ಕಬ್ಬು ಬೆಳೆಗಾರರಿಗೆ 19 ಸಾವಿರ ಕೋಟಿ ಬಿಲ್ ಪಾವತಿ: ಶಂಕರ್ ಪಾಟೀಲ್
ಬೆಂಗಳೂರು, ಜೂ. 10: 2021-22 ನೇ ಸಾಲಿನಲ್ಲಿ ಕಬ್ಬು ಬೆಳೆಗಾರರಿಗೆ 19,253.12 ಕೋಟಿ ರೂ. ಬಿಲ್ ಪಾವತಿ ಮಾಡಲಾಗಿದೆ. 24 ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ 381 ಕೋಟಿ ರೂ. ಮೊತ್ತವನ್ನು ಶೀಘ್ರದಲ್ಲಿಯೇ ಪಾವತಿ ಮಾಡಲು ಕ್ರಮ ಜರುಗಿಸಲಾಗುವುದು ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ್ ಪಾಟೀಲ್ ಬಿ. ಮುನೇನಕೊಪ್ಪ ಅವರು ತಿಳಿಸಿದ್ದಾರೆ.
ಕಬ್ಬು ಬೆಳೆ ಉತ್ಪಾದನೆ ಹಾಗೂ ರೈತರಿಗೆ ಬಾಕಿ ಮೊತ್ತ ಪಾವತಿ ಸಂಬಂಧ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಸಚಿವರು, 2021-22ನೇ ಸಾಲಿನಲ್ಲಿ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸಕ್ಕರೆ ಸಕ್ಕರೆ ಕಾರ್ಖಾನೆಗಳು 622. 26 ಲಕ್ಷ ಮೆಟ್ರಿಕ್ ಟನ್ ಕಬ್ಬುನ್ನು ಅರೆದಿವೆ. ಒಟ್ಟು 59-78 ಲಕ್ಷ ಮೆಟ್ರಿಕ ಟನ್ ಸಕ್ಕರೆ ಉತ್ಪಾದಿಸಿವೆ. ಕಬ್ಬು ಬೆಳೆಗಾರರಿಗೆ ರೂ.19,253.12 ಕೋಟಿ ರೂ. ಬಿಲ್ ಪಾವತಿ ಮಾಡಿಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿ ಮುನ್ನ ಸಚಿವರ ಅಧ್ಯಕ್ಷತೆಯಲ್ಲಿ ಕಬ್ಬು ನಿಯಂತ್ರಣ ಮಂಡಳಿ ಸಭೆ ನಡೆಸಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಪಾವತಿಯಾಗಬೇಕಿರುವ ಬಾಕಿ ಮೊತ್ತ ಹಾಗೂ ಸಕ್ಕರೆ ಇಲಾಖೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದರು.

