ಹಾಸ್ಯ : ಗಂಡನಿಗೆ ಹೆಂಡತಿ ಕಳಿಸಿದ ಆ ಎರಡು ಮೆಸೇಜ್

1st:
ಆಫೀಸ್‌ನಿಂದ್ ವಾಪಸ್ ಬರೋವಾಗ ತರಕಾರಿ ತರೋದನ್ನಾ ಮರಿಬೇಡಿ,

2nd:
ಹಾಗೆ ಸವಿತಾ ಮನೆಗ್ ಬಂದಿದ್ಲೂ,ಹಾಗೆಯೇ ನಿಮ್ಮ ಬಗ್ಗೆ ವಿಚಾರಿಸಿದಳು...😊😊

ಗಂಡ: (Excite ಆಗಿ) ಈ ಸವಿತಾ ಯಾರು??

ಹೆಂಡ್ತಿ: ಯಾರಿಲ್ಲಾ, ನೀವ್ ಮೆಸೆಜ್ ನೋಡಿದ್ರಾ? ಇಲ್ವಾ? ಅಂತಾ ಕನ್ಫರ್ಮ್ ಮಾಡ್ಕೋಂಡೆ ಅಷ್ಟೇ..😜😜

(ಕಥೇಲಿ ಟ್ವಿಸ್ಟ್)

ಗಂಡ: ಅದೇ ನಾನು ಅನ್ಕೊಂಡೆ ನಾನೀಗಾ ಸವಿತಾ ಜೊತೆಲೆ ಇದೀನಿ, ನೀನ್ ಯಾವ್ ಸವಿತಾ ಬಗ್ಗೆ ಹೇಳ್ತಿದಿಯಾ ಅಂತಾ??

ಹೆಂಡ್ತಿ: ಏನಂದ್ರಿ ನೀವೆಲ್ಲಿದಿರಾ ಈಗ?

ಗಂಡ: ತರಕಾರಿ ಮಾರ್ಕೇಟ್ ಹತ್ರಾ.

ಹೆಂಡ್ತಿ: ಅಲ್ಲೆ ಇರಿ ನಾ ಅಲ್ಲೆ ಬರ್ತಿದಿನಿ,

(10 ನಿಮಿಷ ಆದ್ಮೇಲೆ ಮಾರ್ಕೆಟ್ ಗೆ ಬಂದು)

ಹೆಂಡ್ತಿ: ನೀವೆಲ್ಲಿದಿರಿ?? ನಾನ್ ತರಕಾರಿ ಮಾರ್ಕೇಟ್ ಹತ್ರಾ ಬಂದಿದಿನಿ..

ಗಂಡ: ನಾನ್ ಆಫೀಸಲ್ಲಿದಿನಿ, ಏನ್ ತರಕಾರಿ ಬೇಕೋ ತಗೊಂಡ್ ಮನೆಗ್ ಹೋಗು..😂🤣😂🤣

Joke of the Day : Husband and Wife jokes

***

ಗಂಡ ಹೆಂಡತಿ ಅನ್ಯೋನ್ಯವಾಗಿ ಬಾಳುತ್ತಿದ್ದರು. ಕೆಲವು ವರ್ಷಗಳ ನಂತರ ಹೆಂಡತಿಗೆ ಗಂಡನ ಪ್ರೀತಿಯ ಬಗ್ಗೆ ಅನುಮಾನ ಶುರುವಾಯಿತು.

ಸದಾಕಾಲ ಗಂಡನ ಪ್ರೀತಿ ನನ್ನ ಮೇಲೆ ಇರಬೇಕು ಎಂಬ ಆಸೆಯಿಂದ ಭಗವಂತನಲ್ಲಿ ವರನನ್ನು ಬೇಡಲು ತಪಸ್ಸಿಗೆ ಕುಳಿತಳು.

ಹೆಂಡತಿಯ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾದನು.
ಅವಳು ದೇವರಲ್ಲಿ 5 ವರಗಳನ್ನು ಕೇಳಿದಳು.

1) ನನ್ನ ಗಂಡ ನನ್ನ ಬಿಟ್ಟು ಎಲ್ಲಿಗೂ ಹೋಗಬಾರದು.

2) ನನ್ನ ಗಂಡನ ಜೀವನದಲ್ಲಿ ನಾನೆ ಮಹತ್ವಪೂರ್ಣ ಆಗಿರಬೇಕು.

3) ಅವನಿಗೆ ನಿದ್ದೆ ಬಂದಾಗ ನಾನು ಪಕ್ಕದಲ್ಲೇ ಇರಬೇಕು.

4) ಬೆಳಿಗ್ಗೆ ಅವನು ಕಣ್ಣು ಬಿಟ್ಟಾಗ ಮೊದಲು ನನ್ನನ್ನೆ ನೋಡಬೇಕು.
5) ನನಗೆ ಏನಾದ್ರೂ ತೊಂದರೆ ಆದರೆ ಅವನ ಜೀವ ಹೋದಂಗೆ ಆಗಬೇಕು.

ದೇವರು:- ನೋಡಮ್ಮ, ಈ ಕಲಿಗಾಲದಲ್ಲಿ ಗಂಡನನ್ನು ಶ್ರೀರಾಮನಾಗಿ ಮತ್ತು ಹೆಂಡತಿಯನ್ನು ಸೀತೆಯಾಗಿ ಊಹಿಸಿಕೊಳ್ಳುವುದು ಕಷ್ಟ. ಮತ್ತೊಮ್ಮೆ ಯೋಚಿಸಿ ವರ ಕೇಳು.

ಹೆಂಡತಿ: ಇಲ್ಲ, ನನಗೆ ಆ 5 ವರಗಳೇ ಬೇಕು.

ದೇವರು: ತಥಾಸ್ತು.
ಹೆಂಡತಿಯು " ಒಂದು ಮೊಬೈಲ್ ಫೋನ್ " ಆಗಿ ಬದಲಾದಳು.

😍😍😄😄😃😍😍
***

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+