Get Updates
Get notified of breaking news, exclusive insights, and must-see stories!

Arecanut Import: ಆಮದು ಮೇಲಿನ ಕನಿಷ್ಠ 100ರೂ, ಏರಿಕೆ, ಆಮದು ನಿಷೇದ ಅಸಾಧ್ಯ: ಆರಗ

ಸಹಕಾರಿ ಸಂಸ್ಥೆಗಳ ಮನವಿ ಮೇರೆಗೆ ಕೇಂದ್ರ ಸರ್ಕಾರ ಅಡಿಕೆ ಆಮದು ಮೇಲಿನ ಕನಿಷ್ಠ ದರ ಹೆಚ್ಚಿಸಿದೆ. ಈ ನಿರ್ಧಾರವನ್ನು ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಸ್ವಾಗ​ತಿ​ಸಿ​ದೆ.

ನವ​ದೆ​ಹ​ಲಿ, ಫೆಬ್ರವರಿ 16: ಸಹಕಾರಿ ಸಂಸ್ಥೆಗಳ ಮನವಿ ಮೇರೆಗೆ ಕೇಂದ್ರ ಸರ್ಕಾರ ಅಡಿಕೆ ಆಮದ ಮೇಲಿನ ಕನಿಷ್ಠ ದರ ಹೆಚ್ಚಿಸಿದೆ. ಈ ನಿರ್ಧಾರವನ್ನು ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಸ್ವಾಗ​ತಿ​ಸಿ​ದೆ.

ಕೇಂದ್ರ ಸರ್ಕಾರವು ಬಹುದಿನಗಳ ಬೇಡಿಕೆಯಾಗಿದ್ದ ಪ್ರತಿ ಕೆ.ಜಿ. ದರವನ್ನು ಹೆಚ್ಚಳ ಮಾಡಿದೆ. ಆಮದು ಮೇಲಿನ ಕನಿಷ್ಠ ದರ​ ಸದ್ಯ ಕೆ.ಜಿ.ಗೆ 100 ರೂಪಾಯಿ ಏರಿಕೆ ಮಾಡಿ ಸರ್ಕಾರ ಆದೇಶಿಸಿದೆ. ಇದರಿಂದ ಹಾಲಿ ಕೆ.ಜಿ. ಅಡಿಕೆಗೆ ರೂಪಾಯಿ 251 ಇದ್ದದ್ದು, ಇದೀಗ 351 ರೂಪಾಯಿಗೆ ಹೆಚ್ಚಳವಾಗಿದೆ.

ಈ ಆಮದು ದರ ಏರಿಕೆಯು ವಿದೇಶದಿಂದ ಭಾರತಕ್ಕೆ ಅಡಿಕೆ ಉತ್ಪಾದನಾ ವೆಚ್ಚ ಪರಿಗಣಿಸಿದೆ. ಕೆಲ ದಿನಗಳ ಹಿಂದಷ್ಟೇ ಪುತ್ತೂರಿನಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವರಾದ ಅಮಿತ್‌ ಶಾ ಕೃಷಿ ಯಂತ್ರೋಪಕರಣ ಮೇಳವನ್ನು ಉದ್ಘಾಟಿಸಿದ್ದರು. ಈ ವೇಳೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಜತೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್‌ ಕೊಡ್ಗಿ ಅವರು ಅಡಿಕೆ ಆಮದು ಕನಿಷ್ಠ ದರ ಏರಿಕೆಗೆ ಮನವಿ ಮಾಡಿದ್ದರು.

ಅಡಿಕೆ ಆಮದು ನಿಷೇಧ ಸಾಧ್ಯವಿಲ್ಲ: ಆರಗ

ಅಡಿಕೆ ಆಮದು ನಿಷೇಧ ಸಾಧ್ಯವಿಲ್ಲ: ಆರಗ

ಇನ್ನೂ ಅಡಿಕೆ ಆಮದು ವಿಚಾರವು ನಡೆಯುತ್ತಿರುವ ರಾಜ್ಯ ವಿಧಾನಮಂಡಲದಲ್ಲಿ ಪ್ರತಿಧ್ವನಿಸಿತು. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಭೂತಾನ್‌ ಸೇರಿದಂತೆ ವಿದೇಶಗಳಿಂದ ಬರುತ್ತಿರುವ ಅಡಿಕೆ ಆಮದಿನಿಂದ ಅಡಿಕೆ ಬೆಲೆ ಕುಸಿದು ಅಡಿಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅಡಿಕೆ ಆಮದು ನಿಷೇಧಿಸಬೇಕು. ಇಲ್ಲವೇ ಆಮದು ಅಡಿಕೆಗೆ ಕರ್ನಾಟಕದ ಮಾರುಕಟ್ಟೆಯಿಂದ ನಿರ್ಬಂಧ ವಿಧಿಸಿ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರು, ವಿದೇಶಗಳಿಂದ ಬರುತ್ತಿರುವ ಅಡಿಕೆ ಆಮದು ತಡೆ ಅಸಾಧ್ಯ. ಸೌಹಾರ್ದ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ನಡೆದಿದೆ. ಆದ್ದರಿಂದ ಆಮದನ್ನು ತಡೆಯಲು ಬರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

