡದೆ ಐಸ್ ಕ್ರೀಂ ಸವಿಯುತ್ತಾರೆ. ಈ ವಿಶಿಷ್ಟ ಅಭ್ಯಾಸವೇ ಆ ನಗರಕ್ಕೆ 'ಐಸ್ ಕ್ರೀಂ ಕ್ಯಾಪಿಟಲ್' ಎಂಬ ಹೆಸರು ಬರಲು ಕಾರಣವಾಗಿದೆ.
ಆ ನಗರವೇ ಕರ್ನಾಟಕದ ಕರಾವಳಿ ಭಾಗದಲ್ಲಿರುವ ಮಂಗಳೂರು. ಮಂಗಳೂರು ನಗರವು ಜನರು ವರ್ಷವಿಡೀ, ವಿಶೇಷವಾಗಿ ರಾತ್ರಿ ಊಟದ ನಂತರ ಐಸ್ ಕ್ರೀಮ್ ಸವಿಯಲು ಇಷ್ಟಪಡುತ್ತಾರೆ. ಅದಕ್ಕಾಗಿಯೇ ಈ ನಗರವನ್ನು "ಭಾರತದ ಐಸ್ ಕ್ರೀಮ್ ರಾಜಧಾನಿ" ಎಂದು ಕರೆಯಲಾಗುತ್ತದೆ.

'ಗಡಬಡ್' ಐಸ್ ಕ್ರೀಂ ಕಥೆ
ಮಂಗಳೂರಿಗೆ ಹೋಗಿ 'ಗಡಬಡ್' ಐಸ್ ಕ್ರೀಂ ಸವಿಯದೆ ಬರುವುದು ಅಪೂರ್ಣ. ಉಡುಪಿಯಲ್ಲಿ ಡಯಾನ ಹೋಟೆಲಿನಲ್ಲಿ ಅಕಸ್ಮಾತ್ತಾಗಿ ಹುಟ್ಟಿದ ಈ ವಿಶೇಷ ಐಸ್ ಕ್ರೀಮ್ ಗ್ಲಾಸ್‌ನಲ್ಲಿ ಹಲವು ರುಚಿಯ ಜೆಲ್ಲಿ, ಹಣ್ಣುಗಳು ಮತ್ತು ಡ್ರೈ ಫ್ರೂಟ್ಸ್‌ಗಳನ್ನು ಪದರ ಪದರವಾಗಿ ಹಾಕಿ ತಯಾರಿಸಲಾಗುತ್ತದೆ. ಇದು ಮಂಗಳೂರಿನ ಐಕಾನಿಕ್ ಡೆಸರ್ಟ್ ಆಗಿದೆ.
ಐಡಿಯಲ್ ಐಸ್ ಕ್ರೀಂ
ಐಡಿಯಲ್ ಐಸ್ ಕ್ರೀಂ ಕೇವಲ ಒಂದು ಬ್ರ್ಯಾಂಡ್ ಅಲ್ಲ ಅದು ಮಂಗಳೂರಿನ ಸಂಸ್ಕೃತಿ ಮತ್ತು ಹೆಮ್ಮೆಯ ಸಂಕೇತವಾಗಿ ಬೆಳೆದಿದೆ. 1975ರಲ್ಲಿ ಎಸ್. ಪ್ರಭಾಕರ್ ಕಾಮತ್ ಅವರು ಆರಂಭಿಸಿದ 'ಐಡಿಯಲ್ ಐಸ್ ಕ್ರೀಂ' ಮಂಗಳೂರಿನ ಐಸ್ ಕ್ರೀಂ ಸಂಸ್ಕೃತಿಯನ್ನು ಹೊಸ ಆಯಾಮಕ್ಕೆ ಕೊಂಡೊಯ್ದಿತು. ಆರಂಭದಲ್ಲಿ ಕೆಲವು ರುಚಿಗಳಿಂದ ಶುರುವಾದ ಈ ಬ್ರ್ಯಾಂಡ್ ಈಗ ಹಲವು ವೈವಿಧ್ಯಮಯ ಫ್ಲೇವರ್‌ಗಳಿಂದ ದೇಶದಾದ್ಯಂತ ಹೆಸರು ಮಾಡಿದೆ.
