ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಯುಕ್ತ ಹೋರಾಟ-ಕರ್ನಾಟಕದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ

|
Google Oneindia Kannada News

ಬೆಂಗಳೂರು, ಜೂನ್ 27: ಕರ್ನಾಟಕದ ಸಂಯುಕ್ತ ಹೋರಾಟ ಸಮಿತಿಯಿಂದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಅವರ ನೇತೃತ್ವದ ರೈತ ಸಂಘಟನೆಯನ್ನು ವಜಾಗೊಳಿಸಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಸೋಮವಾರದಂದು ಘೋಷಿಸಿದೆ.

ಕೇಂದ್ರ, ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾಗಿ ಸಂಯುಕ್ತ ಹೋರಾಟ-ಕರ್ನಾಟಕ ಕಾರ್ಯ ನಿರ್ವಹಿಸುತ್ತಿದೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಅವರ ನೇತೃತ್ವದ ರೈತ ಸಂಘಟನೆಗಳು ಸಂಯುಕ್ತ ಹೋರಾಟ ಒಕ್ಕೂಟದ ಭಾಗವಾಗಿತ್ತು. ಆದರೆ, ಇಂದಿನಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾಗೊಳಿಸಲಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಹೇಳಿದೆ.

ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ತನಿಖೆ ಎದುರಿಸಲಿಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ತನಿಖೆ ಎದುರಿಸಲಿ

ಸೋಮವಾರ(ಜೂನ್ 25) ಸಭೆ ಸೇರಿದ್ದ ಸಂಯುಕ್ತ ಹೋರಾಟ ಕರ್ನಾಟಕ ಸಮನ್ವಯ ಸಮಿತಿ ಈ ಶಿಫಾರಸ್ ಅನ್ನು ಸರ್ವಾನುಮತದಿಂದ ಅಂಗೀಕರಿಸುವ ಮೂಲಕ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಅವರ ನೇತೃತ್ವದ ರೈತ ಸಂಘಟನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ತಿಳಿಸಿದೆ.

ಸಂಯುಕ್ತ ಹೋರಾಟ ಕರ್ನಾಟಕ

ಸಂಯುಕ್ತ ಹೋರಾಟ ಕರ್ನಾಟಕ

ಕೋಡಿಹಳ್ಳಿ ಚಂದ್ರಶೇಖರ್ ಕುರಿತು ಖಾಸಗಿ ಸುದ್ದಿವಾಹಿನಿ ಮಾಡಿದ್ದ ಆರೋಪಗಳ ಬಗ್ಗೆ ಚರ್ಚಿಸಿದ್ದ ಸಂಯುಕ್ತ ಹೋರಾಟ ಕರ್ನಾಟಕದ ಕೋರ್ ಕಮಿಟಿಯು ಆಂತರಿಕ ವಿಚಾರಣಾ ಸಮಿತಿಯನ್ನು ರಚಿಸಿತ್ತು. ಈ ವಿಚಾರಣಾ ಸಮಿತಿ ಆರೋಪಗಳನ್ನು ಪರಿಶೀಲಿಸಿ ಬಿಜೆಪಿ ಪಕ್ಷದ ಕಡೆಯಿಂದ ಬಂದಿದ್ದೇವೆ ಎಂದು ಹೇಳಿಕೊಂಡಿದ್ದ ತಂಡದ ಜೊತೆ ಸತತ ಒಡನಾಟದಲ್ಲಿದ್ದು ಡೀಲಿನ ಅಮಿಷಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಒಳಪಟ್ಟಿರುವುದು ಮತ್ತು ಡೀಲ್ ಒಪ್ಪಿಕೊಂಡಿರುವುದು ತನ್ನ ವಿಚಾರಣೆಯಲ್ಲಿ ಋಜುವಾತಾಗಿದೆ ಹಾಗಾಗಿ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಅವರ ನೇತೃತ್ವದ ರೈತ ಸಂಘಟನೆಯನ್ನು ಈ ಕೂಡಲೇ ಸಂಯುಕ್ತ ಹೋರಾಟ ಕರ್ನಾಟಕದಿಂದ ವಜಾಗೊಳಿಸಬೇಕು ಎಂದು ಶಿಫಾರಸು ಮಾಡಿದೆ

