ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತಿ ಬೇಸಾಯ; ಕಾಯಿ ಕೊರಕದ ಕೀಟ ನಿರ್ವಹಣೆಗೆ ಸಲಹೆಗಳು

|
Google Oneindia Kannada News

ಕಲಬುರಗಿ, ಮೇ 27 : ಈ ಬಾರಿಯ ಮುಂಗಾರು ಹಂಗಾಮಿಗೆ ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕದ ಕೀಟ ಬಾಧೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಎಚ್ಚರಿಕೆ ನೀಡಿದೆ. ಆದ್ದರಿಂದ, ರೈತರು ತಾಂತ್ರಿಕ ಸಲಹೆಗಳನ್ನು ಅನುಸರಿಸಬೇಕೆಂದು ಮನವಿ ಮಾಡಲಾಗಿದೆ.

Recommended Video

ಕುರಿ ಕಳೆದುಕೊಂಡ ಕುಟುಂಬಕ್ಕೆ 50 ಸಾವಿರ ಕೊಟ್ಟ ಕಾಂಗ್ರೆಸ್ ನಾಯಕ | Chitradurga | Oneindia Kannada

ಜೇವರ್ಗಿ ಸಹಾಯಕ ಕೃಷಿ ನಿರ್ದೇಶಕರಾದ ಸುನೀಲ ಕುಮಾರ ಜವಳಗಿ ರೈತರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ರೈತರು ತಮ್ಮ ಹೊಲದಲ್ಲಿ ಹತ್ತಿ ಗಿಡಗಳು ಇರದಂತೆ ನೋಡಿಕೊಳ್ಳುವ ಮೂಲಕ ಈ ಗುಲಾಬಿ ಕೀಟದ ಹಾವಳಿ ಬಹಳಷ್ಟು ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ದೆಹಲಿಗೂ ಪಪ್ಪಾಯ ಕಳಿಸಿ ಮಾದರಿಯಾದ ಕೊಪ್ಪಳದ ರೈತ ದೆಹಲಿಗೂ ಪಪ್ಪಾಯ ಕಳಿಸಿ ಮಾದರಿಯಾದ ಕೊಪ್ಪಳದ ರೈತ

ಕೀಟಬಾಧೆ ಅತಿಯಾಗಿ ಭಾದಿಸುವ ಪ್ರದೇಶಗಳಲ್ಲಿ ಬೆಳೆ ಪರಿವರ್ತನೆ ಮಾಡುವುದು ಸೂಕ್ತ. ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡುವುದರಿಂದ ಕೋಶಗಳನ್ನು ಮತ್ತು ಸೂಪ್ತಾವಸ್ಥೆಯಲ್ಲಿರುವ ಮರಿಹುಳುಗಳನ್ನು ಹೊರ ಹಾಕುವುದರಿಂದ ಮರಿ ಹುಳುಗಳು ಬಿಸಿಲಿನ ತಾಪಕ್ಕೆ ಸಾಯುತ್ತವೆ ಎಂದು ತಿಳಿಸಿದ್ದಾರೆ.

ವಾಟ್ಸಪ್, ಫೇಸ್ ಬುಕ್ ಮೂಲಕ ಮಾವು ಮಾರಿ ಮಾದರಿಯಾದ ರೈತ! ವಾಟ್ಸಪ್, ಫೇಸ್ ಬುಕ್ ಮೂಲಕ ಮಾವು ಮಾರಿ ಮಾದರಿಯಾದ ರೈತ!

Tips For The Farmers About Cotton Cultivation

ಬಿತ್ತನೆ ಸಮಯದಲ್ಲಿ ಬಿ. ಟಿ. ರಹಿತ ಹತ್ತಿಯ ಬೀಜವನ್ನು ಹೊಲದ ಬದುವಿನ ಸುತ್ತಲೂ 4-5 ಸಾಲುಗಳಲ್ಲಿ ಬಿತ್ತಬೇಕು. ಇದರಿಂದ ನಿರೋಧಕತೆ ಬೆಳೆಸಿಕೊಂಡು ಕೀಟಬಾಧೆಯನ್ನು ತಡೆಗಟ್ಟಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.

ರೈತ - ಕೂಲಿಕಾರರ ಮೇಲೆ ಸರ್ಕಾರದ ದಾಳಿ: ಸಿಪಿಐಎಂ ಖಂಡನೆ ರೈತ - ಕೂಲಿಕಾರರ ಮೇಲೆ ಸರ್ಕಾರದ ದಾಳಿ: ಸಿಪಿಐಎಂ ಖಂಡನೆ

ಹತ್ತಿ ಬೆಳೆಯನ್ನು ಬೇಗನೆ ಬಿತ್ತನೆ ಮಾಡುವುದರಿಂದ ಗುಲಾಬಿ ಕಾಯಿ ಕೊರಕದ ಕೀಟ ಬಾಧೆ ಜಾಸ್ತಿಯಾಗುತ್ತಿದ್ದು, ರೈತರು ಸೂಕ್ತ ಸಮಯದಲ್ಲಿ ಬಿತ್ತನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

English summary
Tips for the farmers about cotton cultivation ahead of the monsoon season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X