ಕೊಪ್ಪಳ; ಸಹ ಶಿಕ್ಷಕರ ಹುದ್ದೆಗೆ ಅರ್ಜಿಗಳ ಆಹ್ವಾನ
ಕೊಪ್ಪಳ, ಜನವರಿ 07: ಕೊಪ್ಪಳ ತಾಲೂಕಿನ ಕರ್ಕಿಹಳ್ಳಿ ಗ್ರಾಮದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿನ ಖಾಲಿ ಇರುವ ಸಹ ಶಿಕ್ಷಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಜನವರಿ 21ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಇಂದಿರಾಗಾಂಧಿ ವಸತಿ ಶಾಲೆಯಲ್ಲಿನ ಖಾಲಿ ಇರುವ ವಿಜ್ಞಾನ (ಸಿಬಿಝೆಡ್) ವಿಷಯದ ಸಹ ಶಿಕ್ಷಕರ ಒಂದು ಹುದ್ದೆಗೆ ಇಂಗ್ಲಿಶ್ ಮಾಧ್ಯಮದಲ್ಲಿ ಬೋಧಿಸಲು ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಅರ್ಜಿಗಳನ್ನು ಸಲ್ಲಿಸುವವರು ಬಿಎಸ್‌ಸಿ, ಬಿಎಡ್ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಜನವರಿ 22ರಂದು ಬೆಳಗ್ಗೆ 10.30ಕ್ಕೆ ಮಾದರಿ ಬೋಧನೆಗೆ ಹಾಜರಾಗಬೇಕು.

ಅಭ್ಯರ್ಥಿಗಳನ್ನು ಮಾದರಿ ಬೋಧನೆಯೊಂದಿಗೆ ಮೆರಿಟ್ ಆಧಾರದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಳಾಸ; ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, ಕರ್ಕಿಹಳ್ಳಿ (ಹಾಲಿ: ಕುಣಿಕೇರಿ ರಸ್ತೆ, ಹೂವಿನಾಳ) ದೂರವಾಣಿ ಸಂಖ್ಯೆ 9663484685ಗೆ.












Click it and Unblock the Notifications