ಕುಂದಗೋಳ: ಲೀಟರ್‌ ಪೆಟ್ರೋಲ್‌ಗಿಂತಲೂ ದುಬಾರಿಯಾಯ್ತು ಕೆ.ಜಿ. ಟೊಮ್ಯಾಟೋ ಬೆಲೆ, ಮಾರುಕಟ್ಟೆಯತ್ತ ಮುಖ ಮಾಡದ ಗ್ರಾಹಕರು

ಕುಂದಗೋಳ, ಜುಲೈ, 06: ಮಾರುಕಟ್ಟೆಯಲ್ಲಿ ಏಲ್ಲಿ ನೋಡಿದರಲ್ಲಿ ಈಗ ಟೊಮೆಟೋ ಸುಂದರಿಯದ್ದೇ ಮಾತು. ಅಬ್ಬಬ್ಬಾ.! ಅವಳ ಬೆಲೆಯಂತೂ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸದ್ಯ ಜಿಲ್ಲೆಯ ರೈತರು ಮಾರುಕಟ್ಟೆಯಲ್ಲಿ ಇಷ್ಟು ಬೇಡಿಕೆ ಇರುವಾಗ ನ್ಯಾವ್ಯಾಕೆ ಈ ಬೆಳೆಯನ್ನು ಬೆಳೆಯಲಿಲ್ಲ ಎಂದು ಮರುಗುತ್ತಿದ್ದಾರೆ.

ಟೊಮ್ಯಾಟೋ ಬೆಲೆ ಇದೀಗ ಕೆ.ಜಿ.ಗೆ 120 -140ರೂಪಾಯಿವರೆಗೆ ನಿಗದಿಯಾಗಿದ್ದು, ಪೆಟ್ರೋಲ್ ಬೆಲೆಗಿಂತ ಈ ಟೊಮ್ಯಾಟೋ ಬೆಲೆಯೇ ಜಾಸ್ತಿಯಾಗಿದೆ. ಬೆಲೆ ಹೆಚ್ಚಳ ಆದ್ದರಿಂದ ಕುಂದಗೋಳದ ಸಂತೆಯಲ್ಲಿ ಗ್ರಾಹಕರು ಅರ್ಧ ಕೆ.ಜಿ., ಕಾಲು ಕೆ.ಜಿ., ಇನ್ನೂ ಕೆಲವರಂತೂ ಟೊಮೆಟೊ ಬೆಡಪ್ಪಾ ಎಂದು ಹಣಸೆ ಹಣ್ಣನ್ನು ಖರೀದಿಸುವ ದೃಶ್ಯಗಳು ಕಂಡು ಬಂದವು.

Tomato price increased in Kundgol

ಇನ್ನೂ ಕೆಂಪು ಸುಂದರಿಯಷ್ಟೇ ಅಲ್ಲ.. ಅವಳ ಜೊತೆ ಆಕೆಯ ಸಹಪಾಠಿಗಳಾದ ಹಿರೇಕಾಯಿ, ಬೆಂಡೇಕಾಯಿ, ಬದನೆಕಾಯಿ, ಸೌತೆಕಾಯಿ, ಚವಳೆಕಾಯಿ, ಬಿನ್ಸ್, ಬಿಟರೂಟ್, ಡೊಣ್ಣಕಾಯಿ, ಸೇರಿದಂತೆ ಆಲೂಗಡ್ಡೆ, ಹಸಿ ಮೆಣಸಿನಕಾಯಿ ದರಗಳು ಕೂಡ ಕೆ.ಜಿ.ಗೆ 50ರ ಗಡಿ ಮುಟ್ಟುವಂತಿವೆ.

ಆದ್ದರಿಂದ ಕುಂದಗೋಳದ ಸಂತೆಗೆ ಬಂದವರು ತರಕಾರಿ ಖರೀದಿಗೆ ಹಿಂದೇಟು ಹಾಕಿದ್ದರಿಂದ ಕೆಲ ವ್ಯಾಪಾರಿಗಳು ಖಾಲಿ ಖಾಲಿ ಕುಳಿತಂತಹ ನೋಟಗಳು ಕೂಡ ಕಂಡುಬಂದವು.

ಬರೀ ಕುದಗೊಳದಲ್ಲಲ್ಲದೆ ರಾಜ್ಯದ ವಿವಿಧ ನಗರಗಳಲ್ಲೂ ಕೂಡ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಮಾರ್ಕೆಟ್‌ ಇಲ್ಲ ತರಕಾರಿ ಅಂಗಡಿಗೆ ಹೋಗಿ ಟೊಮೆಟೊ ದರ ಕೇಳಿ ಗ್ರಾಹಕರು ಶಾಕ್‌ ಆಗುತ್ತಿದ್ದಾರೆ. ಕೆ.ಜಿ. ಟೊಮ್ಯಾಟೊ 150 ರೂಪಾಯಿಗೆ ಬೆಂಗಳೂರಿನ ಸೂಪರ್‌ ಮಾರ್ಕೆಟ್‌ಗಳಲ್ಲಿ ಮಾರಾಟ ಆಗುತ್ತಿದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.

ಕಾಲು ಕೆ.ಜಿ. ಟೊಮ್ಯಾಟೋ 40-50 ರೂಪಾಯಿ, ಅರ್ಧ ಕೆ.ಜಿ.ಗೆ 75-80 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಮಾರುಕಟ್ಟೆಗಳಲ್ಲಿ 120- 130 ರೂಪಾಯಿ, ತರಕಾರಿ ಅಂಗಡಿಯಲ್ಲಿ 130 -140 ರೂಪಾಯಿ ಬೆಲೆ ನಿಗದಿ ಮಾಡಿದ್ದಾರೆ ಎಂದು ತಿಳಿದ ಗ್ರಾಹಕರು ಶಾಕ್‌ ಆಗಿದ್ದಾರೆ. ಆದರೆ ಗ್ರಾಹಕರಿಗೆ ಟೊಮ್ಯಾಟೋ ಬೆಲೆಯು ವಿದ್ಯುತ್‌ ಬಿಲ್‌ಗಿಂತ ಹೆಚ್ಚಿನ ಶಾಕ್‌ ಹೊಡೆಸಿದೆ ಎನ್ನಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಟೊಮ್ಯಾಟೋ ಬಾಕ್ಸ್ 3000 - 4000 ರೂ.,ಗೆ ಮಾರಾಟ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+