• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಗೋಧಿ ಸಗಟು ಬೆಲೆ ರೂ.30ವರೆಗೆ ಏರಿಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 05: ದೇಶದಲ್ಲಿ ಗೋಧಿಯ ಬೆಲೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಇದು ಗೋಧಿ ಸಂಸ್ಕರಣಾ ಉದ್ಯಮ ಮೇಲೆ ಪರಿಣಾಮ ಬೀರಲಿದೆ. ಭಾರತದ ಪ್ರಮುಖ ಗ್ರಾಹಕ ಕೇಂದ್ರಗಳಲ್ಲಿ ಗೋಧಿಯ ಸಗಟು ಬೆಲೆ ಪ್ರತಿ ಕೇಜಿಗೆ 30 ರೂ.ಗೆ ಸಮೀಪಿಸಿದೆ.

ಸದ್ಯ ದೇಶದ ಸಾಕಷ್ಟು ಕಡೆಗಳಲ್ಲಿ ಗೋಧಿ ಸಗಟು ಬೆಲೆ ಕೇಜಿಗೆ ರೂ.27 ರಿಂದ 29.50 ರೂ. ವಹಿವಾಟು ನಡೆಸುತ್ತಿದೆ. ಇದು ಗೋಧಿಯ ಕನಿಷ್ಠ ಬೆಂಬಲ ಬೆಲೆ (ರೂ 20.15)ಯ ಶೇ. 30ರಿಂದ 40ರಷ್ಟು ಅಧಿಕ ಎನ್ನಲಾಗಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಗೋಧಿಯ ಸಗಟು ಬೆಲೆ ಕ್ರಮೇಣವಾಗಿ ಕೇಜಿಗೆ 23 ರೂ. ಇದ್ದದ್ದೂ ಇದೀಗ ಕೇಜಿಗೆ ರೂ.29ಕ್ಕೆ ಏರಿಕೆ ಆಗಿದೆ ಎಂದು ದೆಹಲಿ ಮೂಲದ ಗೋಧಿ ರಫ್ತುದಾರರೊಬ್ಬರು ತಿಳಿಸಿದ್ದಾರೆ.

ಪ್ರಸಕ್ತ ವರ್ಷ ಗೋಧಿ ಬಿತ್ತನೆಯಲ್ಲಿ ಶೇ. 11ರಷ್ಟು ಪ್ರಗತಿ ಕಂಡ ಭಾರತಪ್ರಸಕ್ತ ವರ್ಷ ಗೋಧಿ ಬಿತ್ತನೆಯಲ್ಲಿ ಶೇ. 11ರಷ್ಟು ಪ್ರಗತಿ ಕಂಡ ಭಾರತ

ಪ್ರಸ್ತಕ 2022-23ವರ್ಷದಲ್ಲಿ ಗೋಧಿ ಋತುವಿನ ಆರಂಭದಲ್ಲಿ ರಫ್ತುಗಳನ್ನು ಉತ್ತೇಜಿಸಿದ್ದ ಕೇಂದ್ರ ಸರ್ಕಾರ, ವಾತಾವರಣದಲ್ಲಿ ತಾಪಮಾನ ಏರಿಕೆ ಹಾಗೂ ಉತ್ಪಾದನೆಯ ಕಡಿಮೆಯಾದ ಹಿನ್ನೆಲೆಯಲ್ಲಿ ಗೋಧಿ ರಫ್ತಿನ ಮೇಲೆ ನಿಷೇಧ ಹೇರಿತು.

ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡದಿರಲು ಸರ್ಕಾರ ನಿರ್ಧರಿಸಿತು. ಸರ್ಕಾರದ ಮಧ್ಯ ಪ್ರವೇಶದಿಂದ ಗೋಧಿ ಬೆಲೆಯ ಹತೋಟಿ ಸಾಧ್ಯವಾಗಬಹುದು. ಇದರ ಹೊರತು ಸದ್ಯಕ್ಕೆ ಬೆಲೆಯಲ್ಲಿ ಯಾವ ಬದಲಾವಣೆ ನಿರೀಕ್ಷಿಸಲು ಆಗದು ಎಂದು ರೋಲರ್ ಫ್ಲೋರ್ ಮಿಲ್ಲರ್ಸ್ ಫೆಡರೇಶನ್ ಆಫ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ನವನೀತ್ ಚಿಟ್ಲಾಂಗಿಯಾ ತಿಳಿಸಿದ್ದಾರೆ.

ಭಾರತದಲ್ಲಿ ಇದುವರೆಗಿನ ಗೋಧಿ ಬಿತ್ತನೆಯಲ್ಲಿ ಶೇ.11ರಷ್ಟು ಪ್ರಗತಿ ಸಾಧಿಸಿದ್ದೇವೆ. ಆದರೆ ಬೆಳೆಗೆ ಹವಾಮಾನ, ತಾಪಮಾ ಪೂರಕವಾಗಿದ್ದರೆ ಮುಂದಿನ 2023ರಲ್ಲಿ ಮಾರ್ಚ್ ವೇಳಗೆ ಉತ್ತಮ ಫಸಲು ನಿರೀಕ್ಷಿಸಬಹುದಾಗಿದೆ.

Wheat KG Wholesale Price Nearby Till Rs.30 Rise In India

ಗೋಧಿ ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ಉತ್ಪಾದಕ ದೇಶ ಎನಿಸಿಕೊಂಡಿರುವ ಭಾರತ ಆಹಾರ ಧಾನ್ಯದ ವಿಚಾರದಲ್ಲಿ ಈ ವರ್ಷವು ನಿಶ್ಚಿಂತವಾಗಲಿದೆ. ನಿರೀಕ್ಷೆ ಫಸಲು ಬರಲಿದ್ದು, ಗೋಧಿ ರಫ್ತಿನ ಮೇಲಿನ ನಿರ್ಬಂಧ ನಿಷೇಧದಿಂದ ತೊಂದರೆ ಉಂಟಾಗಲಿದೆ ಎಂಬ ವಾದಕ್ಕೆ ಉತ್ತರ ನೀಡಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

English summary
Wheat KG wholesale price Nearby till Rs.30 rise in India, this price will be affected to wheat processing industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X