ಹಳ್ಳಿ ಕಡೆಗೆ ಹೊಂಟ್ರು ಯಡಿಯೂರಪ್ಪ
ಕೂಡಲಸಂಗಮ(ಬಾಗಲಕೋಟಿ),
ಮೇ. 24 : ಜೂನ್ ತಿಂಗಳಿನಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಳ್ಳಿಯ ಕಡೆಗೆ ನಡಿಗೆ ಆರಂಭಿಸಲು ನಿರ್ಧರಿಸಿದ್ದಾರೆ. ಸಾವಯುವ ಕೃಷಿಕರ ಮನೆಯಲ್ಲಿ ಉಳಿದು, ಸುತ್ತಮುತ್ತಲ ರೈತರನ್ನು ಸೇರಿಸಿ ಸಾವಯುವ ಕೃಷಿಯೆಡೆಗೆ ಅವರನ್ನು ಪ್ರೇರೇಪಿಸುತ್ತೇನೆ ಎಂದು ಅವರು ಹೇಳಿದರು. id="toptextpromo">ಸಾವಯುವ
ಕೃಷಿ ಮಿಷನ್ ಏರ್ಪಡಿಸಿದ್ದ ಸಾವಯುವ ಕೃಷಿಕರ ಮಹಾಸಮ್ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಈ ಭಾಗದಲ್ಲಿ ಪದವೀಧರ ಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಹೊಸ ಕಾರ್ಯಕ್ರಮ ಘೋಷಿಸಲು ಸಾಧ್ಯವಿಲ್ಲ ಎಂದರು. ಸಾವಯುವ ಕೃಷಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತರುವಲ್ಲಿ ಕರ್ನಾಟಕ ಮುಂದಿದೆ. ಈ ನಾಡಿನಲ್ಲಿನ ನೂರಕ್ಕೆ ಅರ್ಧಭಾಗ ರೈತರು ಸಾವಯುವ ಕೃಷಿಯಲ್ಲಿ ತೊಡಗುವಂತೆ ಜಾಗೃತಿ ಮೂಡಿಸುವ ಸಂಕಲ್ಪ ಮಾಡುವಲ್ಲಿ ಈ ಸಮಾವೇಶ ಪ್ರೇರಣೆ ನೀಡಲಿ ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಸಾವಯುವ
ಕೃಷಿಕರ ಆರೋಗ್ಯವನ್ನು ಕಾಪಾಡಲು ಬೇಕಾದ ಕಾರ್ಯಕ್ರಮ ರೂಪಿಸಲಾಗುವುದು. ಸಾವಯುವ ಕೃಷಿ ಮಾಡುವವರಿಗೆ ನಾಟಿ(ದೇಶೀ) ಬೀಜವನ್ನು ಒದಗಿಸುವ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು. ದೇಶೀ ಬೀಜಗಳ ಸಂರಕ್ಷಣೆ ಹಾಗೂ ಸಂಶೋಧನೆಗೆ ಅಗತ್ಯ ನೆರವು ನೀಡಲಾಗುವುದು. ಸಾವಯುವ ಕೃಷಿಕರ ನಿರೀಕ್ಷೆಯನ್ನು ಪೂರೈಸಲು ಸರಕಾರ ಬದ್ಧವಾಗಿದೆ ಎಂದು ಯಡಿಯೂರಪ್ಪ ವಿವರಿಸಿದರು.











Click it and Unblock the Notifications