ಚಾಮರಾಜನಗರದಲ್ಲಿ ವಾಟಾಳ್ ನಾಗರಾಜ್ ತೆಂಗಿನ ಮರ ಅಪ್ಪಿದ್ದೇಕೆ?

ಚಾಮರಾಜನಗರ ಜಿಲ್ಲೆಯಲ್ಲಿ ಬರದ ಬೇಗೆಗೆ ಒಣಗಿರುವ ತೆಂಗಿನ ಮರಗಳನ್ನು ಕಂಡ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವುಗಳನ್ನು ತಬ್ಬಿಕೊಂಡು ದುಃಖ ವ್ಯಕ್ತಪಡಿಸಿದ್ದಾರೆ. ಸರಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ

ಚಾಮರಾಜನಗರ, ಮೇ 1: ಸದಾ ಕನ್ನಡಪರ ಹೋರಾಟ ಮಾಡುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇದೀಗ ರೈತರ ಸಂಕಷ್ಟವನ್ನು ಹತ್ತಿರದಿಂದ ನೋಡಿ, ಅವರಿಗೆ ಸಾಂತ್ವನ ಹೇಳಲು ಮುಂದಾಗಿದ್ದಾರೆ. ಅಲ್ಲದೆ ರೈತಪರ ಹೋರಾಟಕ್ಕೂ ಮುಂದಾಗಿದ್ದಾರೆ.

ಚಾಮರಾಜನಗರ ವ್ಯಾಪ್ತಿಯಲ್ಲಿ ಬಿಸಿಲಿಗೆ ಸಿಕ್ಕಿ ಸಾವನ್ನಪ್ಪಿರುವ ತೆಂಗಿನ ತೋಟಗಳಿಗೆ ಭೇಟಿ ನೀಡಿ, ಒಣಗಿ ನಿಂತ ತೆಂಗಿನ ಮರಗಳನ್ನು ಅಪ್ಪಿಕೊಂಡ ಅವರು ಭಾವುಕರಾದರು. ಆರು ವರ್ಷ ನನ್ನನ್ನು ಸಾಕು, ನೂರು ವರ್ಷ ನಿನ್ನನ್ನು ಸಾಕುತ್ತೇನೆ ಎಂಬ ಗಾದೆಯನ್ನು ಇಂದು ಬರಗಾಲ ಹುಸಿ ಮಾಡುತ್ತಿದೆ. ಎಲ್ಲೆಡೆ ಸತ್ತ ಮರಗಳು ಕಂಡು ಬರುತ್ತಿದ್ದು, ರೈತರು ಕಣ್ಣೀರಲ್ಲಿ ನೀರು ತರಿಸುತ್ತಿದೆ ಎಂದರು.[ಇನ್ನಾದರೂ ಸತ್ಯರಾಜ್ ಬಾಯಿ ಭದ್ರವಾಗಿರಲಿ: ವಾಟಾಳ್ ನಾಗರಾಜ್]

Why Vatal Nagaraj hug cocount tree

ಚಾಮರಾಜನಗರದ ಅಮಚವಾಡಿ, ಹೊನ್ನಳ್ಳಿ ಸೇರಿದಂತೆ ಅನೇಕ ಕಡೆ ಜಮೀನಿನಲ್ಲಿ ನೀರಿಲ್ಲದೆ, ಒಣಗಿ ನಿಂತಿರುವ ಸಾವಿರಾರು ತೆಂಗಿನ ಮರಗಳನ್ನು ವೀಕ್ಷಿಸಿದರು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಚಾಮರಾಜನಗರ ಸೇರಿದಂತೆ ಜಿಲ್ಲೆಯಲ್ಲಿ ಸಾವಿರಾರು ತೆಂಗಿನ ಮರಗಳು ಒಣಗಿ ನಿಂತಿವೆ. ಇಷ್ಟೆಲ್ಲ ಆದರೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪರಿಸ್ಥಿತಿಗಳನ್ನು ಅವಲೋಕಿಸದೆ, ಅವರ ನೋವಿಗೆ ಸ್ಪಂದಿಸದೇ ಇರುವುದು ನೋವಿನ ಸಂಗತಿ ಎಂದರು.

ಇನ್ನು ಮೂವತ್ತು, ನಲವತ್ತು ವರ್ಷಗಳ ಕಾಲ ಫಸಲು ಕೊಡುವ ತೆಂಗಿನ ಮರಗಳು ಸಂಪೂರ್ಣ ನಾಶವಾಗಿವೆ. ಇದರಿಂದ ತೆಂಗಿನ ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದರು.[ವಾಟಾಳ್ ಸಂದರ್ಶನ, ನಮ್ಮ ವಿರೋಧ ಸತ್ಯರಾಜ್ ಗೆ ಮಾತ್ರ]

Why Vatal Nagaraj hug cocount tree

ಕೊತ್ತಲವಾಡಿ, ಎಣ್ಣೆಹೊಳೆ, ಅರಕಲವಾಡಿ, ಬಂಡಿಗೆರೆ, ದೊಡ್ಡಕೆರೆ, ಕೋಡಿಮೋಳೆ, ದೊಡ್ಡರಾಯಪೇಟೆ ಕೆರೆ ಹಾಗೂ ಚಿಕ್ಕಹೊಳೆ ಸೇರಿದಂತೆ ತಾಲೂಕಿನಲ್ಲಿರುವ ಎಲ್ಲಾ ಪ್ರಮುಖ ಕೆರೆಗಳಿಗೆ ನದಿ ಪಾತ್ರದಿಂದ ನೀರು ತುಂಬಿಸಬೇಕು, ರೈತರಿಗೆ ಬೆಳೆ ಪರಿಹಾರ ಸರಿಯಾದ ರೀತಿಯಲ್ಲಿ ರೈತರಿಗೆ ನೀಡಬೇಕು ಎಂದರು.

ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಮತ್ತು ನೀರು ಒದಗಿಸಬೇಕು, ಮಳೆಯಿಲ್ಲದೆ ಸಂಪೂರ್ಣ ನಾಶವಾಗಿರುವ ತೆಂಗಿನಮರಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಚಾಮರಾಜನಗರದಲ್ಲಿರುವ ಹಲವು ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯಲು ಮೇ 3ರಂದು ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಲಾಗುವುದು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+