ಚಂದ್ರಶೇಖರ್ ಅವರ ಕೆಲವು ಚಟುವಟಿಕೆಗಳನ್ನು ಬಯಲುಮಾಡಿದೆ

ಚಂದ್ರಶೇಖರ್ ಅವರ ಕೆಲವು ಚಟುವಟಿಕೆಗಳನ್ನು ಬಯಲುಮಾಡಿದೆ

ಇದೀಗ ಖಾಸಗಿ ಸುದ್ದಿ ಚಂದ್ರಶೇಖರ್ ಅವರ ಕೆಲವು ಚಟುವಟಿಕೆಗಳನ್ನು ಬಯಲುಮಾಡಿದೆ. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣವೆನ್ನುವಷ್ಟರಲ್ಲಿ ಸ್ವತಃ ಕೋಡಿಹಳ್ಳಿ ಚಂದ್ರಶೇಖರ್ ಆ ವಿಡಿಯೋದಲ್ಲಿ ಮಾತನಾಡಿರುವುದು ನಾನೇ ಎಂದು ಒಪ್ಪಿಕೊಂಡಿದ್ದಾರೆ. ಇದರಿಂದ ರೈತ ಚಳುವಳಿ ಭಾರಿ ಬೆಲೆ ತೆರಬೇಕಾಗುತ್ತದೆ. ಇದು ರೈತ ಕುಲಕ್ಕೆ ಮಾಡಿರುವ ದೊಡ್ಡ ಅಪಮಾನ. ಪ್ರಾಮಾಣಿಕವಾಗಿ ಬದುಕಿದ ನೇಗಿಲ ಯೋಗಿಯ ಅಂತಃಸಾಕ್ಷಿಯನ್ನು ಕಲಕಿದ ಘಟನೆಯಿದು. ಯಾವಕಾರಣಕ್ಕೂ ಯಾವ ಸನ್ನಿವೇಶದಲ್ಲೂ ಇಂಥ ಘಟನೆಗಳು ಸಂಭವಿಸಬಾರದೆಂಬುದು ನಮ್ಮೆಲ್ಲರ ಅಪೇಕ್ಷೆಯಾಗಿದೆ ಎಂದು ಹೇಳಿದರು.

ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಹಾಗಾಗಿ ಇಂದು ಹಿರಿಯ ಕಿರಿಯ ರೈತ ಮುಖಂಡರು, ರೈತ ಸತ್ಯಾಗ್ರಹಿಗಳು, ರೈತಾಭಿಮಾನಿಗಳು ಮತ್ತು ರೈತರ ಶ್ರೇಯಸ್ಸನ್ನು ಬಯಸುವ ನಾವೆಲ್ಲರೂ ಕೂಡಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ

