ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ವಿದೇಶಕ್ಕೆ ರಫ್ತಾಗುವ ಸಕ್ಕರೆ ಪ್ರಮಾಣ ಶೇ.57ಕ್ಕೆ ಏರಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 06: ಭಾರತದಿಂದ ಹೊರ ದೇಶಗಳಿಗೆ 109.8 ಲಕ್ಷ ಟನ್‌ಗಳಷ್ಟು ಸಕ್ಕರೆ ರಫ್ತಾಗುವ ಮೂಲಕ ಸೆಪ್ಟೆಂಬರ್‌ಗೆ ಅಂತ್ಯಗೊಂಡ 2021-22ರ ಮಾರುಕಟ್ಟೆ ವರ್ಷದಲ್ಲಿ ಶೇ.57ಕ್ಕೆ ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸಕ್ಕರೆ ರಫ್ತು ಶೇ. 57ರಷ್ಟು ಏರಿಕೆ ಆಗದ್ದರ ಪರಿಣಾಮವಾಗಿ ದೇಶಕ್ಕೆ ಸುಮಾರು 40,000 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಹರಿದು ಬಂದಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ. ಕಳೆದ 2021-22ರ ಸಾಲಿನ ಅಂತ್ಯಕ್ಕೆ (ಅಕ್ಟೋಬರ್ -ಸೆಪ್ಟೆಂಬರ್) ರೈತರಿಗೆ ಕಬ್ಬಿನ ಬಾಕಿ ಕೇವಲ 6,000 ಕೋಟಿ ರೂ.ನಷ್ಟಿತ್ತು ಎನ್ನಲಾಗಿದೆ. ಆಹಾರ ಸಚಿವಾಲಯ ಭಾರತ ದೇಶ ಸಕ್ಕರೆಯ ವಿಶ್ವದ ಅತಿದೊಡ್ಡ ಉತ್ಪಾದಕ ಮತ್ತು ಗ್ರಾಹಕನಾಗಿ ಹೊರಹೊಮ್ಮಿದೆ. ವಿಶ್ವದಲ್ಲೇ ಭಾರತ 2 ನೇ ಅತಿದೊಡ್ಡ ಸಕ್ಕರೆ ರಫ್ತುದಾರನಾಗಿದೆ ಎಂದು ತಿಳಿಸಿದೆ.

ಭಾರತದಲ್ಲಿ ಕಳೆದ 2021-22ರ ಅವಧಿಯಲ್ಲಿ 5, 000 ಲಕ್ಷ ಟನ್‌ಗಳಿಗಿಂತಲೂ ಅಧಿಕ ಕಬ್ಬು ಉತ್ಪಾದಿಸಲಾಗಿದೆ. ಅದರಲ್ಲಿ 3,574 ಲಕ್ಷ ಟನ್‌ಗಳನ್ನು ಸಕ್ಕರೆ ಕಾರ್ಖಾನೆಗಳು ಪುಡಿಮಾಡಿ ಸುಮಾರು 394 ಲಕ್ಷ ಟನ್ ಸಕ್ಕರೆ (ಸುಕ್ರೋಸ್) ಉತ್ಪಾದಿಸಿವೆ. ಈ ಪೈಕಿ 35 ಲಕ್ಷ ಟನ್ ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ತಿರುಗಿಸಲಾಗಿದ್ದು, 359 ಲಕ್ಷ ಟನ್ ಸಕ್ಕರೆಯನ್ನು ಸಕ್ಕರೆ ಕಾರ್ಖಾನೆಗಳು ಉತ್ಪಾದಿಸಿವೆ.

