• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿ ಕ್ವಿಂಟಾಲ್‌ ಭತ್ತದ ಕನಿಷ್ಠ ಬೆಂಬಲ ಬೆಲೆ 72 ರೂ. ಏರಿಕೆ

|
Google Oneindia Kannada News

ನವದೆಹಲಿ, ಜೂನ್ 09: ಭತ್ತದ ಪ್ರತಿ ಕ್ವಿಂಟಾಲ್ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರವು 1940ರೂ.ಗೆ ಏರಿಕೆ ಮಾಡಿದೆ. 2021-22ರ ಬೆಳೆ ವರ್ಷಕ್ಕೆ ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 72ರೂ. ಹೆಚ್ಚಳ ಮಾಡಲಾಗಿದೆ.

ಜೋಳದ ಕನಿಷ್ಠ ಬೆಂಬಲ ಬೆಲೆ ಕಳೆದ ವರ್ಷ ಕ್ವಿಂಟಾಲ್‌ಗೆ 2,150 ರೂ.ಗಳಿಂದ ಪ್ರಸಕ್ತ ವರ್ಷದಲ್ಲಿ ಕ್ವಿಂಟಾಲ್‌ಗೆ 2,250 ರೂ.ಗೆ ಹೆಚ್ಚಿಸಲಾಗಿದೆ ಎಂದು ತೋಮರ್ ಹೇಳಿದ್ದಾರೆ.

45 ಲಕ್ಷ ಟನ್ ಭತ್ತ ಖರೀದಿಸುವಂತೆ ಕೇಂದ್ರಕ್ಕೆ ಮನವಿ: ಗೋಪಾಲಯ್ಯ45 ಲಕ್ಷ ಟನ್ ಭತ್ತ ಖರೀದಿಸುವಂತೆ ಕೇಂದ್ರಕ್ಕೆ ಮನವಿ: ಗೋಪಾಲಯ್ಯ

ರೈತರಿಗೆ ಸಹಾಯವಾಗಲೆಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಈ ನಿರ್ಧಾರಕೈಗೊಂಡಿದೆ. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದ್ದು ಭವಿಷ್ಯದಲ್ಲಿಯೂ ಇದು ಮುಂದುವರಿಯುತ್ತದೆ ಎಂದು ತಿಳಿಸಿದರು.

2021-22 ಬೆಳೆ ವರ್ಷಕ್ಕೆ(ಜುಲೈ-ಜೂನ್) ಭತ್ತದ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 1,940 ರೂ.ಗೆ ಹೆಚ್ಚಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಹಿಂದಿನ ವರ್ಷದ ಅವಧಿಯಲ್ಲಿ ಪ್ರತಿ ಕ್ವಿಂಟಲ್‌ಗೆ 1,868 ರೂ. ಇತ್ತು.

ಭತ್ತವು ಬೇಸಿಗೆಯ ಪ್ರಮುಖ ಬೆಳೆಯಾಗಿದೆ, ಹಾಗೆಯೇ ಇದರ ಬಿತ್ತನೆ ನೈರುತ್ಯ ಮುಂಗಾರು ಆರಂಭದಿಂದ ಪ್ರಾರಂಭವಾಗುತ್ತದೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ನಡುವೆ ಸಾಮಾನ್ಯ ಮುಂಗಾರನ್ನು ಹವಾಮಾನ ಇಲಾಖೆ ನಿರೀಕ್ಷಿಸಿದೆ.

2021-22ರ ಮಾರುಕಟ್ಟೆ ಋತುವಿನಲ್ಲಿ ಮುಂಗಾರು ಬೆಳೆಗಳ ಎಂ.ಎಸ್‌.ಪಿ. ಹೆಚ್ಚಳವು, 2018-19ರ ಕೇಂದ್ರ ಬಜೆಟ್ ಪ್ರಕಟಣೆಗೆ ಅನುಗುಣವಾಗಿ ಅಖಿಲ ಭಾರತ ಮಟ್ಟದ ಸರಾಸರಿ ಉತ್ಪಾದನಾ ವೆಚ್ಚದ (ಸಿಓಪಿ) ಕನಿಷ್ಠ 1.5 ಪಟ್ಟು ಹೆಚ್ಚಾಗಿದ್ದು, ರೈತರಿಗೆ ಸಮಂಜಸವಾದ ನ್ಯಾಯಯುತ ಸಂಭಾವನೆ ನೀಡುವ ಗುರಿ ಹೊಂದಿದೆ.