ಬಾಕಿ ಪಾವತಿಸದಿದ್ದರೆ ಜಿಲ್ಲಾಧಿಕಾರಿಗಳಿಂದ ವಸೂಲಿ:
2021 -22 ನೇ ಹಂಗಾಮಿನಲ್ಲಿ ದಿನಾಂಕ ಏಪ್ರಿಲ್ 2022ರ ಅಂತ್ಯಕ್ಕೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ರೂ. 2389.94 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದವು. ಒಂದು ತಿಂಗಳೊಳಗೆ ಬಾಕಿ ಮೊತ್ತ ಪಾವತಿಗೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಗುಡುವು ನೀಡಲಾಗಿತ್ತು. ಬಹುತೇಕ ಕಾರ್ಖಾನೆಗಳು ಪಾವತಿ ಮಾಡಿದ್ದು, ಇದೀಗ 24 ಸಕ್ಕರೆ ಕಾರ್ಖಾನೆಗಳು 381 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಉಳಿದ ಮೊತ್ತವನ್ನು ಶೀಘ್ರದಲ್ಲಿ ಪಾವತಿಸುವಂತೆ ಸೂಚನೆ ನೀಡಲಾಗಿದೆ ಎಂದು ಶಂಕರ ಪಾಟೀಲ್ ತಿಳಿಸಿದರು.
ಸಕ್ಕರೆ ಕಾರ್ಖಾನೆಗಳು ಕಾಲಮಿತಿಯಲ್ಲಿ ಬಾಕಿ ಮೊತ್ತ ಪಾವತಿ ಮಾಡಲು ವಿಫಲವಾದಲ್ಲಿ, ಕಬ್ಬು ನಿಯಂತ್ರಣ ಆದೇಶ 1966 ರ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಧಿಕಾರಿಗಳಿಗೆ ವಸೂಲಾತಿ ದೃಢೀಕರಣ ಪತ್ರ ನೀಡಿ ಕಬ್ಬು ಬಿಲ್ಲು ಬಾಕಿ ಮೊತ್ತ ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಾತಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಉತ್ಪಾದನೆಯಗುತ್ತಿರುವ ಸಕ್ಕರೆ ಪ್ರಮಾಣ:
ರಾಜ್ಯದಲ್ಲಿ ಒಟ್ಟು 89 ನೊಂದಾಯಿತ ಸಕ್ಕರೆ ಕಾರ್ಖಾನೆಗಳಿವೆ. ಅವುಗಳ ಪೈಕಿ ಪ್ರಸ್ತುತ 72 ಸಕ್ಕರೆ ಕಾರ್ಖಾನೆಗಳು ಕಾರ್ಯನಿರತವಾಗಿದೆ. 2021-22ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ದಿನಾಂಕ.31.05.2022ರ ಅಂತ್ಯಕ್ಕೆ ಇದ್ದಂತೆ 622.26 ಲಕ್ಷ ಮೆಟ್ರಿಕ ಟನ್ ಕಬ್ಬುನ್ನು ಅರೆದು, 59.78 ಲಕ್ಷ ಮೆಟ್ರಿಕ ಟನ್ ಸಕ್ಕರೆ ಉತ್ಪಾದಿಸಿ, ಶೇಕಡ 9.61ರಷ್ಟು ಸಕ್ಕರೆ ಇಳುವರಿ ಪಡೆದಿವೆ.

ಶೇ. 99 ರಷ್ಟು ಕಬ್ಬು ಬೆಳೆಗಾರರಿಗೆ ಪಾವತಿ
ಪ್ರಸ್ತುತ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ದಿನಾಂಕ.31.05.2022ರ ಅಂತ್ಯಕ್ಕೆ ಇದ್ದಂತೆ ಪಾವತಿಸಬೇಕಾದ ಕಬ್ಬು ಬಿಲ್ ಮೊತ್ತ ರೂ.19,634.84 ಕೋಟಿ ರೂ. ಈ ಪೈಕಿ ರೂ.19,427.13 ಕೋಟಿ ರೂ. ಪಾವತಿಯಾಗಿದೆ. ಬಾಕಿ ಮೊತ್ತ ರೂ.381.72 ಕೋಟಿ ರೂ. ಇದ್ದು, ಪಾವತಿ ಪ್ರಮಾಣ ಶೇ. ರಷ್ಟು ಅಗಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಬಾಕಿ ಇಲ್ಲದಂತೆ ಬಿಲ್ ಪಾವತಿ ಮಾಡಲಾಗಿರುತ್ತದೆ. ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಿಗೆ ದಿನಾಂಕ.14.01.2022 ಮತ್ತು 20.04.2022ರಂದು ಶಾಸನಬದ್ಧ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೆ ದಿನಾಂಕ.11.05.2022 ರಂದು ಮಾನ್ಯ ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಎಲ್ಲಾ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿ, ಬಾಕಿ ಬಿಲ್ ಪಾವತಿಸುವಂತೆ ನಿರ್ದೇಶನ ನೀಡಲಾಗಿದೆ.