109.8 ಲಕ್ಷ ಟನ್‌ಗಳ ಅತ್ಯಧಿಕ ರಫ್ತು

109.8 ಲಕ್ಷ ಟನ್‌ಗಳ ಅತ್ಯಧಿಕ ರಫ್ತು

ಕಬ್ಬಿನ ಉತ್ಪಾದನೆ, ಸಕ್ಕರೆ ಉತ್ಪಾದನೆ, ಸಕ್ಕರೆ ರಫ್ತು, ಕಬ್ಬು ಸಂಗ್ರಹಣೆ, ಕಬ್ಬಿನ ಬಿಲ್ ಬಾಕಿ ಪಾವತಿ ಮತ್ತು ಎಥೆನಾಲ್ ಉತ್ಪಾದನೆಯ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಭಾರತವು ಯಾವುದೇ ಆರ್ಥಿಕತೆ ಇಲ್ಲದೆ ಸುಮಾರು 109.8 ಲಕ್ಷ ಟನ್‌ಗಳ ಅತ್ಯಧಿಕ ರಫ್ತು ಸಾಧಿಸಿದೆ. ಕೇಂದ್ರವು ಮೇ ತಿಂಗಳಲ್ಲಿ 100 ಲಕ್ಷ ಟನ್ ಸಕ್ಕರೆ ರಫ್ತಿಗೆ ನಂತರ 12 ಲಕ್ಷ ಟನ್‌ಗಳಿಗೆ ಮತ್ತೆ ಅನುಮತಿ ನೀಡಿತು.ಇದರಿಂದಾಗಿ 2021-22ರಲ್ಲಿ 112 ಲಕ್ಷ ಟನ್‌ ಮಾತ್ರ ರಫ್ತಾಯಿತು.

ಮಳೆಗೆ ಬೆಳೆ ಹಾನಿ: ಹೈನುಗಾರಿಕೆ ಮೇಲೆ ಮೇವಿನ ಬೆಲೆ ಏರಿಕೆ ಪರಿಣಾಮಮಳೆಗೆ ಬೆಳೆ ಹಾನಿ: ಹೈನುಗಾರಿಕೆ ಮೇಲೆ ಮೇವಿನ ಬೆಲೆ ಏರಿಕೆ ಪರಿಣಾಮ

ಎಲ್ಲ ರಫ್ತುಗಳಿಂದ 40,000 ಕೋಟಿ ಹಣ

ಎಲ್ಲ ರಫ್ತುಗಳಿಂದ 40,000 ಕೋಟಿ ಹಣ

ಈ ಹಿಂದಿನ ವರ್ಷಗಳ ರಫ್ತುಗಳ ಪ್ರಮಾಣ ನೋಡುವುದಾದರೆ ಭಾರತವು 2020-21ರಲ್ಲಿ 70 ಲಕ್ಷ ಟನ್‌, 2019-20 ರಲ್ಲಿ 59 ಲಕ್ಷ ಟನ್‌ ಹಾಗೂ 2018-19 ರಲ್ಲಿ 38 ಲಕ್ಷ ಟನ್‌ಗಳಷ್ಟು ಸಕ್ಕರೆಯನ್ನು ರಫ್ತು ಮಾಡಿತ್ತು. ಇದು ಅಂತಾರಾಷ್ಟ್ರೀಯ ಬೆಲೆಗಳು ಮತ್ತು ಭಾರತೀಯ ಸರ್ಕಾರದ ನೀತಿಯು ಭಾರತೀಯ ಸಕ್ಕರೆ ಉದ್ಯಮದ ಸಾಧನೆಗೆ ಕಾರಣವಾಯಿತು. ಈ ಎಲ್ಲ ರಫ್ತುಗಳಿಂದ ಭಾರತಕ್ಕೆ ಒಟ್ಟು 40,000 ಕೋಟಿ ರೂ. ವಿದೇಶಿ ಕರೆನ್ಸಿ ಬಂದಿದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

ಸಕ್ಕರೆ ಕಾರ್ಖಾನೆಗಳು 2021-22ರಲ್ಲಿ 1.18 ಲಕ್ಷ ಕೋಟಿ ರೂ. ಗೂ ಹೆಚ್ಚು ಮೌಲ್ಯದ ಕಬ್ಬನ್ನು ಸಂಗ್ರಹಿಸಿವೆ. ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಇಲ್ಲದೆ 1.12 ಲಕ್ಷ ಕೋಟಿ ರೂ. ಗಳಿಕೆ ಆಗಿದೆ. ಸಕ್ಕರೆ ಹಂಗಾಮಿನ ಅಂತ್ಯದಲ್ಲಿ ಕಬ್ಬಿನ ಬಿಲ್ ಬಾಕಿಯು 6,000 ಕೋಟಿ ರೂ.ಗಿಂತ ಕಡಿಮೆ ಇದೆ. ಈಗಾಗಲೇ 95 ರಷ್ಟು ಕಬ್ಬಿನ ಬಾಕಿ ಪಾವತಿಸಲಾಗಿದೆ.

