ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಿದ್ದರಾಮಯ್ಯ ಆರ್ಥಿಕ ನೆರವು
Recommended Video

ಬಾದಾಮಿ, ಜುಲೈ 18: ಬಾದಾಮಿ ಕ್ಷೇತ್ರ ಪರ್ಯಟನೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಾದಾಮಿ ಕ್ಷೇತ್ರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಬಾದಾಮಿ ಕ್ಷೇತ್ರದ ಬಿರನೂರು ಗ್ರಾಮದಲ್ಲಿ ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದ ರೈತ ಮಂಜುನಾಥ ಎಂಬುವರ ಮನೆಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ಅವರ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳುವ ಜೊತೆಗೆ ವೈಯಕ್ತಿಕವಾಗಿ 50000 ಸಾವಿರ ಹಣ ನೀಡಿದ್ದಾರೆ.
ಅಲ್ಲದೆ, ರೈತನ ಕುಟುಂಬಕ್ಕೆ ಬರಬೇಕಾಗಿರುವ ಪರಿಹಾರ ಧನವನ್ನು ಆದಷ್ಟು ಶೀಘ್ರವಾಗಿ ಕೊಡಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆಯನ್ನೂ ನೀಡಿದ್ದಾರೆ.

ತಮ್ಮನ್ನು ಕೈಹಿಡಿದ ಬಾದಾಮಿ ಕ್ಷೇತ್ರಕ್ಕೆ ಎರಡನೇ ಬಾರಿ ಭೇಟಿಗೆ ತೆರಳಿರುವ ಸಿದ್ದರಾಮಯ್ಯ ಅಲ್ಲಿ ಜನಗಳ ಜೊತೆ ಬೆರೆತು ಅವರ ಕಷ್ಟ ಸುಖ ಆಲಿಸುತ್ತಿದ್ದಾರೆ.
ಬೆಳಿಗ್ಗೆ ಬಾದಾಮಿಗೆ ಬಂದ ಅವರು ಮೊದಲಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಸಭೆ ನಡೆಸಿ ಕ್ಷೇತ್ರದಲ್ಲಿ ರಾಜಕೀಯ ಪರಿಸ್ಥಿತಿಯ ಚರ್ಚೆ ಮಾಡಿದರು. ಸನಿಹದಲ್ಲಿರುವ ಲೋಕಸಭೆ ಚುನಾವಣೆಗೆ ತಯಾರಾಗಿರೆಂಬ ಸೂಚನೆಯನ್ನೂ ಅವರು ನೀಡಿದರು.
ಆ ನಂತರ ಜನರ ಅವಹಾಲು ಸ್ವೀಕರಿಸಿದ ಅವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶೀಘ್ರವೇ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆ ನೀಡಿದರು. ಸಿದ್ದರಾಮಯ್ಯ ಅವರು ಈಗಾಗಲೇ ಬಾದಾಮಿಯ ಅಭಿವೃದ್ಧಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರಗಳನ್ನು ಬರೆದಿದ್ದಾರೆ.












Click it and Unblock the Notifications