ರೈತರಿಗೆ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಿನ ಆದಾಯವು ಬಜ್ರಾ (ಶೇ.85) ಮತ್ತು ನಂತರ ಉದ್ದು (ಶೇ.65) ಮತ್ತು ತೊಗರಿ (ಶೇ.62)ಗೆ ಸಂಬಂಧಿಸಿದಂತೆ ಹೆಚ್ಚು ಎಂದು ಅಂದಾಜಿಸಲಾಗಿದೆ. ಉಳಿದ ಬೆಳೆಗಳಿಗೆ, ರೈತರು ಮಾಡುವ ಉತ್ಪಾದನಾ ವೆಚ್ಚದ ಮೇಲೆ ಕನಿಷ್ಠ ಶೇ. 50ರಷ್ಟು ಆದಾಯ ಬರುತ್ತದೆ ಎಂದು ಅಂದಾಜಿಸಲಾಗಿದೆ.

ಸೂಕ್ತವಾದ ಬೇಡಿಕೆ - ಪೂರೈಕೆಯನ್ನು ಸಮತೋಲಿತವಾಗಿಡಲು ಈ ಕೆಳಕಂಡ ಬೆಳೆಗಳಿಗೆ ಸಂಬಂಧಿಸಿದಂತೆ ರೈತರು ದೊಡ್ಡ ಪ್ರದೇಶಕ್ಕೆ ಬದಲಾಗುವಂತೆ ಉತ್ತೇಜಿಸಲು ಎಣ್ಣೆ ಕಾಳುಗಳು, ಬೇಳೆಧಾನ್ಯಗಳು ಮತ್ತು ಒರಟು ಸಿರಿ ಧಾನ್ಯಗಳ ವಿಚಾರದಲ್ಲಿ ಎಂ.ಎಸ್.ಪಿಯನ್ನು ಮರು ಹೊಂದಿಕೆ ಮಾಡಲು ಕಳೆದ ಕೆಲವು ವರ್ಷಗಳಿಂದ ಸಂಘಟಿತ ಪ್ರಯತ್ನ ಮಾಡಲಾಗುತ್ತಿದೆ.

ಅಂತರ್ಜಲ ಮಟ್ಟಕ್ಕೆ ದೀರ್ಘಾವಧಿಯ ಪ್ರತಿಕೂಲ ಪರಿಣಾಮವಾಗದಂತೆ ಭತ್ತ-ಗೋಧಿಯನ್ನು ಬೆಳೆಯಲು ಸಾಧ್ಯವಾಗದ ಪ್ರದೇಶಗಳಲ್ಲಿ ಪೌಷ್ಟಿಕವಾಗಿ ಶ್ರೀಮಂತವಾದ ಪೌಷ್ಟಿಕಯುಕ್ತ ಸಿರಿಧಾನ್ಯಗಳ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ.

ಜೊತೆಗೆ, ಸರ್ಕಾರವು 2018ರಲ್ಲಿ ಘೋಷಿಸಿದ ಅಂಬ್ರೆಲಾ ಯೋಜನೆಯಾದ "ಪ್ರಧಾನಮಂತ್ರಿ ಅನ್ನದಾತಾ ಆಯ್ ಸಂರಕ್ಷಣ್ ಅಭಿಯಾನ" (ಪಿಎಂ-ಎ.ಎ.ಎಸ್.ಎಚ್.ಎ) ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಪ್ರತಿಫಲ ಪಡೆಯುವಲ್ಲಿ ಸಹಾಯ ಮಾಡುತ್ತದೆ.

ಈ ಅಂಬ್ರೆಲಾ ಯೋಜನೆ ಮೂರು ಉಪ-ಯೋಜನೆಗಳನ್ನು ಒಳಗೊಂಡಿದೆ, ಅಂದರೆ ಬೆಲೆ ಬೆಂಬಲ ಯೋಜನೆ (ಪಿ.ಎಸ್.ಎಸ್.) , ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್) ಮತ್ತು ಖಾಸಗಿ ಖರೀದಿ ಮತ್ತು ದಾಸ್ತಾನು ಯೋಜನೆ (ಪಿಪಿಎಸ್.ಎಸ್) ಪ್ರಾಯೋಗಿಕ ಆಧಾರದ ಮೇಲೆ ರೂಪಿಸಲಾಗಿದೆ.

English summary
The government on Wednesday raised the minimum support price (MSP) of paddy marginally by Rs 72 per quintal to Rs 1,940 per quintal for the 2021-22 crop year, while the rates of other kharif crops were also hiked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion