• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ಪ್ರಗತಿಪರ ರೈತರಿಗೆ 'ಸರಳ ಜೀವನ 'ಮಣ್ಣಿನ ಮಗ ಪ್ರಶಸ್ತಿ ಪ್ರದಾನ

|
Google Oneindia Kannada News

ಬೆಂಗಳೂರು, ನವೆಂಬರ್ 28: ಕನ್ನಡದ ಮೊದಲ ಇನ್‍ಫೋಟೇನ್ಮೆಂಟ್ ಚಾನೆಲ್ ಎನಿಸಿರುವ 'ಸರಳ ಜೀವನ', ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಮಣ್ಣಿನ ಮಗ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.

ಬೆಂಗಳೂರಿನ ಕಾಸಿಯಾ ಸಭಾಂಗಣದಲ್ಲಿ ನಡೆದ ಸುಂದರ ಸಮಾರಂಭದಲ್ಲಿ 10 ಮಂದಿ ಪ್ರಗತಿಪರ ರೈತರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೃಷಿ ಮೇಳ 2018: ಹಲವು ಹೊಸ ಕೃಷಿ ತಳಿಗಳ ಲೋಕಾರ್ಪಣೆಕೃಷಿ ಮೇಳ 2018: ಹಲವು ಹೊಸ ಕೃಷಿ ತಳಿಗಳ ಲೋಕಾರ್ಪಣೆ

ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಶ್ರೀಧಾತ್ರಿ ಡೆವಲಪರ್ಸ್ ಅಂಡ್ ಪ್ರಮೋಟರ್ಸ್ ಪ್ರಾಯೋಜಕತ್ವದಡಿ ನೀಡಲಾಯಿತು. ಈ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಡಿಸೆಂಬರ್ 2 ರಂದು ಸರಳ ಜೀವನ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತದೆ.

ಕೃಷಿ ಕ್ಷೇತ್ರದಲ್ಲಿ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಸಿಜಿ ಪರಿವಾರ್ ರೂಪ್‍ನ ಅಧ್ಯಕ್ಷರಾದ ಡಾ. ಚಂದ್ರಶೇಖರ್ ಗುರೂಜಿ ಅವರು, "ಭಾರತದಲ್ಲಿ ಕೃಷಿ ಕ್ಷೇತ್ರ ಅತಿದೊಡ್ಡ ಕ್ಷೇತ್ರವಾಗಿದ್ದು, ಇಲ್ಲಿ ಶೇ.50 ಕ್ಕೂ ಹೆಚ್ಚು ಉದ್ಯೋಗವನ್ನು ಹೊಂದಲಾಗಿದೆ. ಆದರೆ, ನಾವು ಆವಿಷ್ಕಾರಕ ರೈತರನ್ನು ಗುರುತಿಸುತ್ತಿರುವ ಪ್ರಮಾಣ ಕಡಿಮೆ ಇದೆ.

ಸಂಶೋಧನೆಗಳ ಕುರಿತು ರೈತರಿಗೆ ಅರಿವು ಮೂಡಿಸಬೇಕಿದೆ: ವಜುಭಾಯಿ ವಾಲಾಸಂಶೋಧನೆಗಳ ಕುರಿತು ರೈತರಿಗೆ ಅರಿವು ಮೂಡಿಸಬೇಕಿದೆ: ವಜುಭಾಯಿ ವಾಲಾ

ಈ ನಿಟ್ಟಿನಲ್ಲಿ ನಾವು ಅಂಥ ಕೃಷಿಕರನ್ನು ಗುರುತಿಸಿ ಲಕ್ಷಾಂತರ ಟಿವಿ ವೀಕ್ಷಕರ ಸಮ್ಮುಖದಲ್ಲಿ ಪ್ರಶಸ್ತಿಗಳನ್ನು ನೀಡುತ್ತಿರುವುದು ಸಂತಸದ ವಿಚಾರವಾಗಿದೆ. ಈ ಮೂಲಕ ರೈತರಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸುವುದಲ್ಲದೇ, ಇಂತಹ ರೈತರು ಲಕ್ಷಾಂತರ ಜನರಿಗೆ ಪ್ರೇರಕಶಕ್ತಿಯಾಗಲಿದ್ದಾರೆ'' ಎಂದು ತಿಳಿಸಿದರು.

Saral Jeevan to honour inspiring farmers in Mannina Maga Awards 2018

ಈ ಸಂದರ್ಭದಲ್ಲಿ ಸರಳ ಜೀವನದ ಬಿಸಿನೆಸ್ ಹೆಡ್ ರಘುನಾಥ ರೆಡ್ಡಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು. ಧಾರವಾಡದ ಬಸವರಾಜ, ಬೆಂಗಳೂರಿನ ನಾಗರಾಜ, ದೊಡ್ಡಬಳ್ಳಾಪುರದ ಜಯರಾಮಯ್ಯ, ರಾಯಚೂರಿನ ಕವಿತಾ ಮಿಶ್ರಾ, ಚಿತ್ರದುರ್ಗದ ಹನುಮಂತಪ್ಪ, ವಿಜಯಪುರದ ಬಸಂತರಾಯ, ಕೋಲಾರದ ನಾರಾಯಣಪ್ಪ, ಶ್ರೀರಂಗಪಟ್ಟಣದ ಹರ್ಷವರ್ಧನ, ಮೈಸೂರಿನ ಸುರೇಶ್ ಮತ್ತು ಯಾದಗಿರಿಯ ಮಲ್ಲಿಕಾರ್ಜುನ ಅವರಿಗೆ ಮಣ್ಣಿನ ಮಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

English summary
Saral Jeevan, the 1st infotainment channel in Kannada, is all set to present farmer awards (Mannina Maga / Son of the Soil awards) for some of the most inspiring farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X