ಇಪ್ಪತ್ತೈದು ಪೈಸೆಗೆ ಸೊಪ್ಪು ಮಾರಿದ ವಾಟಾಳ್
ಬೆಂಗಳೂರು,
ಜ.27 : ತಮ್ಮ ವಿಶಿಷ್ಟ ರೀತಿಯ ಪ್ರತಿಭಟನೆಗೆ ಹೆಸರುವಾಸಿಯಾಗಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಮತ್ತು ಅವರ ಪಕ್ಷದ ಸದಸ್ಯರು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ನಗರದ ಕೆಂಪೇಗೌಡ ಬಸ್ ನಿಲ್ದಾಣದ ಸಮೀಪ ಬುಧವಾರ (ಜ.26) ಇಪ್ಪತ್ತೈದು ಪೈಸೆಗೆ ಸೊಪ್ಪಿನ ಕಂತೆ ಮಾರಾಟ ಮಾಡಿ ಪ್ರತಿಭಟನೆ ನಡೆಸಿದರು. id="toptextpromo">ಕೈಗಾರಿಕಾ
ಕ್ಷೇತ್ರದ ಅಭಿವೃದ್ಧಿಯ ನೆಪದಲ್ಲಿ ಸರಕಾರ ಬಡ ರೈತರ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿ ಆಹಾರ ಉತ್ಪಾದನೆ ಕುಂಠಿತಗೊಳ್ಳುತ್ತಿದೆ ಆಹಾರ ಪದಾರ್ಥಗಳು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ವಾಟಾಳ್ ನಾಗರಾಜ್ ದೂರಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬೆಲೆ
ನಿಯಂತ್ರಣ
ಅಗತ್ಯ:
ಕೃಷಿ
ಉತ್ಪಾದನೆ
ಕುಂಠಿತಗೊಂಡಿದ್ದರಿಂದ
ಆಹಾರ
ಪದಾರ್ಥಗಳ
ಬೆಲೆ
ಹೆಚ್ಚಾಗುತ್ತಿವೆ.
ಮತ್ತೊಂದೆಡೆ
ಪಡಿತರ
ವಸ್ತುಗಳು
ಫಲಾನುಭವಿಗಳಿಗೆ
ಸಿಗದೆ
ಕಾಳಸಂತೆಯಲ್ಲಿ
ಮಾರಾಟವಾಗುತ್ತಿವೆ.
ಕಾಳಸಂತೆಯಲ್ಲಿ
ಪಡಿತರ
ಮಾರಾಟ
ತಪ್ಪಿಸಬೇಕು.
ಭೂ
ಸ್ವಾಧೀನ
ಪ್ರಕ್ರಿಯೆ
ಕೈಬಿಟ್ಟು
ಕೃಷಿ
ಚಟುವಟಿಕೆಗಳಿಗೆ
ಆದ್ಯತೆ
ನೀಡಬೇಕು.
ಆಹಾರ
ಪದಾರ್ಥಗಳು
ಹಾಗೂ
ತೈಲೋತ್ಪನ್ನಗಳ
ಬೆಲೆ
ನಿಯಂತ್ರಣಕ್ಕೆ
ಕೇಂದ್ರ
ಸರ್ಕಾರ
ಪರಿಣಾಮಕಾರಿ
ಕ್ರಮ
ಕೈಗೊಳ್ಳಬೇಕು
ಎಂದು
ವಾಟಾಳ್
ನಾಗರಾಜ್
ಕೇಂದ್ರ
ಮತ್ತು
ರಾಜ್ಯ
ಸರಕಾರವನ್ನು
ಆಗ್ರಹಿಸಿದ್ದಾರೆ.
[ಬೆಲೆ
ಏರಿಕೆ]












Click it and Unblock the Notifications