ಮೈಸೂರು ಸಕ್ಕರೆ ಕಾರ್ಖಾನೆ ಮರು ಪ್ರಾರಂಭಕ್ಕೆ ಚಿಂತನೆ:
ಕಳೆದ ಹಂಗಾಮಿಗೆ ಹೋಲಿಸಿದ್ದಲ್ಲಿ, ಪ್ರಸ್ತಕ ಹಂಗಾಮಿನಲ್ಲಿ 181.42 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಕಬ್ಬುನ್ನು ನುರಿಸಿದ್ದು, ಸಕ್ಕರೆ ಉತ್ಪಾದನೆ ಪ್ರಮಾಣವು 16.84 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ ಮೈಸೂರು ಸಕ್ಕರೆ ಕಂಪನಿಯನ್ನು ಕಬ್ಬು ಬೆಳಗಾರರ ಹಿತದೃಷ್ಟಿಯಿಂದ ಪುನಶ್ಚೇತನಗೊಳಿಸಲು ತೀರ್ಮಾನಿಸಲಾಗಿದೆ. ಸರ್ಕಾರವು 2022-23ನೇ ಸಾಲಿನ ಆಯವ್ಯಯದಲ್ಲಿ ರೂ.50 ಕೋಟಿ ಅನುದಾನ ಕಲ್ಪಿಸಿಸಿದೆ. ಕಾರ್ಖಾನೆ ಯಂತ್ರೋಪಕರಣ ದುರಸ್ಥಿ, ಒವರ್ ಹಾಲಿಂಗ್ ಮತ್ತು ಇನ್ನಿತರ ಕಾರ್ಯಗಳಿಗಾಗಿ ರೂ.375.00 ಲಕ್ಷ ರೂ. ಸರ್ಕಾರವು ಈಗಾಗಲೇ ಮಂಜೂರು ಮಾಡಿ ಬಿಡುಗಡೆ ಮಾಡಿರುತ್ತದೆ. ಮುಂದಿನ ಜೈಲೈನಿಂದ ಮೈಸೂರು ಸಕ್ಕರೆ ಕಾರ್ಖಾನೆ ಕಾರ್ಯಾರಂಭ ಮಾಡಲಿದೆ.

32 ಸಕ್ಕರೆ ಕಾರ್ಖಾನೆಗಳಿಂದ ಎಥೆನಾಲ್ :
ಕೇಂದ್ರ ಸರ್ಕಾರ ಘೋಷಿಸಿರುವ ಎಥೆನಾಲ್ ನ್ನು ಪೆಟ್ರೋಲ್ ನೊಂದಿಗೆ ಮಿಶ್ರಣ ಯೋಜನೆಯಂತೆ 2025ರೊಳಗಾಗಿ ಶೇ. 20 ರಷ್ಟು ಪೆಟ್ರೋಲ್ ನೊಂದಿಗೆ ಮಿಶ್ರಣ ಮಾಡಬೇಕೆಂದು ಯೋಜನೆ ರೂಪಿಸಿದೆ. ಈ ಯೋಜನೆಯನ್ನು ಪ್ರೋತ್ಸಾಹಿಸಲು ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿ ಘಟಕಗಳಿಗೆ ಬಡ್ಡಿ ವಿನಾಯಿತಿ ಯೋಜನೆ ಜಾರಿಗೊಳಿಸಿರುತ್ತದೆ. ಅದರಂತೆ ಶೇಕಡ 6ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಅಥವಾ ಶೇಕಡ 50ರ ಸಾಲದ ಬಡ್ಡಿ ಮೊತ್ತ ಈ ಎರಡರಲ್ಲಿ ಯಾವುದೊ ಕಡಿಮೆಯೋ ಅದರ ಆರ್ಥಿಕ ಅವಕಾಶಗಳನ್ನು ಪಡೆಯಲು ಕಾರ್ಖಾನೆಗಳಿಗೆ ಕಲ್ಪಿಸಿರುತ್ತದೆ. ಪ್ರಸಕ್ತ ರಾಜ್ಯದಲ್ಲಿ 32 ಸಕ್ಕರೆ ಕಾರ್ಖಾನೆಗಳು ಎಥನಾಲ್ ಉತ್ಪಾದಿಸುತ್ತಿವೆ. ಇದಲ್ಲದೆ ಹೊಸದಾಗಿ ಎಥನಾಲ್ ತಯಾರಿಕೆ ಸಾಮರ್ಥ್ಯ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ 68 ಘಟಕಗಳು ತಾತ್ವಿಕ ಅನುಮೋದನೆಯನ್ನು ಪಡೆದಿರುತ್ತವೆ. ಎಥೆನಾಲ್ ಉತ್ಪಾದನೆಗೆ ಪ್ರೊತ್ಸಾಹ ನೀಡಲು ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ರಚಿಸಲಾಗಿದೆ.












Click it and Unblock the Notifications