17 ಸಾವಿರ ಟನ್‌ ಅಡಿಕೆ ಆಮದು: ಕಿಡಿ

17 ಸಾವಿರ ಟನ್‌ ಅಡಿಕೆ ಆಮದು: ಕಿಡಿ

ಈ ವೇಳೆ ಉಭಯ ಪಕ್ಷಗಳ ನಾಯಕರ ನಡೆವೆ ವಿವಿಧ ಆರೋಪ ಪ್ರತ್ಯಾರೋಪಗಳು ನಡೆದವು. ಅಡಿಕೆಗೆ ಎಲೆಚುಕ್ಕೆ ರೋಗ ತಗುಲಿ ಮಲೆನಾಡು ಸೇರಿದಂತೆ ಕರ್ನಾಟಕದ ರೈತರು ಸಂಕಷ್ಟದಲ್ಲಿ ಇದ್ದಾರೆ. ರಾಜ್ಯ ಸರ್ಕಾರ ಈ ರೋಗವನ್ನು ನಿವಾರಿಸಿದ ರೈತರನ್ನು ಪಾರು ಮಾಡಿಲ್ಲ. ಬದಲಾಗಿ ರೈತರಿಗೆ ಸೂಕ್ತ ಪರಿಹಾರ ಸಹ ವಿತರಿಸಿಲ್ಲ. ಬೆಲೆ ಕುಸಿತದಿಂದ 08 ಮಂದಿ ರೈತರು ಆತ್ಮಹತ್ಯೆಗೀಡಾಗಿದ್ದಾರೆ. ಹೀಗಿದ್ದರು ಭೂತಾನ್‌ನಿಂದ 17 ಸಾವಿರ ಟನ್‌ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.

ಆರಗ ಜ್ಞಾನೇಂದ್ರಗೆ ಸಿದ್ದ ಪ್ರಶ್ನೆ

ಆರಗ ಜ್ಞಾನೇಂದ್ರಗೆ ಸಿದ್ದ ಪ್ರಶ್ನೆ

ಸಚಿವ ಆರಗ ಜ್ಞಾನೇಂದ್ರ ಅವರು, ಎರಡು ದೇಶಗಳ ಮಧ್ಯೆ ಮುಕ್ತ ವ್ಯಾಪಾರದ ಒಪ್ಪಂದ ಏರ್ಪಟ್ಟಿದೆ. ಅಡಿಕೆ ಆಮದು ನಿಷೇಧಿಸಲಾಗದು ಎಂದರು. ಇದನ್ನು ಆಕ್ಷೇಪಿಸಿದ ಸಿದ್ದರಾಮಯ್ಯನವರು, ಕೇಂದ್ರ ಅಡಿಕೆ ಆಮದು ನಿರ್ಧಾರ ಮಾಡಿದಾಗ ರಾಜ್ಯದಿಂದ ಅಡಿಕೆ ಬೆಳೆಗಾರರ ನಿಯೋಗ ಒಂದನ್ನು ಕೇಂದ್ರದ ಬಳಿ ಕರೆದೊಯ್ದದ್ದು ಯಾಕೆ? ಎಂದು ಪ್ರಶ್ನಿಸಿದರು. ಆಗ ನೀವು ಆಮದು ನಿಷೇಧಕ್ಕೆ ಆಗ್ರಹಿಸಲಿಲ್ಲವೇ ಎಂದರು.

ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ: ಆರಗ

ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ: ಆರಗ

ಆಮದು ನಿಷೇಧಕ್ಕೆ ಒತ್ತಾಯಿಸಿಲ್ಲ. ಕೆಲ ಮಾನದಂಡ ನಿಗದಿಗೊಳಿಸಲು ಕೇಳಿದ್ದೇನೆ. ನಮ್ಮಲ್ಲಿ ಅಡಿಕೆ ಉತ್ಪಾದನೆಗೆ ತಗಲುವ ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳಬಾರದು ಎಂದು ತಿಳಿಸಿದರು. ಜೊತೆಗೆ ನೀವು ಹೇಳಿದಂತೆ 08 ರೈತರು ಬೆಲೆ ಕುಸಿತದಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬೇರೆ ಬೇರೆ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಯಾವ ಕಾರಣಕ್ಕೆ ಅಡಿಕೆ ಬೆಳೆಗಾರರು ಆತ್ಮೆಹತ್ಯೆ ಮಾಡಿಕೊಂಡರೆಂಬುದು ನನಗೆ ತಿಳಿದಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+