ಎಥೆನಾಲ್ ಉತ್ಪಾದನೆಗೆ ಒತ್ತು

ಎಥೆನಾಲ್ ಉತ್ಪಾದನೆಗೆ ಒತ್ತು

ಇನ್ನೂ ಸಕ್ಕರೆ ಕಾರ್ಖಾನೆಗಳನ್ನು ಎಥೆನಾಲ್‌ ಉತ್ಪಾದನೆಯತ್ತ ತಿರುಗಿಸಲು ಮತ್ತು ಹೆಚ್ಚುವರಿ ಸಕ್ಕರೆಯನ್ನು ರಫ್ತು ಮಾಡಲು ಸರ್ಕಾರವು ಸಕ್ಕರೆ ಕಾರ್ಖಾನೆಗಳಿಗೆ ಬೆಂಬಲ ನೀಡುತ್ತದೆ. ಇದರಿಂದಾಗಿ ಕಾರ್ಖಾನೆಗಳು ರೈತರಿಗೆ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸಬಹುದು. ಈ ಹಿಂದಿನ 5 ವರ್ಷಗಳಲ್ಲಿ ಜೈವಿಕ ಇಂಧನ ಕ್ಷೇತ್ರವಾಗಿ ಎಥೆನಾಲ್ ಬೆಳವಣಿಗೆಯು ಸಕ್ಕರೆ ಉದ್ಯಮಕ್ಕೆ ಬೆಂಬಲ ನೀಡಿದೆ. ಸಕ್ಕರೆಯ ಬಳಕೆಯಿಂದ ಎಥೆನಾಲ್‌ ಉತ್ಪಾದನೆ ಮತ್ತು ಉತ್ತಮ ಆರ್ಥಿಕ ಸ್ಥಿತಿ ತಲುಪಲು ಸಾಧ್ಯವಾಗಿದೆ.

ಎಥೆನಾಲ್ ಮಾರಾಟದಿಂದ 18,000 ಕೋಟಿ ಆದಾಯ

ಎಥೆನಾಲ್ ಮಾರಾಟದಿಂದ 18,000 ಕೋಟಿ ಆದಾಯ

2021-22ರ ಅವಧಿಯಲ್ಲಿ ಎಥೆನಾಲ್ ಮಾರಾಟದಿಂದ ಸುಮಾರು 18,000 ಕೋಟಿ ರೂ.ಆದಾಯ ಸಂಗ್ರಹವಾಗಿದೆ. ಇದು ರೈತರ ಕಬ್ಬಿನ ಬಾಕಿಯನ್ನು ಮುಂಚಿತವಾಗಿ ತೆರವುಗೊಳಿಸಲು ಸಹಕಾರಿಯಾಗಿದೆ. ಅಲ್ಲದೇ ಪ್ರಸಕ್ತ (2022-2023) ಋತುವಿನಲ್ಲಿ ಸಕ್ಕರೆಯಿಂದ ಎಥನಾಲ್ ಉತ್ಪಾದಿಸುವ ಪ್ರಮಾಣವನ್ನು 35 ಲಕ್ಷ ಟನ್‌ಗಳಿಂದ 50 ಲಕ್ಷ ಟನ್‌ಗೆ ಹೆಚ್ಚಿಸುವ ನಿರೀಕ್ಷೆ ಇದೆ. ಇದರಿಂದ ಸಕ್ಕರೆ ಕಾರ್ಖಾನೆಗಳಿಗೆ ಅಂದಾಜು 25,000 ಕೋಟಿ ರೂ, ಆದಾಯ ಬರಬಹುದು ಎಂದು ಸಚಿವಾಲಯ ಮಾಹಿತಿ ನೀಡಿದೆ.

English summary
The amount of sugar exported by India has increased to 57%, says Union Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X