ದೊಡ್ಡ ಐಸ್ ಕ್ರೀಂ ಪಾರ್ಲರ್‌ಗಳ ನಗರ
ಮಂಗಳೂರಿನಲ್ಲಿ ದೊಡ್ಡ ಮಟ್ಟದ ಐಸ್ ಕ್ರೀಂ ಪಾರ್ಲರ್‌ಗಳು ಕಾಣಸಿಗುತ್ತವೆ. ಕೆಲವು ಸ್ಥಳಗಳಲ್ಲಿ ಒಂದೇ ಬಾರಿ ನೂರಾರು ಜನರು ಕುಳಿತು ಐಸ್ ಕ್ರೀಂ ಸವಿಯುವ ವ್ಯವಸ್ಥೆಯಿದೆ. ಇದು ನಗರದಲ್ಲಿ ಐಸ್ ಕ್ರೀಂಗೆ ಇರುವ ಪ್ರೀತಿ ಎಷ್ಟು ಹೆಚ್ಚಾಗಿದೆ ಎನ್ನುವುದನ್ನು ತೋರಿಸುತ್ತದೆ.
ಪಬ್ಬಾಸ್ ಐಸ್ ಕ್ರೀಂ ಪಾರ್ಲರ್ ಜನರ ಹಾಟ್‌ಸ್ಪಾಟ್
ಎಂ.ಜಿ.ರೋಡ್‌ನಲ್ಲಿರುವ 'ಪಬ್ಬಾಸ್' ಐಸ್ ಕ್ರೀಂ ಪಾರ್ಲರ್ ಮಂಗಳೂರಿನ ಜನಪ್ರಿಯ ಸ್ಥಳ. ಕುಟುಂಬಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಇಲ್ಲಿ ಸೇರಿ 'ಗಡಬಡ್', 'ಪರ್ಫೈಟ್' ಮುಂತಾದ ಐಸ್ ಕ್ರೀಂಗಳನ್ನು ಸವಿಯುತ್ತಾರೆ.
ಇಲ್ಲಿನ ಹಾಲು ಉತ್ಪಾದನೆ ಯಶಸ್ಸಿನ ರಹಸ್ಯ
ಮಂಗಳೂರಿನ ಸುತ್ತಮುತ್ತಲಿನ ಸಮೃದ್ದ ಹಾಲು ಉತ್ಪಾದನೆಯು ಈ ನಗರದ ಆರ್ಥಿಕತೆಗೆ ದೊಡ್ಡ ಬೆಂಬಲವಾಗಿದೆ. ಇಲ್ಲಿ ದೊರೆಯುವ ಉತ್ತಮ ಗುಣಮಟ್ಟದ ತಾಜಾ ಹಾಲು, ಮಂಗಳೂರಿನ ಐಸ್ ಕ್ರೀಮ್ ವಿಶ್ವದರ್ಜೆಯ ರುಚಿ ಮತ್ತು ವಿಶಿಷ್ಟ ಗುಣಮಟ್ಟವನ್ನು ನೀಡುತ್ತದೆ.
ವಿಭಿನ್ನ ರುಚಿಗಳ ಪ್ರಯೋಗ
ಮಂಗಳೂರು ಐಸ್ ಕ್ರೀಮ್ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಗಳಿಗೆ ಹೆಸರುವಾಸಿ. ಇಲ್ಲಿನ ಹವಾಮಾನ ಮತ್ತು ಸಂಸ್ಕೃತಿಗೆ ಒಪ್ಪುವಂತೆ ಹಲಸು, ಬೆಲ್ಲ, ಕರಿಮೆಣಸು, ಶುಂಠಿ ಮುಂತಾದ ಸ್ಥಳೀಯ ಪದಾರ್ಥಗಳನ್ನು ಬಳಸಿ ತಯಾರಿಸುವ ಹೊಸ ರುಚಿಗಳನ್ನು ಸೃಷ್ಟಿಸಲಾಗುತ್ತಿದೆ.
ಮಂಗಳೂರು ನಗರದಲ್ಲಿ ಐಸ್ ಕ್ರೀಂ ಕೇವಲ ಸಿಹಿ ತಿನಿಸಲ್ಲ, ಅದು ಒಂದು ಸಂಸ್ಕೃತಿ. ಈ ವಿಶಿಷ್ಟ ಆಹಾರ ಪರಂಪರೆ ಮತ್ತು ಜನರ ಆಸಕ್ತಿ ಮಂಗಳೂರನ್ನು ಭಾರತದ 'ಐಸ್ ಕ್ರೀಂ ಕ್ಯಾಪಿಟಲ್' ಆಗಿ ರೂಪಿಸಿದೆ.














Click it and Unblock the Notifications