ರೈತರ ಮೇಲೆ ಎರಗುತ್ತಿರುವ ಘಾತುಕ ಶಕ್ತಿ

ರೈತರ ಮೇಲೆ ಎರಗುತ್ತಿರುವ ಘಾತುಕ ಶಕ್ತಿ

ಯಾವುದೇ ಅಖಂಡ ಸಂಘಟನೆ ಸುಭದ್ರವಾಗಿಯೂ ನ್ಯಾಯಸಮ್ಮತವಾಗಿಯೂ ಇರುತ್ತದೆ. ಅದರೊಳಗೆ ಅವಕಾಶವಾದಿಗಳು ಸೇರಿಕೊಂಡಾಗ ಛಿದ್ರವಾಗುತ್ತದೆ ಮತ್ತು ಅದರೊಳಗೆ ದುಷ್ಟಶಕ್ತಿಗಳು ಬಂದು ಸೇರಿಕೊಳ್ಳುತ್ತವೆ. ಇದು ರೈತ ಚಳುವಳಿಯ ಇತಿಹಾಸಕ್ಕೂ ಸಂಬಂಧಪಟ್ಟ ವಿಷಯ. ಆದ್ದರಿಂದ ಇನ್ನು ಮುಂದೆ ನಾಡಿನ ಸಮಸ್ಥ ರೈತ ಚಳವಳಿಯ ಕಾರ್ಯಕರ್ತರು ವಿಚ್ಛಿದ್ರಕಾರಿ ಶಕ್ತಿಗಳನ್ನು ಹೊರಗಟ್ಟಿಬಂದು ಅಖಂಡ ಕರ್ನಾಟಕ ರಾಜ್ಯದ ರೈತಚಳವಳಿಯನ್ನು ರೂಪಿಸಬೇಕೆಂದು, ರೈತರ ಮೇಲೆ ಎರಗುತ್ತಿರುವ ಘಾತುಕ ಶಕ್ತಿಗಳಿಂದ ರೈತರನ್ನು ಉಳಿಸಿಕೊಡುವ/ಉಳಿಸಿಕೊಳ್ಳುವ ಕೆಲಸ ಮಾಡಬೇಕೆಂದು ಕಳಕಳಿಯ ಮನವಿ ಮಾಡುತ್ತೇವೆ ಎಂದು ಹೇಳಿದರು.

Recommended Video

ನಾನೇ ಅಂತಿದ್ದ ಗಾಯಕ್ವಾಡ್ ಗೆ ಪಾಠ ಕಲಿಸಿದ ಪಾಂಡ್ಯ | *Cricket | OneIndia Kannada
ರೈತ ಸಂಘದಿಂದಲೂ ವಜಾ

ರೈತ ಸಂಘದಿಂದಲೂ ವಜಾ

ಕರ್ನಾಟಕದಲ್ಲಿ ರೈತ ಮುಖಂಡರೆನಿಸಿಕೊಂಡ ಕೋಡಿಹಳ್ಳಿ ಚಂದ್ರಶೇಖರ್ ಹಣವನ್ನು ಪಡೆದು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ಪ್ರತಿಭಟನೆಯನ್ನು ಕೈಬಿಟ್ಟಿದ್ದರು ಎಂಬುದರ ಬಗ್ಗೆ ಖಾಸಗಿ ಸುದ್ದಿವಾಹಿನಿ ಸ್ಟಿಂಗ್ ಮಾಡಿ ಸುದ್ದಿಯನ್ನು ಪ್ರಸಾರ ಮಾಡಿತ್ತು. ಇದೀಗ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯಿಂದ ಕೋಡಿಹಳ್ಳಿ ಚಂದ್ರಶೇಖರ್‌ರನ್ನು ವಜಾ ಮಾಡಿ ಸಂಘಟನೆಯ ನೂತನ ಅಧ್ಯಕ್ಷರನ್ನಾಗಿ ಎಚ್.ಆರ್. ಬಸವರಾಜಪ್ಪ ಅವರನ್ನು ಆಯ್ಕೆ ಮಾಡಿದೆ.

ರಾಜ್ಯ ರೈತ ಸಂಘದ ಸಂಸ್ಥಾಪಕರಾದ ಎಚ್ ಎಸ್ ರುದ್ರಪ್ಪ. ಪ್ರೋ ಎಂ.ಡಿ ನಂಜುಂಡ ಸ್ವಾಮಿ, ಎನ್ ಡಿ ಸುಂದರೇಶ್, ಕಡಿದಾಳ್ ಶಾಮಣ್ಣ, ಡಾ. ಬಿಎಂ ಚಿಕ್ಕಸ್ವಾಮಿ ಇವರೊಡನೆ ಸಂಸ್ಥಾಪಕರಲ್ಲಿ ಒಬ್ಬರಾದ ಎಚ್.ಆರ್. ಬಸವರಾಜಪ್ಪ ಅವರನ್ನು ರೈತ ಸಂಘ ರಾಜ್ಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

English summary
Samyukta Horata, Karnataka has officially sacked Farmer leader Kodihalli Chandrashekar and all his associations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X